ಸೆಕ್ಸ್ ತುಂಬಾ ತಂಪು, ಆದರೆ ವ್ಲಾದಿಮಿರ್ ಪುಟಿನ್ ಸಾವು ಅದಕ್ಕಿಂತಲೂ ಉತ್ತಮ ಅನ್ನೋ ಬರಹವಿರುವ ಬ್ಯಾಗ್ ಫೋಟೋವೊಂದು ರಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ. ಜೊತೆಗೆ ಮಹತ್ವದ ಎಚ್ಚರಿಕೆಯನ್ನು ನೀಡಲಾಗಿದೆ. 

ಮಾಸ್ಕೋ(ಆ.06) ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಉಭಯ ದೇಶಗಳಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಿದೆ. ಉಕ್ರೇನ್ ಮೇಲೆ ದಂಡೆತ್ತಿ ಹೋದ ರಷ್ಯಾ ಇದೀಗ ಪ್ರತಿಷ್ಠೆಗಾಗಿ ಯುದ್ಧ ಮುಂದುವರಿಸಿದೆ. ವರ್ಷಗಳೇ ಉರುಳಿದರೂ ಉಕ್ರೇನ್ ಮೇಲಿನ ಯುದ್ಧ ಮಾತ್ರ ನಿಂತಿಲ್ಲ. ಹೀಗಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡೆಗೆ ಪರ ವಿರೋಧಗಳಿವೆ. ಇದೀಗ ಪುಟಿನ್ ನಡೆಯನ್ನು ವಿರೋಧಿಸಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸೆಕ್ಸ್ ತಂಪಾಗಿದೆ. ಆದರೆ ಪುಟಿನ್ ಸಾವು ಅದಕ್ಕಿಂತ ಉತ್ತಮ ಅನ್ನೋ ಬರಹದ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಇಷ್ಟೇ ಅಲ್ಲ ಮಹಿಳೆಯನ್ನು ಪತ್ತೆ ಹಚ್ಚಿದ ರಷ್ಯಾ ಪೊಲೀಸರು, ದಂಡ ವಿಧಿಸಿದ್ದಾರೆ. ಜೊತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. 

ಮಹಿಳೆಯೊಬ್ಬರು ತಮ್ಮ ಹ್ಯಾಂಡ್ ಬ್ಯಾಗ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಟ್ಟೆ ಚೀಲವೊಂದರಲ್ಲಿ ಸೆಕ್ಸ್ ತಂಪಾಗಿದೆ. ಆದರೆ ಪುಟಿನ್ ಸಾವು ಅದಕ್ಕಿಂತ ಉತ್ತಮ(Sex is cool, but President Putin's death is better) ಅನ್ನೋ ಬರಹವಿತ್ತು. ಈ ಬ್ಯಾಗ್ ಫೋಟೋ ತೆಗೆದ ಅಲೆಕ್ಸಾಂಡ್ರಾ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. 

ರಷ್ಯಾದ ಈ ಕ್ಷಿಪಣಿ ಎದುರಿಸಲು ಪರದಾಡ್ತಿದೆ ಉಕ್ರೇನ್ ವಾಯು ರಕ್ಷಣಾ ಪಡೆ: ಪುಟಿನ್‌ ಮೇಲುಗೈ ಸಾಧಿಸೋಕೆ ಇದೇ ಕಾರಣ..!

ಹತ್ತಿಯ ಬಿಳಿ ಬಣ್ಣದ ಕೈಚೀಲದ ಮೇಲಿದ್ದ ಈ ಬರಹ ಭಾರಿ ವೈರಲ್ ಆಗಿದೆ. ಪೋಸ್ಟ್ ಮಾಡಿದ ಬೆನ್ನಲ್ಲೇ ಪರ ವಿರೋಧದ ಕಮೆಂಟ್ ವ್ಯಕ್ತವಾಗಿದೆ. ಈ ಪ್ರತಿಕ್ರಿಯೆಗಳಿಗೆ ತಲೆಕೆಡಿಸಿಕೊಳ್ಳದ ಅಲೆಕ್ಸಾಂಡ್ರಾ ತಮ್ಮ ಪಾಡಿಗೆ ತಾವಿದ್ದರು. ಆದರೆ ಈ ವೈರಲ್ ಪೋಸ್ಟ್ ರಷ್ಯಾ ಪೊಲೀಸರ ಕಣ್ಣಿಗೂ ಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಗೆ ಹುಡುಕಾಟ ಆರಂಭಿಸಿದ್ದಾರೆ.

ರಷ್ಯಾ ಅಧ್ಯಕ್ಷರನ್ನು ಅವಮಾನಿಸುವ ಹಾಗೂ ಅವಹೇಳನ ಮಾಡುವ ಪೋಸ್ಟ್ ಹಾಕಿದ್ದಾರೆ ಎಂದು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮನೆಯಲ್ಲಿ ಹಾಯಾಗಿದ್ದ ಮಹಿಳೆಗೆ ಪೊಲೀಸರು ಶಾಕ್ ನೀಡಿದ್ದಾರೆ. ಕಾರಣ ಮಹಿಳೆ ಮನೆಗೆ ತೆರಳಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮಿನಿಸ್ಟ್ರಿ ಆಫ್ ಇಂಟರ್ನಲ್ ಅಫೈರ್ಸ್ ಸಚಿವಾಲಯಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

Scroll to load tweet…

ಇದೇ ವೇಳೆ ಮಹಿಳೆಯ ಕೈ, ಕತ್ತು ಹಾಗೂ ಇತರ ಭಾಗದಲ್ಲಿದ್ದ ಟ್ಯಾಟೋಗಳ ಕುರಿತು ವಿಚಾರಣೆ ನಡೆಸಲಾಗಿದೆ. ಟ್ಯಾಟೋ ಫೋಟೋಗಳನ್ನು ಪೊಲೀಸರು ತೆಗೆದಿದ್ದಾರೆ. ಇನ್ನು ರಷ್ಯಾದ ಅಧ್ಯಕ್ಷರ ಅವಹೇಳನ, ಅಧ್ಯಕ್ಷರ ವಿರುದ್ಧ ಹಾನಿಕಾರಕ ಸಂದೇಶ ಹರಡಲು ಪ್ರಯತ್ನಿಸಿದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ 25,872 ರೂಪಾಯಿ ದಂಡ ವಿಧಿಸಿದ್ದಾರೆ.

ಉಕ್ರೇನ್ ಯುದ್ಧ ನಿಲ್ಲಿಸಲು ರಷ್ಯಾ ತಯಾರಿದೆ, ಮೊದಲ ಬಾರಿಗೆ ಪುಟಿನ್ ಶಾಂತಿ ಮಾತು!

ಇದೀಗ ಇದೇ ವಿಚಾರವನ್ನು ಉಕ್ರೇನ್ ಬಳಸಿಕೊಂಡಿದೆ.ರಷ್ಯಾದ ನಾಗರೀಕರೇ ಪುಟಿನ್ ವಿರುದ್ಧವಾಗಿದ್ದಾರೆ. ಜಗತ್ತು ಪುಟಿನ್ ವಿರುದ್ಧಾಗಿದೆ. ಆದರೂ ಪುಟಿನ ಅಹಂಕಾರ ಕಡಿಮೆಯಾಗಿಲ್ಲ ಎಂದು ಉಕ್ರೇನ್ ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಇತ್ತ ರಷ್ಯಾ-ಉಕ್ರೇನ್‌ ಯುದ್ಧ ನಿರಂತರವಾಗಿ ನಡೆಯುತ್ತಿದೆ. ರಷ್ಯಾ ರಾಜಧಾನಿ ಮಾಸ್ಕೋ ಮೇಲೆ 3 ಡ್ರೋನ್‌ ದಾಳಿ ಸಂಭವಿಸಿದೆ. ಇದರ ಪರಿಣಾಮ ಒಬ್ಬರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.ಮುಂಜಾನೆ ವೇಳೆಗೆ ಮಾಸ್ಕೋ ಸಮೀಪ ಡ್ರೋನ್‌ ಬರುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಒಂದು ಡ್ರೋನ್‌ನನ್ನು ಹೊಡೆದುರುಳಿಸಿದರು. ಮತ್ತೆರಡು ಡ್ರೋನ್‌ಗಳು ಜಾಮ್‌ ಆದ ಪರಿಣಾಮ ಅವುಗಳು ಇಲ್ಲಿನ ಪ್ರದೇಶವೊಂದರ ಮೇಲೆ ಬಿದ್ದಿವೆ. ಇದರಿಂದಾಗಿ ಅಲ್ಲಿನ ಕೆಲ ಕಟ್ಟಡಗಳಿಗೆ ಹಾನಿಯಾಗಿ, ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.