ಮಂಗಳೂರು(ನ.28): ಯುವತಿಯರ ಸರಣಿ ಹಂತಕ ಸೈನೈಡ್‌ ಮೋಹನ್‌ ಕುಮಾರ್‌ (56) ಸರಣಿ ಮಹಿಳೆಯರ ಹತ್ಯೆಯ 18ನೇ ಪ್ರಕರಣದಲ್ಲಿ ಕೊಲೆ ಅಪರಾಧಕ್ಕೆ ಮರಣದಂಡನೆ ವಿಧಿಸಲಾಗಿದೆ. ಹಾಗೂ 30 ಸಾವಿರ ರು. ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಅಪರಾಧಿ ಮೋಹನ್‌ ಮೇಲೆ ಅಪಹರಣ ಪ್ರಕರಣಕ್ಕೆ 10 ವರ್ಷ ಜೈಲು, 5 ಸಾವಿರ ರು. ದಂಡ, ಅತ್ಯಾಚಾರ ಪ್ರಕರಣಕ್ಕೆ 7 ವರ್ಷ ಜೈಲು, 5 ಸಾವಿರ ರು. ದಂಡ, ವಿಷ ಉಣಿಸಿರುವುದಕ್ಕೆ 10 ವರ್ಷ ಜೈಲು, 5 ಸಾವಿರ ರು. ದಂಡ, ಚಿನ್ನಾಭರಣ ಸುಲಿಗೆ 5 ವರ್ಷ ಜೈಲು, 5 ಸಾವಿರ ರು. ದಂಡ, ವಿಷ ಉಣಿಸಿ ಸುಲಿಗೆ ಮಾಡಿರುವುದಕ್ಕೆ 10 ವರ್ಷ ಜೈಲು, 5 ಸಾವಿರ ರು. ದಂಡ, ವಂಚನೆ ಮಾಡಿರುವುದಕ್ಕೆ 1 ವರ್ಷ ಜೈಲು, ಸಾಕ್ಷ್ಯ ನಾಶ ಮಾಡಿರುವುದಕ್ಕೆ 7 ವರ್ಷ ಜೈಲು ಹಾಗೂ 5 ಸಾವಿರ ರು. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಈ ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು. ಹೈಕೋರ್ಟ್‌ ಮರಣದಂಡನೆ ದೃಢೀಕರಿಸಿದರೆ ಈ ಎಲ್ಲ ಶಿಕ್ಷೆಗಳನ್ನು ಅಂತರ್ಗತ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

18ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ಅಪರಾಧ ಸಾಬೀತು

ಮೋಹನ್‌ ಕಾಸರಗೋಡು ಬದಿಯಡ್ಕದ ಕಯ್ಯಾರ ಗ್ರಾಮದ ಪೈವಳಿಕೆ ನಿವಾಸಿ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದ 25 ವರ್ಷದ ಯುವತಿ ಜೊತೆ ಮಾತನಾಡಿ, ತನ್ನನ್ನು ಆನಂದ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿದ್ದ. 2009 ಮೇ 21ರಂದು ಕುಶಾಲನಗರಕ್ಕೆ ತೆರಳಿ ಅಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದ. ರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಮರುದಿನ ದೇವಸ್ಥಾನಕ್ಕೆ ಹೋಗಲಿಕ್ಕಿದೆ. ಚಿನ್ನಾಭರಣ ರೂಮಲ್ಲೇ ಇರಲಿ ಎಂದು ತೆಗೆದಿಡಲು ಹೇಳಿ ಆಕೆಯನ್ನು ಸರ್ಕಾರಿ ಬಸ್‌ ನಿಲ್ದಾಣಕ್ಕೆ ಕರೆದೊಯ್ದಿದ್ದ. ಬಳಿಕ ಗರ್ಭಪಾತ ಮಾತ್ರೆ ಎಂದು ಸೈನೈಡ್‌ ನೀಡಿ ಕೊಲೆ ಮಾಡಿದ್ದ. ಹಿಂತಿರುಗಿ ರೂಮ್‌ಗೆ ತೆರಳಿದ ಆತ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಬಳಿಕ ಮಂಗಳೂರಿಗೆ ತಂದು ಮಾರಾಟ ಮಾಡಿದ್ದನು.

17ನೇ ಕೊಲೆ ಕೇಸಲ್ಲೂ ಸೈನೈಡ್‌ ಮೋಹನ್‌ ದೋಷಿ.

ಯುವತಿ ಮನೆಯಲ್ಲಿ ಅಜ್ಜನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಳು. ಆದರೆ ಅಲ್ಲಿಯೂ ಹೋಗದೆ, ಹಿಂತಿರುಗಿ ಬಾರದೆ ನಾಪತ್ತೆಯಾಗಿದ್ದಳು. ಮೂರು ದಿನಗಳ ಬಳಿಕ ಮನೆಯವರು ಪೊಲೀಸ್‌ ಠಾಣೆಯಗೆ ನಾಪತ್ತೆ ದೂರು ನೀಡಿದ್ದರು. ಸೈನೈಡ್‌ ಮೋಹನ್‌ ಬಂಧನವಾದ ಬಳಿಕ ಈಕೆಯನ್ನು ಕೊಲೆ ಮಾಡಿರುವ ವಿಷಯ ಬಹಿರಂಗಗೊಂಡಿತ್ತು. ಅಂದಿನ ಸಿಒಡಿ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.

ಮಂಗಳೂರು: 16ನೇ ಪ್ರಕರಣದಲ್ಲಿ ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿದುನ್ನೀಸಾ ಅವರು 47 ಸಾಕ್ಷಿ ವಿಚಾರಣೆ ನಡೆಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಜುಡಿತ್‌ ಒ.ಎಂ. ಕ್ರಾಸ್ತ ವಾದಿಸಿದ್ದರು. ಶಿಕ್ಷೆಯ ಪ್ರಮಾಣದ ಸಂದರ್ಭ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿವಾದಿಸಿದ್ದರು. ಸೈನೈಡ್‌ ಮೋಹನ್‌ನ್ನು ಬೆಳಗಾವಿ ಹಿಂಡಲಗಾ ಜೈಲ್‌ನಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲಾಗಿತ್ತು.

18 ಪ್ರಕರಣಗಳಲ್ಲಿ 5ರಲ್ಲಿ ಮರಣ ದಂಡನೆ ಶಿಕ್ಷೆ

ಇದು ಸೈನೈಡ್‌ ಮೋಹನ್‌ನ 18ನೇ ಕೊಲೆ ಪ್ರಕರಣವಾಗಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದ 5 ನೇ ಪ್ರಕರಣ ಇದಾಗಿದೆ. ಈ ಹಿಂದಿನ 4 ಪ್ರಕರಣಗಳಲ್ಲಿ ಹೈಕೋರ್ಟು ಒಂದು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಜೀವಾವಧಿ ಶಿಕ್ಷೆಗೆ ಹಾಗೂ ಇನ್ನೊಂದು ಪ್ರಕರಣದಲ್ಲಿ 5 ವರ್ಷಗಳ ಕಠಿನ ಶಿಕ್ಷೆಗೆ ಇಳಿಸಿದೆ. ಒಂದು ಪ್ರಕರಣದಲ್ಲಿ ಮಾತ್ರ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಕಳೆದ ಅಕ್ಟೋಬರ್‌ನಲ್ಲಿ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆ ಹೈಕೋರ್ಟಿನ ದೃಢೀಕರಣಕ್ಕೆ ಬಾಕಿ ಇದೆ.

ನಿನ್ನ ಸಹವಾಸ ಮಾಡಿದ ಮಹಿಳೆಯರಿಗೆ ಸಾವೇಕೆ ಬಂತು?