Asianet Suvarna News Asianet Suvarna News

ಶಾಲೆಗಳಲ್ಲಿ ಕೋವಿಡ್‌ ಪ್ರಕರಣಗಳ ಪತ್ತೆಗೆ ಶ್ವಾನಗಳ ಬಳಕೆ

 

  • ಹುಂತಾ ಮತ್ತು ಡ್ಯೂಕ್ ಹೆಸರಿನ 14-ತಿಂಗಳ ಲ್ಯಾಬ್‌ ತಳಿಯ ಶ್ವಾನಗಳು
  • ಮ್ಯಾಸಚೂಸೆಟ್ಸ್‌ನಲ್ಲಿ ಕೋವಿಡ್‌ ಪ್ರಕರಣಗಳ ಪತ್ತೆಗೆ ಶ್ವಾನಗಳ ಬಳಕೆ
     
Schools in Massachusetts are using dogs to sniff out Covid19 akb
Author
Bangalore, First Published Jan 13, 2022, 7:41 PM IST

ನ್ಯೂಯಾರ್ಕ್‌(ಜ.13):  ಮ್ಯಾಸಚೂಸೆಟ್ಸ್‌ನ ಶಾಲೆಗಳು ತರಗತಿ ಕೊಠಡಿಗಳಲ್ಲಿ ಕೋವಿಡ್ ಪ್ರಕರಣಗಳ ಪತ್ತೆಹಚ್ಚಲು ನಾಯಿಗಳನ್ನು ಬಳಸುತ್ತಿವೆ. ಮ್ಯಾಸಚೂಸೆಟ್ಸ್‌ನ ಶಾಲೆಯೊಂದರಲ್ಲಿ ಎರಡು ಶ್ವಾನಗಳು ಈ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿವೆ. ಶಾಲೆಯ ಆಡಳಿತ ಮಂಡಳಿ ಈ ತರಬೇತಿ ಪಡೆದ ಎರಡು ಶ್ವಾನಗಳನ್ನು ಬಳಸಿ ಕೋವಿಡ್ ಪ್ರಕರಣಗಳನ್ನು ಪತ್ತೆ ಮಾಡುತ್ತಿದ್ದಾರೆ. 

ಹುಂತಾ ಮತ್ತು ಡ್ಯೂಕ್ ಹೆಸರಿನ 14-ತಿಂಗಳ ಲ್ಯಾಬ್‌ ತಳಿಯ ಶ್ವಾನಗಳು ಇವಾಗಿವೆ. ಮೇ 2021 ರಲ್ಲಿ ಇವುಗಳಿಗೆ ತರಬೇತಿಯನ್ನು ಪ್ರಾರಂಭಿಸಲಾಗಿತ್ತು. ಈಗ ಫ್ರೀಟೌನ್-ಲೇಕ್‌ವಿಲ್ಲೆ (Freetown-Lakeville) ಪ್ರಾದೇಶಿಕ ಶಾಲಾ ಜಿಲ್ಲೆಯ ಶಾಲೆಗಳ ಸಭಾಂಗಣಗಳಲ್ಲಿ ಇವು ಸಂಚರಿಸುತ್ತಿವೆ. ಬ್ರಿಸ್ಟಲ್ ಕೌಂಟಿ ಶೆರಿಫ್ ಕಚೇರಿ (Bristol County Sheriff)ಯು ನಾಯಿಗಳಿಗೆ ತರಬೇತಿ ನೀಡಲು ಫ್ಲೋರಿಡಾ ಇಂಟರ್‌ ನ್ಯಾಷನಲ್ ಯೂನಿವರ್ಸಿಟಿಯೊಂದಿಗೆ  ಕೆಲಸ ಮಾಡಿದೆ ಎಂದು ಏಜೆನ್ಸಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಜೊನಾಥನ್ ಡಾರ್ಲಿಂಗ್ (Jonathan Darling) ಹೇಳಿದ್ದಾರೆ.

 

ಮಾದಕ ವಸ್ತುಗಳನ್ನು ಪತ್ತೆ ಮಾಡುವ  ನಾಯಿಗಳು ಹೇಗೆ ಕೆಲಸ ಮಾಡುತ್ತವೆಯೇ ಅದೇ ರೀತಿ ಈ ಎರಡು ಶ್ವಾನಗಳಿಗೆ ತರಬೇತಿ ನೀಡಲಾಗಿದೆ ಎಂದು ಡಾರ್ಲಿಂಗ್ ಹೇಳಿದ್ದಾರೆ. ಕೋವಿಡ್‌ ಪಾಸಿಟಿವ್ ವ್ಯಕ್ತಿಯೊಬ್ಬರು ಧರಿಸಿದ್ದ ಮಾಸ್ಕ್‌ನ್ನು ತರಬೇತುದಾರರು ತೆಗೆದುಕೊಂಡರು ಮತ್ತು ವೈರಸ್ ಅನ್ನು ಕೊಲ್ಲಲು ಯುವಿ ಲೈಟ್‌ನ್ನು ಬಳಸಿದ ನಂತರ, ಮಾಸ್ಕ್‌ನ್ನು ಎರಡು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿದ್ದರು. ಇದು ಕೋವಿಡ್‌ ಪತ್ತೆ ಮಾಡಲು ಶ್ವಾನಗಳಿಗೆ ಸಹಾಯ ಮಾಡಿದವು. 

Raichur: ಶಿಕ್ಷಣ ಸಚಿವರೇ ಇತ್ತ ಒಮ್ಮೆ ತಿರುಗಿ ನೋಡಿ: 1053 ಮಕ್ಕಳಿಗೆ ಒಂದೇ ಶೌಚಾಲಯ..!

ಕೋವಿಡ್ ಚಯಾಪಚಯ ಬದಲಾವಣೆಗಳನ್ನು ಉಂಟು ಮಾಡುತ್ತದೆ, ಅಲ್ಲದೇ ನಿರ್ದಿಷ್ಟ ವಾಸನೆಯನ್ನು ಗುರುತಿಸಲು ಕಷ್ಟವಾಗುತ್ತದೆ. FIU ಸಂಶೋಧನೆಯ ಪ್ರಕಾರ, ಹುಂತಾ ಮತ್ತು ಡ್ಯೂಕ್‌ನಂತಹ ನಾಯಿಗಳು ಕೋವಿಡ್‌  ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಮತ್ತೊಂದು ದಾರಿ ಎಂದು ಡಾರ್ಲಿಂಗ್ ಹೇಳಿದರು.

ಆರರಿಂದ ಎಂಟು ವಾರಗಳ ತರಬೇತಿಯ ನಂತರ ಈ ಶ್ವಾನಗಳು ಕೋವಿಡ್ ಅನ್ನು ಪತ್ತೆ ಮಾಡುತ್ತಿವೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್‌ನ ಮತ್ತೊಂದು ಅಧ್ಯಯನವು ಹೇಳಿದೆ. ಪ್ರಿಪ್ರಿಂಟ್ ಅಧ್ಯಯನದಲ್ಲಿ, ಆರು ನಾಯಿಗಳು ಕೋವಿಡ್ ಅನ್ನು ನಿಖರವಾಗಿ ಗುರುತಿಸಲು ಸಮರ್ಥವಾಗಿವೆ. ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿ ಕಂಡುಬಂದರೂ, ಕೋವಿಡ್ ಪತ್ತೆ ಮಾಡುವ ನಾಯಿಗಳನ್ನು ಜಗತ್ತಿನಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಒಂದು ಸಾಧನವಾಗಿ ಬಳಸಬಹುದೇ ಎಂಬುದನ್ನು ತಿಳಿಯುವುದಕ್ಕೆ ಇದು ಸೂಕ್ತ ಸಮಯವಲ್ಲ.

Covid 19 Spike: ಇಂದಿನಿಂದ 1-8ನೇ ಭೌತಿಕ ತರಗತಿ ಬಂದ್‌

ಇದು ಕಿಕ್ಕಿರಿದ ಸ್ಥಳಗಳಲ್ಲಿನ ವ್ಯಕ್ತಿಗಳ ಸಂದಣಿಯಿಂದಾಗಿ ಕೆಲವೊಮ್ಮೆ ರೋಗ ಗ್ರಹಿಸುವಲ್ಲಿ ಹಾದಿ ತಪ್ಪಬಹುದು ಮತ್ತು ಕಡಿಮೆ ಮಟ್ಟದ ಸೋಂಕನ್ನು ಹೊಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಕಷ್ಟವಾಗಬಹುದು ಎಂದು ವಾರ್ವಿಕ್‌ನ (Warwick) ವೈರಾಲಜಿಸ್ಟ್ ಲಾರೆನ್ಸ್ ಯಂಗ್ ಯುನೈಟೆಡ್ ಕಿಂಗ್‌ಡಂನ ವೈದ್ಯಕೀಯ ಶಾಲೆ ಹೇಳಿಕೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios