Asianet Suvarna News Asianet Suvarna News

ಜಪಾನ್ ಮಾಜಿ ಪ್ರಧಾನಿ ಹತ್ಯೆ: 2 ವಾರದ ಮುಂಚೆ ಭವಿಷ್ಯ ನುಡಿದಿದ್ದ ಹರೀಶ್ ಕಶ್ಯಪ್

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಯವರ ಹತ್ಯೆಯಾಗಿದೆ. ಹೀಗೆ ಜಗತ್ತಿನ ನಾಯಕರ ಹತ್ಯೆ ಸಂಚುಗಳು ಶಕ್ತಿ ಪಡೆಯಲಿವೆ ಎಂಬುದನ್ನು ಎರಡು ವಾರದ ಹಿಂದೆಯೇ ಜ್ಯೋತಿಷ್ಯ ತಜ್ಞರಾದ ಹರೀಶ್ ಕಶ್ಯಪ್ ತಿಳಿಸಿದ್ದರು. 

Japan ex PM Assassination Harish Kashyap prediction came true skr
Author
Bangalore, First Published Jul 9, 2022, 6:17 PM IST | Last Updated Jul 9, 2022, 6:17 PM IST

ಜುಲೈ 8ರಂದು ಭಾಷಣ ಮಾಡುತ್ತಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ(Japan's ex-leader Shinzo Abe) ಮೇಲೆ ಗುಂಡಿನ ದಾಳಿ ನಡೆದಿದೆ. ಅವರ ಹತ್ಯೆ ಕಂಡು ವಿಶ್ವವೇ ಬೆಚ್ಚಿಬಿದ್ದಿದೆ. ಈ ಬಗ್ಗೆ ಜ್ಯೋತಿಷ್ಯ ತಜ್ಞರಾದ ಹರೀಶ್ ಕಶ್ಯಪ್ ಅವರು ಜೂನ್ 26ರಂದೇ ತಿಳಿಸಿದ್ದರು. 

ಹೌದು, ಜೂನ್ 27ರಂದು ಕುಜ ಸ್ವಕ್ಷೇತ್ರ ಮೇಷದಲ್ಲಿ ರಾಹು ಪ್ರವೇಶ ಮಾಡಿದ್ದಾನೆ. ಆತ ಆಗಸ್ಟ್ 10ರವರೆಗೂ ಅಲ್ಲಿಯೇ ಇರಲಿದ್ದಾನೆ. ಶನಿಯ ರಾಜತ್ವ ಇರುವಂಥ ವರ್ಷದಲ್ಲಿ ಮೇಷದಲ್ಲಿ ಕುಜ ಮತ್ತು ರಾಹು ಸೇರುವುದು ಅತ್ಯಂತ ಅಪಾಯಕಾರಿಯಾಗಿದ್ದು, ಇದರಿಂದ ಹಲವು ಕೆಟ್ಟ ಸನ್ನಿವೇಶಗಳನ್ನು ಲೋಕ ಕಾಣಲಿದೆ. ಜಗತ್ತಿನ ಕೆಲ ನಾಯಕರ ಹತ್ಯೆ ಪ್ರಯತ್ನಗಳು ನಡೆಯಲಿವೆ ಎಂಬುದನ್ನು ಜೂನ್ 26ರಂದೇ ಹರೀಶ್ ಕಶ್ಯಪ್ ಅವರು ತಿಳಿಸಿದ್ದರು. ಅದರಂತೆ ಈಗ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಯ ಹತ್ಯೆಯಾಗಿದೆ. 

ಅಗ್ನಿ ಅಂಶದ ಅಂಶವಾದ ಮಂಗಳ(Mars)ವು ನೀರಿನ ಅಂಶ ಮೀನ ರಾಶಿ(Pisces)ಯನ್ನು ಬಿಟ್ಟು ಅಗ್ನಿ ಅಂಶವಾದ ಹಾಗೂ ಸ್ವರಾಶಿಯಾದ ಮೇಷ ರಾಶಿಯನ್ನು ಜೂನ್ 27ರ ಬೆಳಿಗ್ಗೆ ಪ್ರವೇಶಿಸಿತ್ತು. ಅಲ್ಲಿ ಈ ಮುನ್ನ ಇದ್ದ ರಾಹು ಜೊತೆ ಮಂಗಳ ಸಂಯೋಗವಾಗಿತ್ತು. ಜ್ಯೋತಿಷ್ಯದಲ್ಲಿ ಕುಜ ಮತ್ತು ರಾಹು ಶತ್ರು ಗ್ರಹಗಳು. ಕುಜ ಮತ್ತು ಶನಿ ಒಟ್ಟಿಗಿದ್ರೂ ಅತ್ಯಂತ ಪಾಪಕರ ಮೇಳ. ಇವೆಲ್ಲವೂ ಸೇರಿದಾಗ ಅತ್ಯಂತ ಅಪಾಯಗಳು ಸಂಭವಿಸುತ್ತವೆ. ಹಾಗಾಗಿ, ಇನ್ನೊಂದೂವರೆ ತಿಂಗಳು ಅಂಥ ದೋಷದ ಕಾಲ ನಡೆಯುತ್ತದೆ. ಶನಿ ಮೇಲೆ ಕುಜ-ರಾಹು ಪ್ರಭಾವದಿಂದ ನಾಯಕರ ಹತ್ಯೆಯ ಸಂಚುಗಳು ನಡೆಯುತ್ತವೆ ಎಂದು ಕಶ್ಯಪ್ ತಿಳಿಸಿದ್ದರು. ಅದೀಗ ಜಪಾನ್ ಮಾಜಿ ಪ್ರಧಾನಿ ಹತ್ಯೆಯೊಂದಿಗೆ ನಿಜವಾಗಿದೆ. 

ರಾಹು ಜೊತೆ ಕುಜ ಸೇರೋ ಕಾಲ: ಯಾವ ರಾಶಿಗೇನು ಲಾಭ?

ಇದಲ್ಲದೆ, ಈ ಪಾಪಗ್ರಹಗಳ ಸಂಯೋಗದಿಂದಾಗಿ ಮಳೆಗ ಅಭಾವ, ಜ್ಯೇಷ್ಠ ಮಾಸದಲ್ಲಿ ಬರಬೇಕಾದಷ್ಟು ಮಳೆ ಬರೋಲ್ಲ, ಗಾಳಿಯ ತೀವ್ರತೆ ವಿಪರೀತವಾಗಿ ಖಂಡವೃಷ್ಟಿ, ಪ್ರಾಕೃತಿಕ ದೋಷಗಳು ಹೆಚ್ಚುತ್ತವೆ.  ಭಾರತದ ಉತ್ತರ ಮತ್ತು ಪಶ್ಚಿಮ ತೀರಗಳಲ್ಲಿ ಮಳೆಯ ಅತಿವೃಷ್ಟಿಯಿಂದ ಅದರ ಪ್ರಭಾವ ಕೇರಳ, ನಮ್ಮ ಕರಾವಳಿ ಸೇರಿ ಎಲ್ಲೆಡೆ ಹರಡುತ್ತದೆ. ಪಾಕಿಸ್ತಾನ, ಅಪಘಾನಿಸ್ತಾನಗಳಲ್ಲಿ ಭೂಕಂಪ, ನಿರಾಶ್ರಿತರ ಸಂಖ್ಯೆ ಹೆಚ್ಚಳ, ರಾಜಕೀಯದಲ್ಲಿ ಬಹಳ ಜಂಜಾಟ, ತಿಕ್ಕಾಟಗಳು ನಡೆಯುತ್ತವೆ ಎಂದಿದ್ದರು. 

ರಾಹು ಬಲಿಷ್ಠನಾಗಿ ಧರ್ಮಹೀನರು, ಕೆಡುಕರು, ದುಷ್ಟ ಶಕ್ತಿ ಉಪಾಸಕರು ಸೇರಿದಂತೆ ಎಲ್ಲ ಕೆಟ್ಟ ಶಕ್ತಿಗಳ ಮೇಲುಗೈ ಆಗುತ್ತದೆ. ಕಳೆದ ಕೆಲ ವರ್ಷಗಳಿಂದ ಶನಿ, ರಾಹು ಬಲಿಷ್ಠತೆಯಿಂದ ಜಗತ್ತಿನಲ್ಲಿ ದುಃಖ, ಪೀಡೆ ಹೆಚ್ಚುತ್ತಿದೆ. ಅದು ಈಗ ಕುಜದ ಪ್ರಭಾವವೂ ಸೇರಿ ಹೆಚ್ಚುತ್ತದೆ ಎಂದಿದ್ದರು. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಇವೆಲ್ಲವೂ ನಿಜವಾಗುತ್ತಿದೆ ಎನಿಸುತ್ತದೆ. ಅಂದಿನ ಭವಿಷ್ಯದ ವಿಡಿಯೋ ಲಿಂಕ್ ಇಲ್ಲಿದೆ. 

ಜೂ.26ರಂದು ಕುಜ- ರಾಹು ಸಂಧಿ: ಶನಿಯ ದೃಷ್ಟಿಯಲ್ಲಿ ಮೇಷ, ಕುಜ -ರಾಹು ಸೇರಿರುವುದೂ ಅಪಾಯಕಾರಿ!

Latest Videos
Follow Us:
Download App:
  • android
  • ios