ಆಮೆ ಮತ್ತು ಮೊಲದ ಓಟದ ಕಥೆ ನೆನಪಿದೆಯೇ? ಚೀನಾದಲ್ಲಿ ನಡೆದ ಈ ಸ್ಪರ್ಧೆಯ ವಿಡಿಯೋ ವೈರಲ್ ಆಗಿದೆ, ಇದರಲ್ಲಿ ಆಮೆ ಗೆದ್ದಿದೆ. ಬಾಲ್ಯದ ನೆನಪುಗಳನ್ನು ಈ ವಿಡಿಯೋ ಮರುಕಳಿಸಿದೆ.
ಆಮೆ ಮತ್ತು ಮೊಲದ ಓಟದ ನೀತಿ ಕತೆಯನ್ನು ನೀವು ಬಾಲ್ಯದಲ್ಲಿ ಕೇಳಿರಬಹುದು ಹಾಗೂ ಈಗ ನಿಮ್ಮ ಮಕ್ಕಳಿಗೂ ಆ ನೀತಿ ಕತೆಯ ಬಗ್ಗೆ ಹೇಳಿಕೊಂಡಿರಬಹುದು. ಬಹಳ ಜನಪ್ರಿಯವಾದ ಈ ಕತೆ ನಿಜ ಎನಿಸುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಹಳಷ್ಟು ಜನ ಕಾಮೆಂಟ್ ಮಾಡ್ತಿದ್ದಾರೆ.
ಆಮೆ ಹಾಗೂ ಮೊಲದ ಕತೆ ಏನು?
ಆಟ ಓಟ ಚಟುವಟಿಕೆಯಲ್ಲಿ ಸದಾ ಚುರುಕಾಗಿರುವ ಮೊಲಕ್ಕೂ ನಿಧಾನವಾಗಿ ಓಡಾಡುವ ಎಲ್ಲವನ್ನೂ ನಿಧಾನವಾಗಿಯೇ ಮಾಡುವ ಆಮೆಗೂ ಮೊಲಕ್ಕೂ ಓಟದ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಆದರೆ ಈ ಓಟದ ಸ್ಪರ್ಧೆಯನ್ನು ತುಂಬಾ ಸಲೀಸು ಆಮೆ ಬರುವುದಕ್ಕೂ ಮೊದಲೇ ಸೆಕೆಂಡ್‌ಗಳಲ್ಲಿ ತಾನು ಗುರಿ ತಲುಪಬಲ್ಲೇ ಎಂದು ಭಾವಿಸುವ ಮೊಲ ಅರ್ಧದವರೆಗೆ ಓಡಿ ಹೋಗಿ ಒಂದು ಮರದ ಕೆಳಗೆ ನಿದ್ದೆ ಮಾಡುತ್ತದೆ. ಇತ್ತ ಆಮೆ ನಿಧಾನವಾಗಿ ಸಾಗಿ ಮೊಲವನ್ನು ಕ್ರಮಿಸಿ ಹೋಗಿ ಗುರಿ ತಲುಪಿದರೆ ಇತ್ತ ಮೊಲ ಮಾತ್ರ ನಿದ್ದೆ ಮಾಡುತ್ತಲೇ ಬಾಕಿಯಾಗಿ ಬಿಡುತ್ತದೆ. ನಿಧಾನ ಹಾಗೂ ನಿಶ್ಚಿತವಾದ ಗುರಿ ಹೊಂದಿದ್ದರೆ ಅಡ್ಡಿಗಳನ್ನು ಮೀರಿ ಗುರಿ ತಲುಪಬಹುದು. ಸಾಮರ್ಥ್ಯಗಳಿದ್ದರೂ ದುರಂಕಾರ ಪಡಬಾರದು ಬೇರೆಯವರನ್ನು ಹೀಯಾಳಿಸಬಾರದು ಅಥವಾ ಅತೀಯಾದ ಆತ್ಮವಿಶ್ವಾಸ ನಮಗೆ ಮುಳುವಾಗಬಹುದು ಎಂಬುದನ್ನು ಈ ನೀತಿ ಕತೆ ತಿಳಿಸುತ್ತದೆ.
ಹೊಂದಿದ್ರೆ ಸಿರಿತನ; ನಿಯಮ ಮೀರಿದ್ರೆ ಬಡತನ ತರುವ ಆಮೆ ಉಂಗುರ
ವೈರಲ್ ವೀಡಿಯೋದಲ್ಲೇನಿದೆ...
ವಿಶ್ವದೆಲ್ಲೆಡೆ ಈ ಕತೆ ಬಹಳ ಜನಪ್ರಿಯವಾಗಿದ್ದು, ಈಗ ಆಮೆ ಹಾಗೂ ಮೊಲಕ್ಕೆ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ. ಎರಡು ಪ್ರಾಣಿಗಳ ಓಟದ ಸ್ಪರ್ಧೆಗೆ ಟ್ರ್ಯಾಕ್ ಸಿದ್ಧಪಡಿಸಿ ಒಂದು ಕಡೆ ಮೊಲ ಹಾಗೂ ಮತ್ತೊಂದು ಕಡೆ ಆಮೆಯನ್ನು ಬಿಡಲಾಗುತ್ತದೆ. ಆದರೆ ಈ ಬಾರಿಯೂ ಕತೆಯಲ್ಲಿರುವಂತೆ ಆಮೆಯೇ ಈ ಓಟದ ಸ್ಪರ್ಧೆಯಲ್ಲಿ ಗೆದ್ದು ಬೀಗಿದೆ. ಕೆಳಗೆ ಬಿಟ್ಟ ಕೂಡಲೇ ತೆವಳುತ್ತಾ ಹೋಗಿ ಆಮೆ ಗುರಿ ಸೇರಿದ್ದು, ಇತ್ತ ಮೊಲ ಮಾತ್ರ ಭಯ ಪಡುತ್ತಾ ಅಲ್ಲಲ್ಲೇ ಮಧ್ಯೆ ಮಧ್ಯೆ ನಿಂತು ಹಿಂದೆಯೇ ಬಾಕಿ ಆಗಿದೆ. ಮೊಲವನ್ನು ಮುಂದೆ ಓಡುವುದಕ್ಕೆ ಅದರ ಪಕ್ಕದಲ್ಲಿ ನಿಂತ ಜನ ಎಷ್ಟು ಪ್ರೋತ್ಸಾಹಿಸಿದರು ಗಾಬರಿಗೊಂಡ ಮೊಲ ಅಲ್ಲಲ್ಲೇ ಬಾಕಿಯಾಗಿದೆ.
ಚೀನಾದಲ್ಲಿ ಈ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರಿಗೆ ಈ ವೀಡಿಯೋ ತಮ್ಮ ಬಾಲ್ಯದಲ್ಲಿ ಓದಿದ ಈ ಕತೆಯನ್ನು ನೆನಪು ಮಾಡಿದೆ. ಸ್ಕೂಲ್ ಮೆಮರೀಸ್ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅನೇಕರು ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮರ್ಯಾದೆ ಉಳಿಸಿಕೊಳ್ಳಲು ನೀಡಿದ 2ನೇ ಅವಕಾಶವನ್ನು ಕೂ ಮೊಲ ಹಾಳು ಮಾಡಿದೆ ಎಂದು ಅವರು ವೀಡಿಯೋದಲ್ಲಿ ಬರೆದುಕೊಂಡಿದ್ದಾರೆ.
Viral Video : ಆಮೆ ಪ್ರಾಣ ಕಾಪಾಡಿದ ಎಮ್ಮೆ..ಮನುಷ್ಯರಿಗಿಂತ ಪ್ರಾಣಿಗಳೇ ಮೇಲು!
ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...
