ಅಮೆರಿಕದಲ್ಲಿ ಅಂಗಡಿ ಲೂಟಿ ಮಾಡಲು ಯತ್ನಿಸಿದ ಕಳ್ಳನಿಗೆ ಥಳಿಸಿದ ಭಾರತೀಯ: ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಮಾಸ್ಕ್ ಹಾಕಿಕೊಂಡಿರುವ ಕಳ್ಳ ಹಲವು ವಸ್ತುಗಳನ್ನು ತುಂಬಿಕೊಂಡು ಕಳ್ಳತನ ಮಾಡಲು ಹೋಗುತ್ತಾನೆ. ಆದರೆ, ಸಿಖ್ ವ್ಯಕ್ತಿಯೊಬ್ಬರು ಆತನಿಗೆ ಥಳಿಸಿ ಕಳ್ಳತನ ತಪ್ಪಿಸಿದ್ದಾರೆ.

ಕ್ಯಾಲಿಫೋರ್ನಿಯಾ (ಆಗಸ್ಟ್ 3, 2023): ಅಮೆರಿಕದ ಅಂಗಡಿಗಳಲ್ಲಿ ಕಳ್ಳತನ ಮತ್ತು ಶಸ್ತ್ರಸಜ್ಜಿತ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಇದು ಅಂಗಡಿ ಮಾಲೀಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಕಳವಳಕ್ಕೆ ಗಂಭೀರ ಕಾರಣವಾಗಿದೆ. ಗ್ರಾಹಕರು, ಸಿಬ್ಬಂದಿ ಮತ್ತು ಅಂಗಡಿ ಮಾಲೀಕರು ಇಂತಹ ದಾಳಿಯ ಗುರಿಯಾಗುತ್ತಿರುವುದನ್ನು ತೋರಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಆದರೆ, ಈ ಬಾರಿ ವ್ಯಕ್ತಿಯೊಬ್ಬರು ಕಳ್ಳತನ ಮಾಡಲು ಪ್ರಯತ್ನಿಸಿದ ವ್ಯಕ್ತಿಗೆ ಸರಿಯಾಗಿ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದ 7-ಇಲೆವೆನ್ ಅಂಗಡಿಗೆ ಕಳ್ಳ ನುಗ್ಗಿ ಹಲವು ವಸ್ತುಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಾಗ, ಸಿಖ್ ವ್ಯಕ್ತಿಯೊಬ್ಬರು (ಅಂಗಡಿಯ ಮಾಲೀಕರು ಎಂದು ಭಾವಿಸಬಹುದು) ಅಪರಾಧಿಗೆ ಪೊರಕೆಯಿಂದ ಥಳಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದನ್ನು ಓದಿ: ಈ ಡಯಾಬಿಟೀಸ್ ಔಷಧಿ ತಗೊಂಡ್ರೆ ಶುಗರ್ ಲೆವೆಲ್ ಜತೆಗೆ ತೂಕನೂ ಇಳಿಸ್ಬೋದು!
ವಿಡಿಯೋವನ್ನು ಇಲ್ಲಿ ನೋಡಿ..
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಮಾಸ್ಕ್ ಹಾಕಿಕೊಂಡಿರುವ ವ್ಯಕ್ತಿಯೊಬ್ಬರು ಸಾಧ್ಯವಾದಷ್ಟು ಉತ್ಪನ್ನಗಳನ್ನು ದೊಡ್ಡ ಕಸದ ತೊಟ್ಟಿಯಲ್ಲಿ ತುಂಬಿಕೊಂಡು ಹೋಗಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಕಳ್ಳನು ಅಂಗಡಿ ಮಾಲೀಕರಿಗೆ ಕೆಲವು ಬಾರಿ ಕಾಣದ ಆಯುಧದಿಂದ ಬೆದರಿಕೆ ಹಾಕಿದ್ದು, ಅಂಗಡಿಯ ಮತ್ತೊಬ್ಬ ಉದ್ಯೋಗಿಗೆ ಹಿಂದೆ ಹೋಗುವಂತೆ ಹೇಳಿದ್ದಾನೆ.
ಅಲ್ಲದೆ, “ಅವನನ್ನು ಸುಮ್ಮನೆ ಬಿಡು. ನೀವು ಏನೂ ಮಾಡಲು ಸಾಧ್ಯ ಇಲ್ಲ. ಅವರು ಏನನ್ನಾದರೂ ಮಾಡದೆ ಸುಮ್ಮನೆ ಹೋಗುವುದಿಲ್ಲ’’ ಎಂದು ವಿಡಿಯೋ ತೆಗೆದವರೊಬ್ಬರು ಹೇಳುವುದನ್ನು ಕೇಳಬಹುದು. ಆದರೂ, ಅಂಗಡಿಯ ನೌಕರ ತನ್ನ ತೋಳುಗಳಿಂದ ದರೋಡೆಕೋರನನ್ನು ಹಿಡಿದಿದ್ದು, ನಂತರ ಸಿಖ್ ವ್ಯಕ್ತಿ ಕಳ್ಳನನ್ನು ಪೊರಕೆಯಿಂದ ಅನೇಕ ಬಾರಿ ಥಳಿಸಿದ್ದಾನೆ.
ಇದನ್ನೂ ಓದಿ: 18ಕ್ಕಿಂತ ಕಡಿಮೆ ವಯಸ್ಕರಿಗೆ ಇನ್ಮುಂದೆ ದಿನಕ್ಕೆ 2 ಗಂಟೆ ಮಾತ್ರ ಸ್ಮಾರ್ಟ್‌ಫೋನ್ ಬಳಕೆಗೆ ಅವಕಾಶ!
ಕಳ್ಳ ನೋವಿನಿಂದ ಕಿರುಚುತ್ತಿದ್ದಾಗ ಈ ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದನು. ಹಾಗೆ ಮಾಡಬೇಡಿ. ಹಾಗೆ ಮಾಡಬೇಡಿ, ಮಾಡಬೇಡಿ, ಮಾಡಬೇಡಿ," ಎಂದು ಕೂಗಿದರೂ, ಸಿಖ್ ವ್ಯಕ್ತಿ ಮಾತ್ರ ಕಳ್ಳನಿಗೆ ಹೊಡೆಯುವುದನ್ನು ಮುಂದುವರಿಸಿದನು. ಹಾಗೆ, ಆ ಉದ್ಯೋಗಿ ಕಳ್ಳನನ್ನು ಕೆಳಕ್ಕೆ ಬೀಳಿಸಿ ಹಿಡಿದುಕೊಂಡಿದ್ದನು.
ಅನೇಕರು ಸಿಖ್ ವ್ಯಕ್ತಿಯ ಶೌರ್ಯವನ್ನು ಶ್ಲಾಘಿಸಿದರು ಮತ್ತು ಈ ವಿಡಿಯೋವನ್ನು ವೀಕ್ಷಿಸಲು "ತೃಪ್ತಿಕರವಾಗಿದೆ" ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರ, ''ನಾನು ಹಿಂಸೆಯನ್ನು ಬೆಂಬಲಿಸದಿದ್ದರೂ, ಇದು ಅತ್ಯುತ್ತಮ ವಿಡಿಯೋವಾಗಿದೆ" ಎಂದು ಹೇಳಿದರು. ಹಾಗೆ, ಇನ್ನೊಬ್ಬರು "ಅಧಿಕಾರಿಗಳು ಕಾನೂನನ್ನು ಜಾರಿಗೊಳಿಸದಿದ್ದಾಗ ಅಥವಾ ಸಾಧ್ಯವಾಗದಿದ್ದಾಗ ಮತ್ತು ಕೆಲವು ನಾಗರಿಕರು ತಾವು ಸಾಕಷ್ಟು ಅನುಭವಿಸಿದ್ದೇವೆ ಎಂದು ನಿರ್ಧರಿಸಿದಾಗ ಇದು ಸಂಭವಿಸುತ್ತದೆ." ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!
''ಪಂಜಾಬಿಯೊಂದಿಗೆ ಎಂದಿಗೂ ಆಟವಾಡಬೇಡಿ. ದರೋಡೆಕೋರನು ಸಿಕ್ಕಿಬಿದ್ದನು ಎಂದು ಒಬ್ಬರು ಬರೆದರೆ, ''ಎಲ್ಲ ವೀರರು ಕ್ಯಾಪ್‌ಗಳನ್ನು ಧರಿಸುವುದಿಲ್ಲ. ಕೆಲವರು ಟರ್ಬನ್ ಧರಿಸುತ್ತಾರೆ.'' ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ''ಅಮೆರಿಕದಲ್ಲಿ ವ್ಯಕ್ತಿ ದರೋಡೆ ಮಾಡುತ್ತಿದ್ದಾನೆ. ಎಂದಿನಂತೆ, ಅಂಗಡಿಯ ವ್ಯಕ್ತಿಗಳು ಅಸಹಾಯಕರಾಗಿದ್ದಾರೆ, ಆದರೆ ನಂತರ ಭಾರತೀಯರು ಸಹಾಯಕ್ಕೆ ಆಗಮಿಸಿದ್ದಾರೆ’’ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹಸಿವು, ಬಳಲಿಕೆಯಿಂದ ಮೃತಪಟ್ಟ ವೀಗನ್ ಇನ್ಫ್ಲುಯೆನ್ಸರ್: ಕಚ್ಚಾ ಆಹಾರ ಮಾತ್ರ ಸೇವಿಸ್ತಿದ್ದ ಮಹಿಳೆ