Africa: ಈತನಿಗೆ 15 ಪತ್ನಿಯರು, 107 ಮಕ್ಕಳು; ಜಗತ್ತಿನ ಅತಿ ದೊಡ್ಡ ಕುಟುಂಬಗಳಲ್ಲಿ ಇದೂ ಒಂದು..!

ಆಫ್ರಿಕಾದ ವ್ಯಕ್ತಿಯೊಬ್ಬರು 15 ಪತ್ನಿಯರು ಹಾಗೂ 107 ಮಕ್ಕಳನ್ನು ಹೊಂದಿದ್ದು, ಒಟ್ಟಿಗೆ ಸಂಸಾರ ನಡೆಸುತ್ತಿದ್ದಾರೆ. ತನ್ನ ಎಲ್ಲಾ ಪತ್ನಿಯರು ತಮ್ಮ ಕೆಲಸಗಳನ್ನು ಹಂಚಿಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದಾರೆ ಎಂದೂ ಈ ವ್ಯಕ್ತಿ ಹೇಳಿಕೊಂಡಿದ್ದಾರೆ. 

this african man has 15 wives and 107 children compares himself to king solomon ash

ಒಬ್ಬರು ಹೆಂಡತಿ (Wife), ಒಂದು ಇಲ್ಲ 2 ಮಕ್ಕಳನ್ನು (Children) ನಿಭಾಯಿಸುವುದರಲ್ಲೇ ಸಾಮಾನ್ಯವಾಗಿ ಪತಿಯರು (Husband) ಸುಸ್ತಾಗಿ ಹೋಗುತ್ತಾರೆ. ಕೆಲವರು ಒಂದು ಹೆಂಡತಿಯನ್ನು ಮದುವೆಯಾದ ಬಳಿಕ ಗುಟ್ಟಾಗಿ ಎರಡನೇ ಮದುವೆಯಾಗಿ ಬೇರೆ ಕಡೆ ಸಂಸಾರ ನಡೆಸುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ 15 ಪತ್ನಿಯರು ಮತ್ತು 107 ಮಕ್ಕಳೊಂದಿಗೆ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಆಫ್ರಿಕಾದ (Africa) ಡೇವಿಡ್‌ ಸಕಾಯೋ ಕಲುಹಾನಾ ಎಂಬ ಈ ವ್ಯಕ್ತಿಗೆ ವಯಸ್ಸು 61 ಆಗಿದ್ದು, ಪಶ್ಚಿಮ ಕೀನ್ಯಾದಲ್ಲಿ (Kenya) ತನ್ನ 15 ಜನ ಹೆಂಡತಿಯರೊಂದಿಗೆ ವಾಸವಾಗಿದ್ದಾನೆ. ಈತ ತನ್ನನ್ನು 700 ಜನ ಹೆಂಡತಿಯರು 300 ಪ್ರೇಯಸಿಯರಿದ್ದ ಕಿಂಗ್‌ ಸೊಲೋಮನ್‌ ಜೊತೆ ಹೋಲಿಸಿಕೊಂಡಿದ್ದಾನೆ. ಈ ಕುಟುಂಬ ಒಂದಾಗಿ ಜೀವನ ನಡೆಸುತ್ತಿರುವ ಬೆರಗುಗೊಳಿಸುವಂತಹ ವಿಡಿಯೋ ಸಹ ಇದೆ ನೋಡಿ. 

ಹೌದು, ಜಗತ್ತಿನ ಅತಿ ದೊಡ್ಡ ಕುಟುಂಬವೊಂದರ ಬೆರಗುಗೊಳಿಸುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಡೇವಿಡ್‌ ಸಕಾಯೋ ಕಲುಹಾನಾ ಎಂಬ ಆಫ್ರಿಕನ್ ವ್ಯಕ್ತಿಗೆ 15 ಹೆಂಡತಿಯರು ಮತ್ತು 107 ಮಕ್ಕಳಿದ್ದಾರೆ. ಇದು ಅಚ್ಚರಿಯ ವಿಷಯ ಅಲ್ಲವೇ..? 61 ವರ್ಷ ವಯಸ್ಸಿನವರು ಪಶ್ಚಿಮ ಕೀನ್ಯಾದ ಗ್ರಾಮೀಣ ಹಳ್ಳಿಯಲ್ಲಿ ತಮ್ಮ ಎಲ್ಲಾ ಹೆಂಡತಿಯರೊಂದಿಗೆ ಯಾವುದೇ ಅಸಮಾಧಾನವಿಲ್ಲದೆ ವಾಸಿಸುತ್ತಿದ್ದಾರಂತೆ. 

16 ವರ್ಷದ ಬಾಲಕಿಯನ್ನು ಮದುವೆಯಾದ 52ರ ವರ: 3 ತಿಂಗಳಾದ್ಮೇಲೆ ಗೊತ್ತಾಯ್ತು ಆಕೆ ಅಪ್ರಾಪ್ತೆಯೆಂದು

ಆಫ್ರಿಮ್ಯಾಕ್ಸ್‌ ಇಂಗ್ಲೀಷ್‌ಗಾಗಿ (Afrimax English) ಒಂದು ಸಣ್ಣ ಸಾಕ್ಷ್ಯಚಿತ್ರದಲ್ಲಿ, ಡೇವಿಡ್‌ ಸಕಾಯೋ ಕಲುಹಾನಾ ಅವರು, ತಾನು ಹೆಚ್ಚಿನ IQ ಅನ್ನು ಹೊಂದಿದ್ದೇನೆ ಎಂದು ಹೇಳುವುದನ್ನು ಕೇಳಬಹುದು. ಈ ಹಿನ್ನೆಲೆ, ಒಬ್ಬ ಹೆಂಡತಿಯಿಂದ ನಿರ್ವಹಿಸಲಾಗುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಈ ವ್ಯಕ್ತಿ ಇತಿಹಾಸಕಾರರಾಗಿದ್ದು, ಅವರು 4000 ಪುಸ್ತಕಗಳನ್ನು ಓದಿರುವುದಾಗಿಯೂ ಹೇಳಿಕೊಳ್ಳುತ್ತಾರೆ. ತನ್ನ ಎಲ್ಲಾ ಪತ್ನಿಯರು ತಮ್ಮ ತಮ್ಮ ಕರ್ತವ್ಯಗಳನ್ನು ಹಂಚಿಕೊಂಡು ಪರಸ್ಪರ ಸಂತೋಷದಿಂದ ಬದುಕುತ್ತಾರೆ ಎಂದು ಡೇವಿಡ್‌ ಸಕಾಯೋ ಕಲುಹಾನಾ ಈ ವಿಡಿಯೋದಲ್ಲಿ ಪ್ರತಿಪಾದಿಸಿದ್ದಾರೆ.

ತನ್ನ ಎಲ್ಲಾ ಹೆಂಡತಿಯರು ತನ್ನನ್ನು ರಾಜನಂತೆ ನೋಡಿಕೊಳ್ಳುತ್ತಾರೆ ಎಂದೂ ಈ ವ್ಯಕ್ತಿ ಬಹಿರಂಗಪಡಿಸಿದ್ದಾರೆ. 1933 ರಲ್ಲಿ  ಡೇವಿಡ್ ಕಲುಹಾನಾ ಮೊದಲನೇ ವಿವಾಹವಾಗಿದ್ದು, ತಾವಿಬ್ಬರೂ  13 ಮಕ್ಕಳನ್ನು ಹೊಂದಿರುವುದಾಗಿ ಮೊದಲ ಪತ್ನಿ ಜೆಸ್ಸಿಕಾ ಕಲುಹಾನಾ ಹೇಳಿದರು. ಇನ್ನು, ತನ್ನ ಪತಿ ಹೊಸ ಮಹಿಳೆಯರನ್ನು ಕರೆತರುವ ಬಗ್ಗೆ ನನಗೆ ಎಂದಿಗೂ ಅಸೂಯೆ ಇರಲಿಲ್ಲ. ಅವರು ಜವಾಬ್ದಾರಿಯುತ ವ್ಯಕ್ತಿ ಮತ್ತು ಅವರು ಏನು ಮಾಡಿದರೂ ಅದು ಯಾವಾಗಲೂ ಸರಿಯಾಗಿರುತ್ತದೆ. ಏಕೆಂದರೆ ಅವರು ಕಾರ್ಯನಿರ್ವಹಿಸುವ ಮೊದಲು ಯೋಚಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ’’ ಎಂದು ಹೇಳಿದರು. ಈ ಮಧ್ಯೆ, ನಾವೆಲ್ಲರೂ ಶಾಂತಿಯಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಡೇವಿಡ್‌ನ 7ನೇ ಪತ್ನಿ ರೋಸ್ ಕಲುಹಾನಾ ಉಲ್ಲೇಖಿಸಿದ್ದಾರೆ.

ಅದೃಷ್ಟ ಅಂದ್ರೆ ಇದಪ್ಪಾ..! ಹಳೆ ಗಾಡಿ ಲೈಸನ್ಸ್‌ ನಂಬರ್‌ಗೆ ಹೊಡೀತು 40 ಲಕ್ಷ Lottery

ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವ ಕುರಿತು ಮಾತನಾಡಿದ ಡೇವಿಡ್ ಕಲುಹಾನಾ ಅವರು 1000 ಹೆಂಡತಿಯರನ್ನು ಹೊಂದಿದ್ದ ರಾಜ ಸೊಲೋಮನ್‌ನಿಂದ ತಾವು ಸ್ಫೂರ್ತಿ ಪಡೆದಿರುವುದಾಗಿ ಹೇಳಿದರು. ಅಲ್ಲದೆ, ತಾನು ಸೋಲೋಮನ್‌ಗಿಂತ ಕಡಿಮೆಯಿಲ್ಲ ಎಂದು ಪರಿಗಣಿಸುತ್ತೇನೆ ಎಂದು. ಅದಕ್ಕಾಗಿಯೇ ತಾನು ಇನ್ನೂ ಹೆಚ್ಚಿನ ಮಹಿಳೆಯರನ್ನು ಹೆಂಡತಿಯಾಗಿ ಮಾಡಿಕೊಳ್ಳುವುದನ್ನು ಮುಂದುವರೆಸುವ ಬಗ್ಗೆ ಆಫ್ರಿಕನ್‌ ವ್ಯಕ್ತಿ ಹೇಳಿಕೊಂಡಿದ್ದಾರೆ. 

ಯೂಟ್ಯೂಬ್‌ನಲ್ಲಿ ಆಫ್ರಿಮ್ಯಾಕ್ಸ್‌ ಇಂಗ್ಲೀಷ್‌ ಹಂಚಿಕೊಂಡಿರುವ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಗೂ, ನೂರಾರು ಬಳಕೆದಾರರು ಕಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು “ದುರಾಸೆ ಮನುಷ್ಯನ ಪಾಪ. ನಾನು ಎಲ್ಲಾ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತೇನೆ. ಆದರೆ 1 ಪುರುಷನನ್ನು 15 ಮಹಿಳೆಯರು ಮತ್ತು 100+ ಮಕ್ಕಳ ನಡುವೆ ಸಮಾನವಾಗಿ ವಿಭಜಿಸಲು ಸಾಧ್ಯವಿಲ್ಲ. ಆದರೆ ದೇವರು ಅವರನ್ನು ಆಶೀರ್ವದಿಸಲಿ” ಎಂದು ಬರೆದಿದ್ದಾರೆ. 

Latest Videos
Follow Us:
Download App:
  • android
  • ios