ವಜ್ರ ಖಚಿತ ಸಿಂಹಾಸನದ ಬಗ್ಗೆ ಕೇಳಿದ್ದೀರಿ. ಆದರೆ, ವಜ್ರ ಖಚಿತ ಟಾಯ್ಲೆಟ್‌ ಬಗ್ಗೆ ಕೇಳಿದ್ದೀರಾ? ಶಾಂಗೈನಲ್ಲಿ ಸೋಮವಾರ ನಡೆದ ಚೀನಾ ಅಂತಾರಾಷ್ಟ್ರೀಯ ಇಂಪೋರ್ಟ್‌ ಎಕ್ಸ್‌ಪೋದಲ್ಲಿ ಐಶಾರಾಮಿ ಟಾಯ್ಲೆಟ್‌ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಹಾಂಕಾಂಗ್‌ ಮೂಲದ ಚಿನ್ನಾಭರಣ ತಯಾರಿಕಾ ಕಂಪನಿ ಸಿದ್ಧಪಡಿಸಿರುವ ಚಿನ್ನದ ಟಾಯ್ಲೆಟ್‌ ಅನ್ನು 40,815 ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ಟಾಯ್ಲೆಟ್‌ಗೆ ಬುಲೆಟ್‌ ಪ್ರೂಫ್‌ ಗ್ಲಾಸ್‌ ಅಳವಡಿಸಲಾಗಿದೆ. ಅಂದಹಾಗೆ ಈ ಚಿನ್ನದ ಟಾಯ್ಲೆಟ್‌ನ ಬೆಲೆ ಸುಮಾರು 9 ಕೋಟಿ ರು. ಇದೆಯಂತೆ.