ಲಾಕ್‌ಡೌನ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಇದರಲ್ಲಿ ಗಲ್ಲಿಯೊಂದಕ್ಕೆ ಎಂಟ್ರಿ ಕೊಡುವ ಕೋತಿ ನೊಡ ನೋಡ್ತಿದಂತೆ ಮಕಕಳು ಆಡುವ ಬೈಕ್ ಏರಿ ಬಂದು, ಪುಟ್ಟ ಮಗುವನ್ನೇ ಎಳೆದುಕೊಂಡು ಹೋಗುವ ದೃಶ್ಯಗಳಿವೆ. 

ಹೌದು ಇಂತಹುದ್ದೊಂದು ಶಾಕಿಂಗ್ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆದಿದೆ. ಇನ್ನು ಕೊಂಚ ದೂರದವರೆಗೆ ಮಗುವನ್ನು ರಸ್ತೆಯಲ್ಲೇ ಎಳೆದೊಯ್ಯುವ ಕೋತಿ ಬಳಿಕ ಅಲ್ಲಿಂದ ಪರಾರಿಯಾಗಿದೆ. ಮಾರ್ಕ್ ರೆಯಾನ್ ಹೆಸರಿನ ಖಾತೆಯಿಂದ ಈ ವಿಡಿಯೋ ಶೇರ್ ಮಾಡಲಾಗಿದೆ. ಇನ್ನು ಕೋತಿ ಮಗುವನ್ನು ಎಳೆದೊಯ್ಯುತ್ತಿರುವುದನ್ನು ಕಂಡು ವೃದ್ಧರೊಬ್ಬರು ಓಡೋಡಿ ಬಂದಿದ್ದು, ಅಷ್ಟರಲ್ಲೇ ಕೋತಿ ಅಲ್ಲೊಂದ ಓಡಿ ಹೋಗುತ್ತದೆ.

ವವಿಡಿಯೋ ನೋಡಿದವರೆಲ್ಲಾ ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ. ಹೀಗಿದ್ದರೂ ಈ ಘಟನೆ ಎಲ್ಲಿ ನಡೆದಿದ್ದು ಎಂಬುವುದು ಇನ್ನೂ ತಿಳಿದು ಬಂದಿಲ್ಲ.