Asianet Suvarna News Asianet Suvarna News

Omicron Varient: ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ, ಇದು ಮಾರಣಾಂತಿಕವಲ್ಲ: ತಜ್ಞರು

* ಓಮಿಕ್ರೋನ್‌ ಬಗ್ಗೆ ಗಾಬರಿ ಬೇಡ: ತಜ್ಞರು

* ಲಸಿಕೆ ಪರಿಣಾಮ ಬೀರಬಹುದು: ಬ್ರಿಟನ್‌ ಆರೋಗ್ಯ ಸಲಹೆಗಾರ

* ಹಲವರು ಈ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸುತ್ತಿದ್ದಾರೆ

* ಸೀನು, ತಲೆನೋವು, ನೆಗಡಿ ಕಾಣಿಸಿಕೊಳ್ಳಬಹುದು, ಆದರೆ ಇದು ಮಾರಣಾಂತಿಕವಲ್ಲ

South African medical association says Omicron variant causes mild disease pod
Author
Bangalore, First Published Nov 28, 2021, 4:30 AM IST

ಲಂಡನ್‌(ನ.28): ‘ಅತ್ಯಂತ ವೇಗವಾಗಿ ಹಬ್ಬುವ ಅಪಾಯಕಾರಿ ವೈರಸ್‌ ಎಂದು ಬಣ್ಣಿತವವಾಗಿರುವ ಹೊಸ ಒಮಿಕ್ರೋನ್‌ ರೂಪಾಂತರಿಯ (Omicron Varient) ಬಗ್ಗೆ ಗಾಬರಿ ಪಡುವ ಅಗತ್ಯವಿಲ್ಲ. ಕೋವಿಡ್‌ ಲಸಿಕೆಗಳು (Covid Vaccines) ಈ ರೂಪಾಂತರಿಯ ಮೇಲೆ ಪ್ರಭಾವ ಬೀರಬಹುದು’ ಎಂದು ಬ್ರಿಟನ್‌ ಸರ್ಕಾರದ (Britain Govt) ಆರೋಗ್ಯ ಸಲಹೆಗಾರ ಕಾಲಮ್‌ ಸೆಂಪಲ್‌ ಶನಿವಾರ ಹೇಳಿದ್ದಾರೆ. ‘ಈ ವೈರಸ್‌ ಕುರಿತು ಹೆಚ್ಚಿನ ಗಾಬರಿ ಪಡಬೇಕಾಗಿಲ್ಲ. ಆದರೆ ದಕ್ಷಿಣ ಆಫ್ರಿಕಾದಲ್ಲಿ (South Africa) ಕಾಣಿಸಿಕೊಂಡಿರುವ ಈ ಹೊಸ ರೂಪಾಂತರಿ ಹೆಚ್ಚಿನ ಹಾನಿ ಉಂಟುಮಾಡುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಅವರೆಲ್ಲರೂ ಪರಿಸ್ಥಿತಿಯನ್ನು ಉತ್ಪ್ರೇಕ್ಷಿಸುತ್ತಿದ್ದಾರೆ. ಈಗಾಗಲೇ ಪಡೆದಿರುವ ಕೋವಿಡ್‌ ಲಸಿಕೆ ನಿಮ್ಮನ್ನು ಹೊಸ ರೂಪಾಂತರಿ ಇಂದ ರಕ್ಷಿಸಲಿದೆ. ಇದರಿಂದ ಸೀನು, ತಲೆನೋವು ಹಾಗೂ ಅತಿಯಾದ ನೆಗಡಿ ಕಾಣಿಸಿಕೊಳ್ಳಬಹುದು. ಆದರೆ ಆಸ್ಪತ್ರೆಗೆ ದಾಖಲಾಗುವ ಅಥವಾ ಐಸಿಯು ಸೇರುವ ಹಾಗೂ ಸಾವಿಗೀಡಾಗುವ ಸಾಧ್ಯತೆ ಉಂಟಾಗದಂತೆ ಲಸಿಕೆ ರಕ್ಷಣೆ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.

‘ಓಮಿಕ್ರೋನ್‌ (Omicron) ಬ್ರಿಟನ್‌ ತಲುಪುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಆ ಪ್ರಕ್ರಿಯೆಯನ್ನು ತಡವಾಗಿಸಬಹುದು. ತಡ ಮಾಡಿದರೆ ಜನರಿಗೆ ಬೂಸ್ಟರ್‌ ಡೋಸ್‌ ನೀಡಲು ಸರ್ಕಾರದ ಬಳಿ ಸಮಯ ಉಳಿದಿರುತ್ತದೆ. ಈಗಾಗಲೇ ವೈರಸ್‌ ವಿರುದ್ಧ ವಿಜ್ಞಾನಿಗಳು ಬಹಳಷ್ಟುಅಧ್ಯಯನ ನಡೆಸಿದ್ದಾರೆ. ಹಾಗಾಗಿ ಭಯಪಡುವ ಅಗತ್ಯವಿಲ್ಲ’ ಎಂದು ಸೆಂಪೆಲ್‌ ಹೇಳಿದ್ದಾರೆ.

ಓಮಿಕ್ರೋನ್‌ ರೂಪಾಂತರಿಯನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಬುಧವಾರ ಗುರುತಿಸಲಾಯಿತು. ಹಾಗಾಗಿ ಹಲವು ದೇಶಗಳು ದಕ್ಷಿಣ ಆಫ್ರಿಕಾದ ಹಲವು ದೇಶಗಳ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿವೆ. ಬ್ರಿಟನ್‌ ಸಹ ದಕ್ಷಿಣ ಆಫ್ರಿಕಾ, ಬೋಟ್ಸಾನ, ಲೆಸೊತೊ, ಎಸ್ವಾತಿನಿ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಿಗೆ ನಿರ್ಬಂಧ ವಿಧಿಸಿದೆ.

ಕೋವಿಡ್‌ ನಿಯಮ ಮೀರಿದರೆ ‘ಮಹಾ ದಂಡ’!

 

ಲಸಿಕೆಗೂ ಬಗ್ಗದ ಮತ್ತು ತೀವ್ರವಾಗಿ ಹಬ್ಬುವ ಸಾಮರ್ಥ್ಯದ ‘ಒಮಿಕ್ರೋನ್‌’ ರೂಪಾಂತರಿ ತಳಿಯ ಆತಂಕಗಳ ಬೆನ್ನಲ್ಲೇ, ಕೊರೋನಾ ನಿಯಂತ್ರಣದ ನಿಯಮಾವಳಿಗಳನ್ನು ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ಈ ಕುರಿತಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸುವ ವ್ಯಕ್ತಿಗೆ 500 ರು. ದಂಡ ವಿಧಿಸಲಾಗುತ್ತದೆ ಎಂದು ಘೋಷಿಸಿದೆ. ಅಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಸೇವೆ ಬಳಸಲು ಎರಡೂ ಡೋಸ್‌ ಲಸಿಕೆ ಪಡೆದ ಪ್ರಮಾಣಪತ್ರ ಕಡ್ಡಾಯ. ಮಾಲ್‌ಗಳ ಸಿಬ್ಬಂದಿ, ಖರೀದಿಗೆ ಬರುವ ಗ್ರಾಹಕರು ಸೇರಿದಂತೆ ಇನ್ನಿತರರು ಲಸಿಕೆ ಪ್ರಮಾಣಪತ್ರ ಪಡೆದಿರಲೇಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಯಾರಿಗೆ, ಎಷ್ಟು ದಂಡ?

- ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ನಿಯಮ ಉಲ್ಲಂಘಿಸಿದರೆ 500 ರು. ದಂಡ

- ಸಂಸ್ಥೆಯ ಆವರಣದಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸುವ ವ್ಯಕ್ತಿಗೆ 10000 ರು.

- ಮಾರ್ಗಸೂಚಿ ಪಾಲನೆಯಲ್ಲಿ ವಿಫಲವಾದ ಕಂಪನಿಗೆ 50 ಸಾವಿರ ರು.

- ಖಾಸಗಿ ಟ್ಯಾಕ್ಸಿಗಳು, ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಉಲ್ಲಂಘಿಸಿದರೆ 500 ರು.

- ವಾಹನ ಮಾಲೀಕರಿಂದಲೇ ನಿಯಮ ಉಲ್ಲಂಘನೆಯಾದರೆ 10,000 ರು.

ಅತ್ಯಂತ ಎಚ್ಚರಿಕೆ ವಹಿಸಿ: ಪ್ರಧಾನಿ ಮೋದಿ ಸೂಚನೆ

 

ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡಲು ಕಾರಣವಾಯಿತೆನ್ನಲಾಗಿರುವ ಡೆಲ್ಟಾವೈರಸ್‌ಗಿಂತಲೂ ಅತ್ಯಂತ ಅಪಾಯಕಾರಿಯಾದ, ವೇಗವಾಗಿ ಹಬ್ಬುವ ಹಾಗೂ ಯಾವುದೇ ಲಸಿಕೆಗೂ ಬಗ್ಗದ ‘ಬೋಟ್ಸ್‌ವಾನಾ’ (ಒಮಿಕ್ರೋನ್‌) ಕೋವಿಡ್‌ ರೂಪಾಂತರಿ ಬಗ್ಗೆ ಭಾರತದಲ್ಲೂ ತಲ್ಲಣ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಂಜಾಗ್ರತಾ ಕ್ರಮ ಜರುಗಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು. ವಿದೇಶದಿಂದ ಬರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಬೇಕು. ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಪುನಾರಂಭ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಮಹತ್ವದ ಸೂಚನೆ ನೀಡಿದ್ದಾರೆ.

ಇದರ ಬೆನ್ನಲ್ಲೇ, ‘ಒಮಿಕ್ರೋನ್‌’ ಸೇರಿ ವಿವಿಧ ಕೋವಿಡ್‌ ತಳಿಗಳು ತಾಂಡವವಾಡುತ್ತಿರುವ 12 ‘ಹೈರಿಸ್ಕ್‌’ ದೇಶಗಳಿಂದ ಬಂದವರ ಮೇಲೆ ನಿಗಾಗೆ ಕೇಂದ್ರ ನಿರ್ಧರಿಸಿದೆ. ಕಳೆದ 2 ವಾರಗಳ ಅವಧಿಯಲ್ಲಿ ಈ ದೇಶಗಳಿಂದ ಭಾರತಕ್ಕೆ ಆಗಮಿಸಿ ಕೊರೋನಾ ದೃಢಪಟ್ಟವರ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ತೀರ್ಮಾನಿಸಲಾಗಿದೆ. ಈ ಮೂಲಕ ಇವರಲ್ಲಿ ‘ಒಮಿಕ್ರೋನ್‌’ ತಳಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

Follow Us:
Download App:
  • android
  • ios