South Korea Plane Crash: 181ರಲ್ಲಿ 179 ಜನರ ಸಾವು, ಆ ಇಬ್ಬರು ಬದುಕಿದ್ದೇಗೆ? ಪೈಲಟ್ ತಪ್ಪು ಮಾಡಿದ್ದೆಲ್ಲಿ? 

ದಕ್ಷಿಣ ಕೊರಿಯಾದ ಮುವಾನ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ Jeju Air Flight-2216 ವಿಮಾನ ಪತನಗೊಂಡು 179 ಜನರು ಮೃತಪಟ್ಟಿದ್ದಾರೆ. ವಿಮಾನ ರನ್‌ವೇಯಿಂದ ಸ್ಕಿಡ್ ಆಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಕೇವಲ ಇಬ್ಬರು ಮಾತ್ರ ಬದುಕುಳಿದಿದ್ದಾರೆ.

South Korea plane crash 179 passengers confirmed dead out of 181 mrq

ಸಿಯೋಲ್: ದಕ್ಷಿಣ ಕೊರಿಯಾದ ಪ್ರಯಾಣಿಕರ ವಿಮಾನ ಪತನಗೊಂಡಿದ್ದು,  181ರಲ್ಲಿ ಇಬ್ಬರು ಮಾತ್ರ  ಬಾಕಿ ಉಳಿದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.  ಆದ್ರೆ ಅಧಿಕೃತ ಮಾಹಿತಿ ಪ್ರಕಾರ,  176 ಜನರು ಮೃತಪಟ್ಟಿದ್ದು, ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಇಂದು ಬೆಳಗ್ಗೆ  ನಡೆದ ವಿಮಾನ ದುರಂತದ ವಿಡಿಯೋ ಕಂಡು ಇಡೀ ವಿಶ್ವವೇ ಆತಂಕಕ್ಕೊಳಗಾಗಿದ್ದು, 179 ಜನರ ಸಾವಿಗೆ ಕಂಬನಿ ಮಿಡಿದಿದೆ. ಈ ದುರಂತ ಸಂಪೂರ್ಣ ಹೊಣೆಗಾರಿಕೆಯನ್ನು ತಾವೇ ತೆಗೆದುಕೊಳ್ಳುವದಾಗಿ ಜೆಜು ಏರ್‌ವೇಸ್‌ನ ಸಿಇಓ ಕಿಮ್ ಇ-ಬೇಜ್ ಹೇಳಿದ್ದಾರೆ. 

Jeju Airways ಪ್ರಯಾಣಿಕರಲ್ಲಿ ಕ್ಷಮೆ ಕೇಳಿರುವ ಕಿಮ್ ಇ-ಬೇಜ್, 179 ಜನರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ದುರಂತಕ್ಕೆ ಕಾರಣ ಏನೇ ಇರಲಿ. ಕಂಪನಿಯ ಸಿಇಒ ಆಗಿ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ರನ್‌ವೇಯಿಂದ ಸ್ಕಿಡ್ ಆಗಿರುವ  ಸಾಧ್ಯತೆಗಳಿವೆ. ಈ ಸಂಬಂಧ ಎಲ್ಲಾ ಆಯಾಮದಲ್ಲಿಯೂ ತನಿಖೆ  ನಡೆಸಲಾಗುತ್ತಿದೆ ಎಂದು ಕಿಮ್ ತಿಳಿಸಿದ್ದಾರೆ.  ಲ್ಯಾಂಡಿಂಗ್ ವೇಳೆ ಯಾವುದಾದರೂ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆಯಾ ಎಂಬುದರ ಬಗ್ಗೆ  ಅನುಮಾನಗಳು ವ್ಯಕ್ತವಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಈ ವಿಮಾನ ಪತನದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ  ಕೆಲ ವಿಡಿಯೋಗಳು ವೈರಲ್ ಆಗುತ್ತಿದೆ. ವಿಮಾನ ನಿಯಂತ್ರಣ ತಪ್ಪುತ್ತಿರೋದು ತಿಳಿಯುತ್ತಲೇ ಪೈಲಟ್ ಅಲರ್ಟ್ ಆಗಿ ಮ್ಯಾನುಯುಲ್ ಗೇರ್ ಎಳೆಯಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಇದು ಎಷ್ಟು ಸರಿ ಎಂಬುದನ್ನು ತಾಂತ್ರಿಕ ತಜ್ಞರು ಖಚಿತಪಡಿಸಬೇಕಿದೆ. 

ಈ ಘಟನೆ ಕುರಿತು ಸ್ಥಳೀಯ ಸುದ್ದಿ ಸಂಸ್ಥೆ ಮಾತನಾಡಿರುವ ಅಗ್ನಿಶಾಮಕದಳದ ಸಿಬ್ಬಂದಿ, ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ. ಶವಗಳನ್ನು ಗುರುತಿಸೋದು ಕಷ್ಟವಾಗಿದೆ.  ಸದ್ಯ 167 ಶವಗಳನ್ನು ಹೊರ ತೆಗೆಯಲಾಗಿದ್ದು, ಇವುಗಳನ್ನು ಇರಿಸಲು ತಾತ್ಕಾಲಿಕ ಶವಾಗಾರಗಳನ್ನು ತೆಗೆಯಲಾಗಿದೆ. ಒಂದು ವಿಮಾನ ಗೋಡೆಗೆ ಡಿಕ್ಕಿಯಾದ ನಂತರ ಬೆಂಕಿ ಕಾಣಿಸಿಕೊಳ್ಳದಿದ್ದರೆ, ಹಿಂಬಾಗಿಲಿನಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಬಹುದಿತ್ತು. ಆದರೆ  ಬೆಂಕಿಯ ತೀವ್ರತೆ ಅಧಿಕವಾಗಿತ್ತು ಎಂದು ಹೇಳಿದ್ದಾರೆ. 

ವಿಮಾನ ಪತನವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಎಮೆರ್ಜೆನ್ಸಿ ಸಿಬ್ಬಂದಿಯಿಂದಲೇ ಇಬ್ಬರ ಜೀವ ಉಳಿದಿದೆ ಎಂದು ವರದಿಯಾಗಿದೆ. ಇದರಲ್ಲಿ ಒಬ್ಬರು ಸಿಬ್ಬಂದಿ, ಮತ್ತೊಬ್ಬರು ಪ್ರಯಾಣಿಕರು ಎಂದು ಹೇಳಲಾಗುತ್ತಿದ್ದು, ಇಬ್ಬರ ಹೆಸರನ್ನು ಬಹಿರಂಗಪಡಿಸಿಲ್ಲ, 

ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ದಕ್ಷಿಣ ಕೊರಿಯಾದ ಮುವಾನ್ ನಿಲ್ದಾಣದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಈ ವಿಮಾನದಲ್ಲಿ 6 ಸಿಬ್ಬಂದಿ ಸೇರಿದಂತೆ 181 ಜನರು ಪ್ರಯಾಣಿಸುತ್ತಿದ್ದಾರೆ.  ವಿಮಾನ ರನ್‌ವೇಯಿಂದ ಸ್ಕಿಡ್ ಆಗಿದ್ದರಿಂದ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ. ಬ್ಯಾಂಕಾಕ್‌ನಿಂದ  Jeju Air Flight-2216 ವಿಮಾನ 175 ಪ್ರಯಾಣಿಕರನ್ನು ಹೊತ್ತು ದಕ್ಷಿಣ  ಕೊರಿಯಾದ  ಜಿಯೊಲ್ಲಾ ಪ್ರಾಂತ್ಯದ ಕರಾವಳಿ ಭಾಗದಲ್ಲಿರುವ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಆದ್ರೆ ರನ್‌ವೇಯಿಂದ ಇಳಿದು ಪತನಗೊಂಡಿತ್ತು. 

Latest Videos
Follow Us:
Download App:
  • android
  • ios