ವಿಮಾನ ಪತನ; ಸಾವಿನ ಸಂಖ್ಯೆ 120ಕ್ಕೆ ಏರಿಕೆ, 181 ಜನರಲ್ಲಿ ಜೀವಂತವಾಗಿ ಸಿಕ್ಕಿದ್ದು ಇಬ್ಬರು ಮಾತ್ರ, ಇನ್ನುಳಿದವರಿಗಾಗಿ ಹುಡುಕಾಟ

ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ Jeju Air Flight-2216 ಪತನಗೊಂಡು 121 ಜನರು ಸಾವನ್ನಪ್ಪಿದ್ದಾರೆ. 181 ಪ್ರಯಾಣಿಕರ ಪೈಕಿ ಇಬ್ಬರು ಮಾತ್ರ ಜೀವಂತವಾಗಿ ಪತ್ತೆಯಾಗಿದ್ದಾರೆ. ರನ್‌ವೇಯಿಂದ ವಿಮಾನ ಸ್ಕಿಡ್ ಆಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.

South Korea plane crash 120 killed as Jeju aircraft landing gear malfunctioned mrq

ದಕ್ಷಿಣ  ಕೊರಿಯಾ: ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ದಕ್ಷಿಣ ಕೊರಿಯಾದ ಮುವಾನ್ ನಿಲ್ದಾಣದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಈ ವಿಮಾನದಲ್ಲಿ 6 ಸಿಬ್ಬಂದಿ ಸೇರಿದಂತೆ 181 ಜನರು ಪ್ರಯಾಣಿಸುತ್ತಿದ್ದಾರೆ.  ವಿಮಾನ ರನ್‌ವೇಯಿಂದ ಸ್ಕಿಡ್ ಆಗಿದ್ದರಿಂದ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ. ಬ್ಯಾಂಕಾಕ್‌ನಿಂದ  Jeju Air Flight-2216 ವಿಮಾನ 175 ಪ್ರಯಾಣಿಕರನ್ನು ಹೊತ್ತು ದಕ್ಷಿಣ  ಕೊರಿಯಾದ  ಜಿಯೊಲ್ಲಾ ಪ್ರಾಂತ್ಯದ ಕರಾವಳಿ ಭಾಗದಲ್ಲಿರುವ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಆದ್ರೆ ರನ್‌ವೇಯಿಂದ ಇಳಿದು ಪತನಗೊಂಡಿತ್ತು. 
 
ವಿಮಾನ ರನ್‌ವೇಯಿಂದ ಕೆಳಗೆ ಇಳಿಯುತ್ತಿದ್ದಂತೆ ಮುಂಭಾಗದ ಕಾಕ್‌ಪಿಟ್ ಸ್ಫೋಟಗೊಂಡಿತ್ತು. ಹಿಂಭಾಗದ ಅಂದ್ರೆ ಟೇಲ್‌ನಲ್ಲಿರುವ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರಬಹುದು ಎಂದು ಊಹಿಸಲಾಗಿತ್ತು. ಆದ್ರೆ ಸಾವಿನ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಲಿದೆ. ವಿಮಾನ ಪತನವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಎಮೆರ್ಜೆನ್ಸಿ ವರ್ಕರ್ಸ್, ಇಬ್ಬರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಇಬ್ಬರಲ್ಲಿ ಒಬ್ಬರು ಪ್ರಯಾಣಿಕ ಮತ್ತು ಮತ್ತೋರ್ವ ಸಿಬ್ಬಂದಿ ಎಂದು ತಿಳಿದು ಬಂದಿದೆ. 

ಸದ್ಯ ಸ್ಥಳದಲ್ಲಿ 32 ಅಗ್ನಿಶಾಮಕದಳ ವಾಹನಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಕೊಂಡಿವೆ. ವಿಮಾನ ಪತನವಾಗುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ವಿಮಾನದ ಲ್ಯಾಂಡಿಂಗ್ ಗೇರ್ ಕಾರ್ಯನಿರ್ವಹಿಸದ ಹಿನ್ನೆಲೆ ದುರಂತ ಸಂಭವಿಸಿರುವ ಸಾಧ್ಯತೆಗಳಿವೆ. ಆದ್ರೆ ಯಾಕೆ ಬೆಂಕಿ ಹತ್ತಿಕೊಂಡಿತ್ತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ಸಂಬಂಧ ತಜ್ಞರು ಮತ್ತು ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಬ್ಯಾಂಕಾಕ್‌ನಿಂದ ಹಿಂದಿರುಗುತ್ತಿದ್ದ ಈ ವಿಮಾನದಲ್ಲಿ ಥೈಲ್ಯಾಂಡ್‌ನ ಇಬ್ಬರು ಪ್ರಯಾಣಿಕರಿದ್ದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Breaking: ಅಜೆರ್ಬೈಜಾನ್ ವಿಮಾನ ದುರಂತಕ್ಕೆ ರಷ್ಯಾ ಕಾರಣ, ಕ್ಷಮೆ ಕೇಳಿದ ವ್ಲಾಡಿಮಿರ್‌ ಪುಟಿನ್‌

ದಕ್ಷಿಣ ಕೊರಿಯಾದ ವಾಯುಯಾನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. 1997 ರಲ್ಲಿ ಕೊರಿಯನ್ ಏರ್‌ಲೈನ್ ವಿಮಾನವು ಗುವಾಮ್‌ನಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ 228 ಜನರು ಮೃತರಾಗಿದ್ದರು.

ಇದನ್ನೂ ಓದಿ: ವಿಮಾನ ಪತನಕ್ಕೂ ಮುನ್ನ ಪ್ರಯಾಣಿಕರ ಪ್ರಾರ್ಥನೆ ವಿಡಿಯೋ ಸೆರೆ, ದುರಂತ ಘಟನೆಯ ಚಿತ್ರಣ!

Latest Videos
Follow Us:
Download App:
  • android
  • ios