ವಿವಿಧ ದೇಶಗಳಿಂದ ತೆರಳುವ ಹಜ್ ಯಾತ್ರಾರ್ಥಿಗಳು ಕೊರೋನಾ ಲಸಿಕೆಯನ್ನು ಪಡೆದಿರುವುದು ಕಡ್ಡಾಯ. ಲಸಿಕೆ ಪಡೆಯವದರಿಗೆ ಪ್ರವೇಶ ಇರುವುದಿಲ್ಲ.
ತಿರುವನಂಥಪುರಂ (ಮಾ.05): ಭಾರತ ಸೇರಿದಂತೆ ವಿವಿಧ ದೇಶಗಳಿಂದ ತೆರಳುವ ಹಜ್ ಯಾತ್ರಾರ್ಥಿಗಳು ಕೊರೋನಾ ಲಸಿಕೆಯನ್ನು ಪಡೆದಿರುವುದು ಕಡ್ಡಾಯ.
ಅಂಥವರಿಗೆ ಮಾತ್ರ ಹಜ್ ಯಾತ್ರೆಗೆ ಪ್ರವೇಶ ಎಂದು ಸೌದಿ ಅರೇಬಿಯಾ ಗುರುವಾರ ಸುತ್ತೋಲೆ ಹೊರಡಿಸಿದೆ.
ಇದೇ ವೇಳೆ ಮೆಕ್ಕಾ ಮತ್ತು ಮದೀನಾದಲ್ಲಿ ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಿದೆ.
ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರ ಹೊಟ್ಟೆ ತುಂಬಿಸಿದ ಅಬ್ದುಲ್..!
ಪ್ರಸಕ್ತ ವರ್ಷದ ಹಜ್ ಯಾತ್ರೆಯು ಜುಲೈನಲ್ಲಿ ನಡೆಯಲಿದೆ. ಕೊರೋನಾಗೂ ಮೊದಲು ಪ್ರತಿ ವರ್ಷ 20 ಲಕ್ಷ ಯಾತ್ರಾರ್ಥಿಗಳು ಹಜ್‌ಗೆ ಯಾತ್ರೆಗೆ ಧಾವಿಸುತ್ತಿದ್ದರು.
