ನ್ಯೂಯಾರ್ಕ್ ಸಬ್‌ವೇ ಮೆಟ್ರೋ ಸ್ಟೇಶನ್‌ನಲ್ಲಿ ದಾಳಿ ಏಕಾಏಕಿ ದುಷ್ಕರ್ಮಿಯಿಂದ ಗುಂಡಿನ ದಾಳಿ 13 ಮಂದಿ ಗಂಭೀರ ಹಲವರಿಗೆ ಗಾಯ, ಚೀರಾಡುತ್ತಾ ಓಡಿದ ಜನ
ನ್ಯೂಯಾರ್ಕ್(ಏ.12): ಅಮೆರಿಕದ ನ್ಯೂಯಾರ್ಕ್‌ನ ಬ್ರೊಕ್ಲಿನ್‌ನ ಸಬ್‌ವೇ ಮೆಟ್ರೋ ಸ್ಟೇಶನ್‌ನಲ್ಲಿ ದುಷ್ಕರ್ಮಿಯ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಹಲವರಿಗೆ ಸಣ್ಣ ಗಾಯಗಳಾಗಿದೆ. ಏಕಾಏಕಿ ನಡೆದ ದಾಳಿಯಿಂದ ಮೆಟ್ರೋದಿಂದ ಜನರು ಇಳಿದು ದಿಕ್ಕಾಪಾಲಾಗಿ ಓಡಿದ್ದಾರೆ. ಹಲವರು ಗಾಯಗೊಂಡು ಅತ್ತ ಒಡಲು ಆಗದೆ ಇತ್ತ ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಘನಘೋರವಾಗಿದೆ.
ಗುಂಡಿನ ಶಬ್ದಕೇಳುತ್ತಿದ್ದಂತೆ ಮೆಟ್ರೋ ರೈಲು ನಿಲ್ಲಿಸಲಾಗಿದೆ. ಪ್ರಯಾಣಿಕರು ರೈಲಿನಿಂದ ಜಿಗಿದು ಓಡಿದ್ದಾರೆ. ಆದರೆ ದುಷ್ಕರ್ಮಿ ಸತತ ಗುಂಡಿನ ದಾಳಿ ನಡೆಸಿದ್ದಾನೆ. ಸ್ಥಳೀಯ ಮಾಧ್ಯಮಗಳು ಕೆಲ ಸ್ಫೋಟಕಗಳು ಪತ್ತೆಯಾಗಿದೆ ಎಂದು ವರದಿ ಮಾಡಿದೆ.
ಭಾರತದ ವಿದ್ಯಾರ್ಥಿ ಮೇಲೆ ಕೆನಡಾದಲ್ಲಿ ಗುಂಡಿನ ಮಳೆ
ದಾಳಿ ಮಾಡಿದ ದುಷ್ಕರ್ಮಿ ತಲೆಮೆರೆಸಿಕೊಂಡಿದ್ದಾನೆ. ಆದರೆ ಬ್ರೋಕ್ಲಿನ್ ಪ್ರದೇಶದಲ್ಲಿ ಅಡಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಬ್ರೊಕ್ಲಿನ್‌ನ 36ನೇ ಮುಖ್ಯರಸ್ತೆಯ 4ನೇ ಅವೆನ್ಯೂ ಏರಿಯಾದ ಕಡೆ ಯಾರು ತೆರಳಬೇಡಿ, ಈ ಮಾರ್ಗದಲ್ಲಿ ಸಂಚರಿಸಬೇಡಿ. ಕೇವಲ ತುರ್ತು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಪೊಲೀಸರು ಸೂಚಿಸಿದ್ದಾರೆ.
ಮೆಟ್ರೋ ಸ್ಟೇಶನ್ ಬಳಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ದಾಳಿಕೋರರು ಇದೇ ವಲಯದಲ್ಲಿ ಅಡಗಿರುವ ಕಾರಣ ಮತ್ತೆ ಗುಂಡಿನ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಪೊಲೀಸರು ನೆರವು ನೀಡಿದ್ದಾರೆ.
ಪತಿಗೆ ಗುಂಡಿಕ್ಕಿ, ಪುತ್ರನ ಎದುರೇ ಅತ್ಯಾಚಾರ, ರಷ್ಯಾ ಸೈನಿಕರ ಕರಾಳ ಮುಖ ಅನಾವರಣ ಮಾಡಿದ ಮಹಿಳೆ!
5 ಅಡಿ 5 ಇಂಚು ಎತ್ತರದ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಸಿಸಿಟಿವಿ ಪರಿಶೀಲಿಸುತ್ತಿರುವ ಪೊಲೀಸರು ಆತನ ಪತ್ತೆಗೆ ಇಡೀ ವಲಯ ಸುತ್ತವರಿದಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಈತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ.
25ನೇ ಸ್ಟೇಶನ್‌ನಲ್ಲಿ ಮೆಟ್ರೋ ಹತ್ತಿದ ಈತ, ಪ್ರಯಾಣಿಸುತ್ತಿದ್ದ ಮೆಟ್ರೋದೊಳಗೆ ಸ್ಮೋಕ್ ಸ್ಫೋಟಕ ಸಿಡಿಸಿದ್ದಾನೆ. ಹೊಗೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ಶಬ್ದ ಹಾಗೂ ಪ್ರಯಾಣಿಕರ ಆರ್ತನಾದ ಕೇಳುತ್ತಿದ್ದಂತೆ ಮುಂದಿನ ನಿಲ್ದಾಣವಾದ 36ನೇ ಸ್ಟೇಶನ್‌ನಲ್ಲಿ ಮೆಟ್ರೋ ನಿಲ್ಲಿಸಲಾಗಿದೆ. ಈ ವೇಳೆ ಪ್ರಯಾಣಿಕರು ರಕ್ತದಿಂದ ತೊಯ್ದು ಹೊರಬಂದಿದ್ದಾರೆ. ಗಾಯಗೊಂಡ ಹಲವರು ನಡೆಯಲು ಸಾಧ್ಯವಾಗದೆ ಇತರರ ಸಹಾಯದಿಂದ ಆ್ಯಂಬುಲೆನ್ಸ್ ವರೆಗೆ ಕೊಂಡೊಯ್ದಿದ್ದಾರೆ.
ಘಟನೆ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾಹಿತಿ ಪಡೆದುಕೊಂಡಿದ್ದಾರೆ. ತಕ್ಷಣ ಕ್ರಮಕ್ಕೆ ಸೂಚಿಸಿದ್ದಾರೆ. ವೈಟ್ ಹೌಸ್ ಅಧಿಕಾರಿಗಳು ನ್ಯೂಯಾರ್ಕ್ ಮೇಯರ್ ಹಾಗೂ ಪೊಲೀಸ್ ಕಮಿಷನರ್ ಜೊತೆ ಸಂಪರ್ಕದಲ್ಲಿದ್ದಾರೆ. ಜೊತೆಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಶ್ವೇತಭವನದ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು, ಹೆಚ್ಚುವರಿ ಭದ್ರತಾ ಪಡೆ ಸ್ಥಳದಲ್ಲಿದೆ.ಇಡೀ ಪ್ರದೇಶವನ್ನು ಸುತ್ತುವರಿದೆ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ. ಇಲ್ಲಿಂದ ಜನರನ್ನು ಬೇರೆಡೆ ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ. ಗುಂಡಿನ ದಾಳಿ ನಡೆಸಿ ತಲೆಮೆರಿಸಿಕೊಂಡಿರುವ ದುಷ್ಕರ್ಮಿ ಬಂಧಿಸಲು ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.
ನ್ಯೂಯಾರ್ಕ್ ಸಿಟಿ ಪೊಲೀಸ್ ಡಿಪಾರ್ಟ್‌ಮೆಂಟ್ ತನಿಖೆ ಆರಂಭಿಸಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ನ್ಯೂಯಾರ್ಕ್ ಪೊಲೀಸರು ಹೇಳಿದ್ದಾರೆ. ಅಮೆರಿಕ ಅಟಾರ್ನಿ ಜನರಲ್ ಮೆರಿಕ್ ಗಾರ್ಲೆಂಡ್ ಅಮೆರಿಕ ಸಂಸತ್ತಿನಲ್ಲಿ ಘಟನೆ ವಿವರಣೆ ನೀಡಿದ್ದಾರೆ.
