Asianet Suvarna News Asianet Suvarna News

ತಾಯಿಯನ್ನು ದಿವಾಳಿ ಮಾಡಿದ್ದಕ್ಕೆ Shinzo Abe ಹತ್ಯೆ: ಹಂತಕನ ಸ್ಪಷ್ಟನೆ!

  •  ಜಪಾನ್‌ ಪ್ರಧಾನಿ ಶಿಂಜೋ ಅಬೆ ಹತ್ಯೆಗೆ ಧಾರ್ಮಿಕ ನಾಯಕ ದ್ವೇಷ ಕಾರಣ
  • ಧಾರ್ಮಿಕ ನಾಯಕರೊಬ್ಬರಿಂದಾಗಿ ನಮ್ಮ ತಾಯಿ ದಿವಾಳಿಯಾದರು
  • ಧಾರ್ಮಿಕ ನಾಯಕನಿಗೆ ನೆರವಾದ ಕಾರಣಕ್ಕೆ ಶಿಂಜೋ ಅಬೆ ಹತ್ಯೆ!
  • ಮಂಗಳವಾರ ಅಬೆ ಅಂತಿಮ ಸಂಸ್ಕಾರ

 

Shinzo Abe shooter Tetsuya Yamagami says  religious group mothers bankruptcy gow
Author
Bengaluru, First Published Jul 10, 2022, 10:33 AM IST

ಟೋಕಿಯೋ: ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆಗೆ, ಧಾರ್ಮಿಕ ನಾಯಕರೊಬ್ಬರು ಮೇಲೆ ತನಗೆ ಇದ್ದ ದ್ವೇಷ ಮತ್ತು ಆ ಧಾರ್ಮಿಕ ನಾಯಕರಿಗೆ ಶಿಂಜೋ ಅಬೆ ನೆರವಾಗಿದ್ದೆ ಕಾರಣ ಎಂದು ಹಂತಕ ತೆತ್ಸುಯಾ ಯಮಗಾಮಿ ಹೇಳಿಕೆ ನೀಡಿದ್ದಾನೆ ಎಂದು ವರದಿಗಳು ತಿಳಿಸಿವೆ.

‘ನಮ್ಮ ತಾಯಿ ಧಾರ್ಮಿಕ ಸಂಘಟನೆಯೊಂದರ ಸದಸ್ಯೆಯಾಗಿದ್ದರು. ಆ ಧಾರ್ಮಿಕ ನಾಯಕ ನಮ್ಮ ತಾಯಿಯಿಂದ ದೇಣಿಗೆ ಪಡೆದು ಪಡೆದು ಅವರನ್ನು ದಿವಾಳಿ ಮಾಡಿದ್ದ. ಹೀಗಾಗಿ ಅವರನ್ನು ಹತ್ಯೆ ಮಾಡುವ ಉದ್ದೇಶ ನನಗಿತ್ತು. ಮತ್ತೊಂದೆಡೆ ಈ ಧಾರ್ಮಿಕ ಪಂಗಡ ಜಪಾನ್‌ನಲ್ಲಿ ಹೆಚ್ಚು ಪ್ರಚಾರವಾಗಲು ಅಬೆ ನೆರವಾಗಿದ್ದರು ಎಂಬ ಕಾರಣಕ್ಕಾಗಿ ನಾನು ಅವರನ್ನು ಹತ್ಯೆ ಮಾಡಿದೆ ಎಂದು ವಿಚಾರಣೆ ವೇಳೆ ಯಾಮಗಾಮಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆ ಧಾರ್ಮಿಕ ನಾಯಕನ ಹೆಸರು ಬಹಿರಂಗವಾಗಿಲ್ಲ.

ಈ ನಡುವೆ ಯಾಮಗಾಮಿ ಅವರ ಮನೆಗೆ ಶನಿವಾರ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸ್ಫೋಟಕ ಪದಾರ್ಥ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಜಪಾನ್ ಮಾಜಿ ಪ್ರಧಾನಿ ಹತ್ಯೆ: 2 ವಾರದ ಮುಂಚೆ ಭವಿಷ್ಯ ನುಡಿದಿದ್ದ ಹರೀಶ್ ಕಶ್ಯಪ್

ಮಂಗಳವಾರ ಅಂತಿಮ ಸಂಸ್ಕಾರ: ಶುಕ್ರವಾರ ನಡೆದ ಗುಂಡಿನ ದಾಳಿಗೆ ಬಲಿಯಾದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ದೇಹವನ್ನು ಶನಿವಾರ ರಾಜಧಾನಿ ಟೋಕಿಯೋಗೆ ತರಲಾಗಿದ್ದು, ಮಂಗಳವಾರ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.

ನಾರಾ ನಗರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಭಾಷಣ ವೇಳೆ 41 ವರ್ಷದ ತೆತ್ಸುಯಾ ಯಮಗಾಮಿ ಎಂಬಾತ ಅತ್ಯಂತ ಸಮೀಪದಿಂದಲೇ ಗುಂಡಿನ ದಾಳಿ ನಡೆಸಿ ಅಬೆ ಅವರ ಹತ್ಯೆ ನಡೆಸಿದ್ದ. ಯಾಮಗಾಮಿ ಹಾರಿಸಿದ ಮೊದಲ ಗುಂಡಿನಿಂದ ಅಬೆ ತಪ್ಪಿಸಿಕೊಂಡಿದ್ದರಾದರೂ, ತಕ್ಷಣವೇ ಆತ ಮತ್ತೊಂದು ಗುಂಡು ಹಾರಿಸಿದ್ದು, ಅದು ಮಾಜಿ ಪ್ರಧಾನಿಯ ಬೆನ್ನಿನಿಂದ ಹಾದು ಹೃದಯವನ್ನು ಸೀಳಿ ಹೋಗಿತ್ತು. ತಕ್ಷಣವೇ ಶಿಂಜೋ ಅವರನ್ನು ಆಸ್ಪತ್ರೆಗೆ ಸಾಗಿಸಿ ವೈದ್ಯರ ತಂಡ 4 ಗಂಟೆಗಳ ಕಾಲ ಶ್ರಮಿಸಿತ್ತಾದರೂ, ಹೃದಯ, ಕುತ್ತಿಗೆ ಭಾಗ ಮತ್ತು ರಕ್ತನಾಳವನ್ನೇ ನಾಶಪಡಿಸಿತ್ತು. ಹೀಗಾಗಿ ತೀವ್ರ ರಕ್ತಸ್ರಾವವಾಗಿತ್ತು. ಅವರು ಆಸ್ಪತ್ರೆಗೆ ಬರುವಷ್ಟರಲ್ಲೇ ಸಾವನ್ನಪ್ಪಿದ್ದರು.

ಭದ್ರತಾ ಲೋಪ: ಈ ನಡುವೆ ಮಾಜಿ ಪ್ರಧಾನಿಯೊಬ್ಬರ ಪ್ರಚಾರ ಕಾರ್ಯಕ್ರಮದ ವೇಳೆ ಭದ್ರತಾ ಲೋಪ ಆಗಿದೆ ಎಂಬ ವಾದಗಳೂ ಕೇಳಿಬಂದಿವೆ. ಜೊತೆಗೆ ಭಾಷಣದ ವೇಳೆ ಸಾಕಷ್ಟುಜನರನ್ನು ಅತ್ಯಂತ ಸಮೀಪದಲ್ಲೇ ಬಿಟ್ಟುಕೊಂಡಿದ್ದು ತಪ್ಪು. ಕನಿಷ್ಠ ಪಕ್ಷ ಎತ್ತರದ ವೇದಿಕೆ ಮೇಲೆ ಭಾಷಣ ಆಯೋಜಿಸಿದ್ದರೆ ದುರ್ಘಟನೆ ತಡೆಯಬಹುದಿತ್ತು ಎಂಬ ವಾದಗಳೂ ಕೇಳಿಬಂದಿವೆ. ಆದರೆ ನಾರಾ ನಗರದ ರೈಲ್ವೆ ನಿಲ್ದಾಣದ ಬಳಿ ಕಾರ್ಯಕ್ರಮ ಪೂರ್ವ ನಿಯೋಜಿತವಾಗಿರಲಿಲ್ಲ. ಕಡೆಯ ಹಂತದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಕಾರಣ, ವಿಶೇಷ ವ್ಯವಸ್ಥೆ ಮಾಡಲಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Shinzo Abe Death; ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ, ಮೋದಿ ಭಾವುಕ ಲೇಖನ

ಕ್ವಾಡ್‌ ನಾಯಕರಾದ ಮೋದಿ, ಬೈಡೆನ್‌ ಅಲ್ಬನೀಸ್‌ ಕಂಬನಿ:  ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಸಾವಿಗೆ ಕ್ವಾಡ್‌ ದೇಶಗಳು ಕಂಬನಿ ಮಿಡಿದಿವೆ. ಈ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟೋನಿ ಅಲ್ಬನೀಸ್‌ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಕ್ವಾಡ್‌ ರಚನೆಯಲ್ಲಿ ಮತ್ತು ಇಂಡೋಪೆಸಿಫಿಕ್‌ ವಲಯವನ್ನು ಮುಕ್ತವಾಗಿರಿಸುವಲ್ಲಿ ಅಬೆ ಅವರ ಪಾತ್ರವನ್ನು ಸ್ಮರಿಸಿದ್ದಾರೆ. ಕ್ವಾಡ್‌ನ ಇತರೆ ಮೂರು ದೇಶಗಳ ಜೊತೆ ಜಪಾನ್‌ ಸಂಬಂಧ ಸುಧಾರಣೆಯಲ್ಲಿ ಅಬೆ ಅವರದ್ದು ಅತ್ಯಂತ ಪ್ರಮುಖ ಪಾತ್ರ ಎಂದು ಬಣ್ಣಿಸಿರುವ ಮೂರೂ ನಾಯಕರು, ಅಬೆ ಅವರ ನೆನಪನ್ನು ಗೌರವಿಸುವ ಸಲುವಾಗಿ ಇಂಡೋ ಪೆಸಿಫಿಕ್‌ ವಲಯವನ್ನು ಮುಕ್ತ ಮತ್ತು ಸ್ವತಂತ್ರವಾಗಿರಿಸಲು ಇನ್ನಷ್ಟುಶ್ರಮ ವಹಿಸುವುದಾಗಿ ಘೋಷಿಸಿದ್ದಾರೆ.

Follow Us:
Download App:
  • android
  • ios