ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದೊಳಗಿನ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇಶಿಬಾ ರಾಜೀನಾಮೆಗೆ ಸ್ವಪಕ್ಷೀಯರಿಂದಲೇ ಒತ್ತಾಯ:
ಟೋಕಿಯೋ: ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಜುಲೈನಲ್ಲಿ ಜಪಾನ್‌ನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ತಮ್ಮ ಪಕ್ಷ ಐತಿಹಾಸಿಕ ಸೋಲನ್ನು ಎದುರಿಸಿದ ತಿಂಗಳುಗಳ ನಂತರ ಇಶಿಬಾ ರಾಜೀನಾಮೆ ನೀಡಿದ್ದಾರೆ. ಇಶಿಬಾ ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷ ರಾಜೀನಾಮೆ ನೀಡುವಂತೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುವ ನಿರ್ಧಾರ ಮಾಡಿದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಇಶಿಬಾ, ಒಂದು ತಿಂಗಳಿಗೂ ಹೆಚ್ಚು ಕಾಲ ತಮ್ಮ ಪಕ್ಷದೊಳಗಿನ ಬಲಪಂಥೀಯ ವಿರೋಧಿಗಳು ಮುಂದಿಟ್ಟ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದರು. ತಾನು ರಾಜೀನಾಮೆ ನೀಡುವುದರಿಂದ ದೇಶದಲ್ಲಿ ರಾಜಕೀಯ ನಿರ್ವಾತ ಉಂಟಾಗುತ್ತದೆ ಎಂದು ಅವರು ಹೇಳಿದ್ದರು. ಅಮೆರಿಕ ವಿಧಿಸಿರುವ ಸುಂಕಗಳು ಮತ್ತು ಜಪಾನಿನ ಆರ್ಥಿಕತೆಯ ಮೇಲೆ ಅವುಗಳ ಪ್ರಭಾವ, ಬೆಲೆ ಏರಿಕೆ, ಅಕ್ಕಿ ನೀತಿ ಸುಧಾರಣೆಗಳು ಮತ್ತು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳನ್ನು ಅವರು ಎತ್ತಿ ತೋರಿಸಿದ್ದರು.
ಅವರ ಲಿಬರಲ್ ಡೆಮಾಕ್ರಟಿಕ್ ಪಕ್ಷವೂ ಆರಂಭಿಕ ನಾಯಕತ್ವ ಚುನಾವಣೆಯನ್ನು ನಡೆಸಬೇಕೆ ಎಂದು ನಿರ್ಧರಿಸುವ ಒಂದು ದಿನ ಮೊದಲು ಇಶಿಬಾ ಅವರು ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ. ಎಲ್‌ಡಿಪಿ ಚುನಾವಣೆ ನಡೆಸಿದರೆ ಇಶಿಬಾ ವಿರುದ್ಧ ವಾಸ್ತವಿಕವಾಗಿ ಅವಿಶ್ವಾಸ ನಿರ್ಣಯವಾಗುತ್ತಿತ್ತು. ಆದರೆ ಪತ್ರಿಕಾಗೋಷ್ಠಿಯಲ್ಲಿ, ಇಶಿಬಾ ಅವರು ಪಕ್ಷದ ನಾಯಕತ್ವಕ್ಕೆ ಬದಲಿಯಾಗಿ ಆಯ್ಕೆ ಮಾಡಲು ಮತದಾನ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಹೇಳಿದರು ಮತ್ತು ಸೋಮವಾರದ ನಿರ್ಧಾರವು ಇನ್ನು ಮುಂದೆ ಅಗತ್ಯವಿಲ್ಲ ಎಂದು ಹೇಳಿದರು.
ಸಂಸತ್ ಚುನಾವಣೆಯಲ್ಲಿ ಸೋಲಿನ ಬಳಿಕ ಇಶಿಬಾ ರಾಜೀನಾಮೆ:
ಜುಲೈನಲ್ಲಿ ನಡೆದ ನಿರ್ಣಾಯಕ ಸಂಸತ್ ಚುನಾವಣೆಯಲ್ಲಿ, ಇಶಿಬಾ ನೇತೃತ್ವದ ಆಡಳಿತಾರೂಢ ಒಕ್ಕೂಟವು 248 ಸ್ಥಾನಗಳ ಮೇಲ್ಮನೆಯಲ್ಲಿ ಬಹುಮತವನ್ನು ಗಳಿಸುವಲ್ಲಿ ವಿಫಲವಾಯಿತು, ಹೀಗಾಗಿ ಅವರ ಸರ್ಕಾರದ ಸ್ಥಿರತೆಯ ಮೇಲೆ ಇದು ಪರಿಣಾಮ ಬೀರಿತು. ಇದಕ್ಕೂ ಮೊದಲು ಕೆಳಮನೆಯಲ್ಲಿ ಹಿಂದಿನ ಚುನಾವಣಾ ಸೋಲಿನ ನಂತರ ಇದು ಇಲ್ಲೂ ಸೋಲು ಸಂಭವಿಸಿದ್ದರಿಂದ ಅಲ್ಲಿ ಎಲ್‌ಡಿಪಿ ನೇತೃತ್ವದ ಒಕ್ಕೂಟವು ಬಹುಮತವನ್ನು ಗಳಿಸುವಲ್ಲಿ ವಿಫಲವಾಯ್ತು.
ಸೋಮವಾರದ ಪಕ್ಷದ ಮತದಾನಕ್ಕೆ ಮುಂಚಿತವಾಗಿ, ಇಶಿಬಾ ಅವರು ಕೃಷಿ ಸಚಿವ ಶಿಂಜಿರೊ ಕೊಯಿಜುಮಿ ಮತ್ತು ರಾಜೀನಾಮೆ ನೀಡುವಂತೆ ಸೂಚಿಸಿರಬಹುದಾದ ಮಾಜಿ ಪ್ರಧಾನಿ ಯೋಶಿಹೈಡ್ ಸುಗಾ ಅವರೊಂದಿಗೆ ಸಭೆ ನಡೆಸಿದರು ಸಭೆಯ ಬಳಿಕ ಅವರು ರಾಜೀನಾಮೆ ಘೋಷಿಸಿದ್ದಾರೆ. ಕಳೆದ ವಾರ ಸಂಸತ್ ಚುನಾವಣೆಯಲ್ಲಾದ ಸೋಲನ್ನು ಪರಿಶೀಲಿಸಲು ಎಲ್‌ಡಿಪಿ ನಿರ್ಧರಿಸಿತ್ತು ಮತ್ತು ಪಕ್ಷದ ಸಂಪೂರ್ಣ ಕೂಲಂಕುಶ ಪರೀಕ್ಷೆಗೆ ಕರೆ ನೀಡಿತ್ತು. ಅಕ್ಟೋಬರ್ ಆರಂಭದಲ್ಲಿ ನಡೆಯಲಿರುವ ಪಕ್ಷದ ಅಧ್ಯಕ್ಷೀಯ ಚುನಾವಣೆಗೆ ಎಲ್‌ಡಿಪಿ ಸ್ಪರ್ಧಿಸುವ ನಿರೀಕ್ಷೆಯಿದೆ. ಇಶಿಬಾ ಅವರ ಪ್ರಮುಖ ಸಹಾಯಕ ಎಲ್‌ಡಿಪಿ ಪ್ರಧಾನ ಕಾರ್ಯದರ್ಶಿ ಹಿರೋಷಿ ಮೊರಿಯಾಮಾ ಕೂಡ ಸೆಪ್ಟೆಂಬರ್ 2 ರಂದು ರಾಜೀನಾಮೆ ನೀಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದರು. ಆದರೆ, ಇಶಿಬಾ ರಾಜೀನಾಮೆಯನ್ನು ಸ್ವೀಕರಿಸಿರಲಿಲ್ಲ.
