Asianet Suvarna News Asianet Suvarna News

ಜೈಲಿನಿಂದ ಬಿಡುಗಡೆಯಾಗ್ತಿದ್ದಾರೆ ಅಂತಾರಾಷ್ಟ್ರೀಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್..!

ಉತ್ತರ ಅಮೆರಿಕದ ಇಬ್ಬರು ಪ್ರವಾಸಿಗರನ್ನು ಹತ್ಯೆಗೈದ ಆರೋಪದಲ್ಲಿ 2003 ರಿಂದ ಹಿಮಾಲಯನ್ ಗಣರಾಜ್ಯ ನೇಪಾಳದ ಜೈಲಿನಲ್ಲಿರುವ 78 ವರ್ಷದ ಚಾರ್ಲ್ಸ್ ಶೋಭರಾಜ್‌ರನ್ನು ಆರೋಗ್ಯದ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ನೇಪಾಳದ ಸುಪ್ರೀಂಕೋರ್ಟ್ ಆದೇಶ ನೀಡಿದೆ. 

serial killer charles sobhraj to be released from nepal jail ash
Author
First Published Dec 21, 2022, 8:58 PM IST

1970 ರ ದಶಕದಲ್ಲಿ ಭಾರತ (India) ಸೇರಿ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ (Countries) ನಡೆದ ಸರಣಿ ಕೊಲೆಗಳಿಗೆ ಕಾರಣವಾದ ನೆಟ್‌ಫ್ಲಿಕ್ಸ್ ಸರಣಿ "ದಿ ಸರ್ಪೆಂಟ್" (The Serpent) ನಲ್ಲಿ ಚಿತ್ರಿಸಲಾದ ಫ್ರೆಂಚ್ (French) ಸರಣಿ ಹಂತಕ (Serial Killer) ಚಾರ್ಲ್ಸ್ ಶೋಭರಾಜ್‌ನನ್ನು (Charles Sobhraj( ಬಿಡುಗಡೆ ಮಾಡುವಂತೆ ನೇಪಾಳದ (Nepal) ಉನ್ನತ ನ್ಯಾಯಾಲಯ ಬುಧವಾರ ಆದೇಶಿಸಿದೆ. ಉತ್ತರ ಅಮೆರಿಕದ ಇಬ್ಬರು ಪ್ರವಾಸಿಗರನ್ನು ಹತ್ಯೆಗೈದ ಆರೋಪದಲ್ಲಿ 2003 ರಿಂದ ಹಿಮಾಲಯನ್ ಗಣರಾಜ್ಯ ನೇಪಾಳದ ಜೈಲಿನಲ್ಲಿರುವ 78 ವರ್ಷದ ಚಾರ್ಲ್ಸ್ ಶೋಭರಾಜ್‌ರನ್ನು ಆರೋಗ್ಯದ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ನೇಪಾಳದ ಸುಪ್ರೀಂಕೋರ್ಟ್ (Supreme Court) ಆದೇಶ ನೀಡಿದೆ. 

"ಅವರನ್ನು ನಿರಂತರವಾಗಿ ಜೈಲಿನಲ್ಲಿ ಇಡುವುದು ಕೈದಿಯ ಮಾನವ ಹಕ್ಕುಗಳಿಗೆ ಅನುಗುಣವಾಗಿಲ್ಲ" ಎಂದು ನೇಪಾಳದ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರತಿಯನ್ನು ಸುದ್ದಿಸಂಸ್ಥೆ ಎಎಫ್‌ಪಿ ಮಾಹಿತಿ ನೀಡಿದೆ. ಅವರನ್ನು ಜೈಲಿನಲ್ಲಿ ಇರಿಸಲು ಇತರೆ ಯಾವುದೇ ಬಾಕಿ ಪ್ರಕರಣಗಳಿಲ್ಲದಿದ್ದರೆ, ಈ ನ್ಯಾಯಾಲಯವು ಅವರನ್ನು ಇಂದು ಬಿಡುಗಡೆ ಮಾಡಲು ಆದೇಶಿಸುತ್ತದೆ. ಮತ್ತು 15 ದಿನಗಳಲ್ಲಿ ಅವರ ದೇಶಕ್ಕೆ ಹಿಂತಿರುಗಲು ಆದೇಶಿಸುತ್ತದೆ ಎಮದೂ ನೇಪಾಳದ ಸುಪ್ರೀಂಕೋರ್ಟ್‌ ಹೇಳಿದೆ. 

ಇದನ್ನು ಓದಿ: ನೆಲದಡಿ ಪತ್ತೆಯಾಯ್ತು 3,787 ಮೂಳೆಗಳು, 7 ಮಂದಿಯನ್ನು ಹತ್ಯೆಗೈದ ಶಂಕೆ!

ಬಾಲ್ಯದಲ್ಲಿ ಅನೇಕ ತೊಂದರೆ ಮತ್ತು ಸಣ್ಣ ಅಪರಾಧಗಳಿಗಾಗಿ ಫ್ರಾನ್ಸ್‌ನಲ್ಲಿ ಹಲವು ಬಾರಿ ಜೈಲು ಶಿಕ್ಷೆಗಳನ್ನು ಅನುಭವಿಸಿದ ನಂತರ, ಚಾರ್ಲ್ಸ್‌ ಶೋಭರಾಜ್‌ 1970 ರ ದಶಕದ ಆರಂಭದಲ್ಲಿ ಜಗತ್ತನ್ನು ಪ್ರಯಾಣಿಸಲು ಪ್ರಾರಂಭಿಸಿದರು ಮತ್ತು ಥಾಯ್ ರಾಜಧಾನಿ ಬ್ಯಾಂಕಾಕ್‌ಗೆ ಬಂದರು. ಇನ್ನು, ಅವರು ಕೊಲೆ ಮಾಡುವ ಜನರನ್ನು ಮೋದಿ ಮಾಡಿ, ಅವರೊಂದಿಗೆ ಸ್ನೇಹ ಬೆಳೆಸಿ ನಂತರ ಅವರಿಗೆ ಮಾದಕ ವಸ್ತು ನೀಡಿ, ದರೋಡೆ ಮಾಡುವುದು ಹಾಗೂ ಕೊಲೆ ಮಾಡುವ ಕಾರ್ಯ ವಿಧಾನವನ್ನು ಚಾರ್ಲ್ಸ್‌ ಶೋಭರಾಜ್‌ ಅಳವಡಿಸಿಕೊಂಡಿದ್ದರು. ಪ್ರಮುಖವಾಗಿ ಆಧ್ಯಾತ್ಮಿಕತೆಯ ಅನ್ವೇಷಣೆಗೆ ಪಾಶ್ಚಾತ್ಯ ದೇಶಗಳಿಂದ ಬರುವವರನ್ನು ಇವರು ಟಾರ್ಗೆಟ್‌ ಮಾಡುತ್ತಿದ್ದರು. 

1975 ರಲ್ಲಿ ಬಿಕಿನಿಯನ್ನು ಧರಿಸಿ ಪಟ್ಟಾಯದ ಕಡಲತೀರದಲ್ಲಿ ಪತ್ತೆಯಾದ ಯುವ ಅಮೆರಿಕ ಮಹಿಳೆಯ ಮೃತದೇಹ ಪತ್ತೆಯಾದ ಬಳಿಕ ತನ್ನ ಮೊದಲ ಕೊಲೆಗೆ ಚಾರ್ಲ್ಸ್ ಶೋಭರಾಜ್‌ ಅವರನ್ನು ತಪ್ಪಿತಸ್ಥ ಎನ್ನಲಾಗಿತ್ತು. ಒಟ್ಟಾರೆ, ಇವರು 20ಕ್ಕೂ ಹೆಚ್ಚು ಹತ್ಯೆ ಮಾಡಿದ್ದಾರೆ ಎಂದೂ ತಿಳಿದುಬಂದಿದೆ. ಕತ್ತು ಹಿಸುಕಿ, ಹೊಡೆದು ಅಥವಾ ಸುಟ್ಟುಹಾಖಿ ನೇಕ ಕೊಲೆಗಳನ್ನು ಮಾಡಿದ್ದಾರೆ ಈ ಸಿರಿಯಲ್‌ ಕಿಲ್ಲರ್‌ ಚಾರ್ಲ್ಸ್‌ ಶೋಭರಾಜ್‌. ಹಾಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ತಾನು ಕೊಲೆ ಮಾಡಿದ ಪುರುಷರ ಪಾಸ್‌ಪೋರ್ಟ್‌ ಬಳಸುತ್ತಿದ್ದ ಎಂದೂ ತಿಳಿದುಬಂದಿದೆ. ತಾನು ಮಾಡಿದ ಅಪರಾಧಗಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ಇತರರ ರೀತಿ ವೇಷ ಧರಿಸಿ ತಪ್ಪಿಸಿಕೊಳ್ಳುವ ಸಾಮರ್ಥ್ಯದಿಂದ ಅವರ ಜೀವನವನ್ನು ಆಧರಿಸಿದ ‘’ಸರ್ಪೆಂಟ್‌’’ ಎಂಬ ಶೀರ್ಷಿಕೆಯ BBC ಮತ್ತು Netflix ಸೀರಿಸ್‌ ಸಹ ಹಿಟ್‌ ಆಗಿದೆ. 

ಇದನ್ನೂ ಓದಿ: ಸೈನೈಡ್‌ ಮೋಹನ್‌ಗೆ 18ನೇ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ತೀರ್ಪು..!
 
ಭಾರತದಲ್ಲೂ ಬಂಧನವಾಗಿದ್ದ ಸರಣಿ ಹಂತಕ..! 
1976 ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಫ್ರೆಂಚ್ ಪ್ರವಾಸಿ ವಿಷ ಸೇವಿಸಿ ಮೃತಪಟ್ಟ ನಂತರ ಚಾರ್ಲ್ಸ್‌ ಶೋಭರಾಜ್‌ನನ್ನು ಭಾರತದಲ್ಲಿ ಬಂಧಿಸಲಾಯಿತು ಮತ್ತು ಕೊಲೆ ಅಪರಾಧಕ್ಕಾಗಿ 12 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. 1986 ರಲ್ಲಿ ಅವರು ತಪ್ಪಿಸಿಕೊಂಡು ಭಾರತದ ಕರಾವಳಿ ರಾಜ್ಯವಾದ ಗೋವಾದಲ್ಲಿ ಮತ್ತೆ ಸಿಕ್ಕಿಬಿದ್ದ ಕಾರಣ ಒಟ್ಟಾರೆ 21 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದರು. 
 
ನಂತರ, 1997 ರಲ್ಲಿ ಬಿಡುಗಡೆಯಾದ ಚಾರ್ಲ್ಸ್‌ ಶೋಭರಾಜ್‌ ಪ್ಯಾರಿಸ್‌ಗೆ ಹೋದರು. ಬಳಿಕ, 2003 ರಲ್ಲಿ ನೇಪಾಳದಲ್ಲಿ ಮತ್ತೆ ಕಾಣಿಸಿಕೊಂಡ ಅವರನ್ನು ಕಠ್ಮಂಡುವಿನ ಪ್ರವಾಸಿ ಜಿಲ್ಲೆಯಲ್ಲಿ ಗುರುತಿಸಿ, ನಂತರ ಬಂಧಿಸಿದರು. 1975 ರಲ್ಲಿ ಅಮೆರಿಕ ಪ್ರವಾಸಿ ಕೋನಿ ಜೋ ಬ್ರೋಂಜಿಚ್‌ನನ್ನು ಕೊಂದಿದ್ದಕ್ಕಾಗಿ 2004ರಲ್ಲಿ ಅಲ್ಲಿನ ನ್ಯಾಯಾಲಯವು ಸೀರಿಯಲ್‌ ಕಿಲ್ಲರ್‌ಗೆ ಜೀವಾವಧಿ ಶಿಕ್ಷೆ ನೀಡಿತ್ತು. ಹಾಗೆ, ಒಂದು ದಶಕದ ನಂತರ ಅವರು ಬ್ರಾಂಜಿಚ್‌ನ ಕೆನಡಾದ ಸಹಚರನನ್ನು ಕೊಂದ ಅಪರಾಧಿ ಎಂಬುದೂ ಸಾಬೀತಾಗಿತ್ತು.

ಈ ಮಧ್ಯೆ, 2008 ರಲ್ಲಿ ಜೈಲಿನಲ್ಲಿ, ಚಾರ್ಲ್ಸ್‌ ಶೋಭರಾಜ್ ತನಗಿಂತ 44 ವರ್ಷ ಕಿರಿಯ ಮತ್ತು ನೇಪಾಳದ ವಕೀಲರ ಮಗಳಾದ ನಿಹಿತಾ ಬಿಸ್ವಾಸ್ ಅವರನ್ನು ವಿವಾಹವಾದರು.

ಇದನ್ನೂ ಓದಿ: ದೇಶದ ಅತಿ ಭಯಾನಕ ಘಟನೆಯ ಸೂತ್ರದಾರರು ಅಂದರ್

Follow Us:
Download App:
  • android
  • ios