ವಿಜಯಪುರ: ಎಂಎಲ್‌ಸಿ ಸುನೀಲ್‌ಗೌಡ ಪಾಟೀಲ್‌ಗೆ ಪಂಜಾಬಿ ಶಾರ್ಪ್‌ಶೂಟರ್‌ನಿಂದ ಜೀವ ಬೆದರಿಕೆ?
ವಿಜಯಪುರದಲ್ಲಿ ಶಾಂತ ರೀತಿಯಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದ್ರೆ ಈ ನಡುವೆ ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲ್‌ರಿಗೆ ಪಂಜಾಬ್ ಮೂಲಕ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಗಂಭೀರ ಆರೋಪ ಕೇಳಿ ಬಂದಿದೆ.
ವಿಜಯಪುರ(ಮೇ.03): ವಿಜಯಪುರ ಲೋಕಸಭಾ ಅಖಾಡ ಶಾಂತವಾಗಿದೆ ಎನ್ನುವಾಗಲೇ ಹಾಲಿ ಎಂಎಲ್‌ಸಿ ಒಬ್ಬರಿಗೆ ಪಂಜಾಬ್ ಮೂಲದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಒಡ್ಡಿದ ಘಟನೆ ಬೆಳಕಿಗೆ ಬಂದಿದೆ. ವಿಜಯಪುರದ ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲ್‌ಗೆ ಸರ್ದಾಜಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ ಎನ್ನುವ ಗಂಭೀರ ಆರೋಪವನ್ನ ಸ್ವತಃ ಸುನೀಲ್‌ಗೌಡ ಪಾಟೀಲ್ ಮಾಡಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾಧ್ಯಮಗಳ ಜೊತೆಗೆ ಹಂಚಿಕೊಂಡ ಕೆಲ ಮಾಹಿತಿಗಳು ಎಂಥವರನ್ನು ಗಾಭರಿ ಹುಟ್ಟಿಸುವಂತಿವೆ.
ಲೋಕಸಭಾ ಚುನಾವಣೆ ಹೊತ್ತಲ್ಲಿ ಎಂಎಲ್‌ಸಿಗೆ ಜೀವ ಬೆದರಿಕೆ..!
ವಿಜಯಪುರದಲ್ಲಿ ಶಾಂತ ರೀತಿಯಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಆದ್ರೆ ಈ ನಡುವೆ ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲ್‌ರಿಗೆ ಪಂಜಾಬ್ ಮೂಲಕ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ ದಿನಾಂಕ ಏ. ೨೮ ರಂದು ನಗರದ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ಆಹ್ವಾನದ ಮೇರೆಗೆ ಮದುವೆ ಹೋಗಿದ್ದರು. ಮಂಟಪದ ಒಳಗೆ ಹೋದ ಸುನೀಲಗೌಡರ ಕಾರು ಹೊರಗೆ ನಿಂತಿತ್ತು. ಆಗ ಇನ್ನೊಂದು ಕಾರಿನಲ್ಲಿದ್ದ ಪಂಜಾಬಿ ಮೂಲದ ವ್ಯಕ್ತಿ ಬಂದು ಕಾರ್ ವಿಷಯವಾಗಿ ಗಲಾಟೆ ಮಾಡಿದ್ದಾನೆ. ಆಗ ಸುನೀಲ್‌ಗೌಡ ಪಾಟೀಲ್ ಬಂದಾಗ ಅವರಿಗೆ ಹಿಂದಿ ಭಾಷೆಯಲ್ಲಿ ಅವಾಚ್ಯವಾಗಿ ಬೈದು ನೋಡಿಕೊಳ್ತೇವೆ. ಮನೆಗೆ ಬಂದು ಹೊಡೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಇದೆ ಕಾರಿನಲ್ಲಿದ್ದ ಬಿಜೆಪಿ ಮುಖಂಡ ವಿಜುಗೌಡ ಸಹ ಈ ವೇಳೆ ಎಮ್ ಎಲ್ ಸಿ ಸುನೀಲ್‌ಗೌಡ ಜೊತೆಗೆ ತಗಾದೆ ತೆಗೆದ್ರು ಎಂದು ಸ್ವತಃ ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಪಕ್ಷಕ್ಕೆ ಮುಜುಗರ: ಅರವಿಂದ ಲಿಂಬಾವಳಿ
ಜೀವಬೆದರಿಕೆ ಹಾಕಿದವ ಪಂಜಾಬಿ ಶಾರ್ಪ್ ಶೂಟರ್..!?
ಈ ಘಟನೆಯ ಬಳಿಕ ಜೀವ ಬೆದರಿಕೆ ಹಾಕಿದ ಪಂಜಾಬಿ ಮೂಲದ ಸರ್ದಾರ್ಜಿ ಯಾರು? ಆತನ ಹಿನ್ನೆಲೆಗಳ ಬಗ್ಗೆ ಅನುಮಾನಗಳು ಶುರುವಾಗಿವೆ. ಆತ ಶಾರ್ಪಶೂಟರ್ರಾ? ಎನ್ನುವ ಬಗ್ಗೆ ಅನುಮಾನಗಳು ವ್ಯಕ್ತವಾಗ್ತಿವೆ. ಈ ಕುರಿತು ಹುಷಾರಾಗಿ ಇರುವಂತೆ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಎಮ್ ಎಲ್ ಸಿ ಸುನೀಲ್‌ಗೌಡರಿಗೆ ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಪ್ರೋಗ್ರಾಂ ವೇಳೆಯೂ ಕಾಣಿಸಿಕೊಂಡಿದ್ದ ಸರ್ದಾರ್ ಜೀ..!
ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲರಿಗೆ ಜೀವ ಬೆದರಿಕೆ ಹಾಕಿದ್ದ ಸರ್ದಾರ್ ಜೀ ಕಳೆದ ೨೬ ರಂದು ರಾಹಲ್ ಗಾಂಧಿ ವಿಜಯಪುರ ಆಗಮಿಸುವ ವೇಳೇಯು ಕಾಣಿಸಿಕೊಂಡಿದ್ದ ಎಂದು ಸುನೀಲ್‌ಗೌಡ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ಬಬಲೇಶ್ವರದಿಂದ ಬರ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಕಾರ್ ಗಳನ್ನ ತಡೆದು ಬೆದರಿಕೆ ಹಾಕಲಾಗಿದ್ದು, ಇದೆ ಅನುಮಾನಾಸ್ಪದ ಸರ್ದಾರ್ ಜಿ ಇದ್ದ ಎಂದು ಸುನೀಲ್‌ಗೌಡ ಪಾಟೀಲ್ ಆತಂಕ ಹೊರಹಾಕಿದ್ದಾರೆ.
ಅಕ್ರಮ ಕಂಟ್ರಿಮೆಡ್ ಪಿಸ್ತೂಲ್ ಇವೆ : ಸುನೀಗೌಡ ಗಂಭೀರ ಆರೋಪ..!
ಇನ್ನು ಸರ್ದಾರ್ ಜೀ ಬಳಿ ಅಕ್ರಮ ಕಂಟ್ರಿಮೆಡ್ ಪಿಸ್ತೂಲ್ ಇವೆ ಎನ್ನುವ ಮಾಹಿತಿ ನನಗೆ ಸಿಕ್ಕಿದೆ. ಅಲ್ಲದೆ ವಿಜಯಪುರ ದರ್ಗಾ ಜೈಲಿನಲ್ಲಿರುವ ಕ್ರಿಮಿನಲ್ಸ್ ಜೊತೆಗೆ ಲಿಂಕ್ ಹೊಂದಿದ್ದಾರೆ. ಅವರಿಗೆ ಗಾಂಜಾ, ಮದ್ಯ ಪುರೈಕೆ ಮಾಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ದರ್ಗಾ ಜೈಲಿನಲ್ಲಿ ಅಕ್ರಮಗಳು ಸಾಂಗವಾಗಿ ನಡೆದಿವೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಕರ್ನಾಟಕದ 7 ರೈಲು ನಿಲ್ದಾಣಗಳಲ್ಲಿ ಕಡಿಮೆ ದರದ ಆಹಾರ ಕೌಂಟರ್ ತೆರೆದ ಭಾರತೀಯ ರೈಲ್ವೆ, ನಿಮ್ಮ ಜಿಲ್ಲೆಯಲ್ಲಿದೆಯೇ?
ಸಿಎಂ ಸಿದ್ದರಾಮಯ್ಯ, ಗೃಹಸಚಿವರಿಗೆ ದೂರು..!
ಈ ಕುರಿತು ಆತಂಕ ವ್ಯಕ್ತ ಪಡೆಸಿರುವ ಸುನೀಲ್‌ಗೌಡ ಪಾಟೀಲ್ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಸರ್ದಾರ್ ಜಿ ವ್ಯಕ್ತಿ ಎಷ್ಟೇ ಪ್ರಭಾವಿ ರಾಜಕಾರಣಿಯಾದ್ರು ನಿನ್ನನ್ನ ಬಿಡೋದಿಲ್ಲ ಎಂದು ಧಮ್ಕಿ ಹಾಕಿದ್ದಾನೆ. ಈತ ಯಾರು ಎಂದು ಗೊತ್ತಿಲ್ಲ. ಆದ್ರೆ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ನನ್ನ ಸಹೋದರ ಸಚಿವ ಎಂ ಬಿ ಪಾಟೀಲರ ವಿರುದ್ಧ ಚುನಾವಣೆಗೆ ನಿಂತು ಸೋಲುಂಡ ವಿಜುಗೌಡ ಪಾಟೀಲ್ ಜೊತೆಗೆ ಇರುತ್ತಾರೆ. ಈ ವ್ಯಕ್ತಿಯ ಹಿಂದೆ ಯಾರ ಕೈವಾಡ ಇದೆ ಅವರನ್ನ ಬಂಧಿಸಬೇಕು. ಜೀವ ಬೆದರಿಕೆ ಇರುವ ಕಾರಣ ಅಗತ್ಯ ಭದ್ರತೆವಹಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತ ವಿಜುಗೌಡರಿಂದಲೂ ಗಂಭೀರ ಆರೋಪ..!
ಸುನೀಲ್‌ಗೌಡ ಪಾಟೀಲ್ ಸುದ್ದಿಗೋಷ್ಟಿ ನಡೆಸುವ ಮುನ್ನಾದಿನ ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಸುನೀಲ್‌ಗೌಡರೇ ಮದುವೆಗೆ ಹೋದ ಸಂದರ್ಭದಲ್ಲಿ ನನಗೆ ಧಮ್ಕಿ ಹಾಕಿದ್ದಾರೆ. ನನ್ನ ಮಕ್ಕಳಿಗೆ, ನನಗೆ ಏನಾದರೂ ಧಕ್ಕೆಯಾದ್ರೆ ಅವರೇ ಹೊಣೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ನನ್ನ ಮಕ್ಕಳ ಮೇಲೆ ಸುಳ್ಳು ಆರೋಪ ಹೊರೆಸಿದ್ದರು. ದೂರು ದಾಖಲು ಮಾಡಿದ್ದರು. ನನ್ನ ಮೇಲು ದೂರು ದಾಖಲಿಸಿದ್ದರು. ಪೊಲೀಸರಿಂದ ಬಿ ಪಾಲ್ಸ್ ಹಾಕಿಸಿದ್ರು. ಬಳಿಕ ಅದೇ ಕೇಸನ್ನ ಮತ್ತೆ ಓಪನ್ ಮಾಡಿಸಿ ತನಿಖೆ ನಡೆಸುತ್ತಿದ್ದಾರೆ. ಈ ಮೂಲಕ ನಮಗೆ ಅನ್ಯಾಯವಾಗ್ತಿದೆ ಎಂದು ವಿಜುಗೌಡ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ.