Asianet Suvarna News Asianet Suvarna News

Tablighi Jamaat ಸಂಘಟನೆಯಿಂದ ದೂರ ಇರಿ: ಸೌದಿ ಅರೇಬಿಯಾ ಪ್ರಜೆಗಳಿಗೆ ಎಚ್ಚರಿಕೆ!

*ತಬ್ಲೀಘಿ ಜೊತೆ ಯಾವುದೇ ನಂಟಿಗೆ ಸೌದಿ ಸರ್ಕಾರ ನಿಷೇಧ
*ಸಂಘಟನೆಯ ಮಾರ್ಗದರ್ಶನ ಉಗ್ರವಾದಕ್ಕೆ ಹೆಬ್ಬಾಗಿಲು
*ಸಂಘಟನೆ ಅಪಾಯಗಳ ಕುರಿತು ಜನರಿಗೆ ಎಚ್ಚರಿಸಲು ಸೂಚನೆ
*ಮುಂದಿನ ಶುಕ್ರವಾರ ಎಲ್ಲಾ ಮಸೀದಿಗಳಲ್ಲೂ ವಿಶೇಷ ಸಂದೇಶ

Saudi Arabia bans Tablighi Jamaat calling it one of the gates of terrorism mnj
Author
Bengaluru, First Published Dec 12, 2021, 9:33 AM IST

ರಿಯಾದ್‌ (ಡಿ. 12): ದಶಕಗಳ ಹಿಂದೆ ಭಾರತದಲ್ಲಿ ಜನ್ಮ ತಾಳಿದ್ದ ತಬ್ಲೀಘಿ ಜಮಾತ್‌ ಸಂಘಟನೆಯಿಂದ (Tablighi Jamaat) ದೂರ ಇರುವಂತೆ ಇಸ್ಲಾಮಿಕ್‌ ದೇಶವಾದ ಸೌದಿ ಅರೇಬಿಯಾ (Saudi Arabia) ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಮುಂದಿನ ಶುಕ್ರವಾರ, ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ವೇಳೆ ಸಂಘಟನೆ, ತಬ್ಲೀಘಿ ಸಂಘಟನೆಯ ತಪ್ಪು ಮಾರ್ಗದರ್ಶನ, ಅದರ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ನೀಡುವಂತೆ ಸರ್ಕಾರ ಎಲ್ಲಾ ಮಸೀದಿಗಳ ಮುಖ್ಯಸ್ಥರಿಗೆ ಸೂಚಿಸಿದೆ.

ಈ ಕುರಿತು ಹೇಳಿಕೆಯೊಂದನ್ನು (Statement) ಬಿಡುಗಡೆ ಮಾಡಿರುವ ಸೌದಿ ಅರೇಬಿಯಾದ ಇಸ್ಲಾಮಿಕ್‌ ವ್ಯವಹಾರಗಳ ಸಚಿವ ಡಾ.ಅಬ್ದುಲ್ಲತೀಫ್‌ ಆಲ್‌-ಶೇಖ್‌, (Dr. Abdullatif bin Abdulaziz Al-Sheikh) ‘ಮುಂದಿನ ಶುಕ್ರವಾರ ಪ್ರಾರ್ಥನೆ ನಡೆಯುವ ಎಲ್ಲಾ ಮಸೀದಿಗಳಲ್ಲೂ ಬೋಧಕರು ತಬ್ಲೀಘಿ ಮತ್ತು ದಾವಾ ಸಂಘಟನೆಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಬೇಕು. ಬೋಧಕರು ಮುಖ್ಯವಾಗಿ 4 ಅಂಶಗಳ ಬಗ್ಗೆ ಪ್ರಸ್ತಾಪಿಸಬೇಕು. ಅವುಗಳೆಂದರೆ

1. ಈ ಸಂಘಟನೆಗಳ ತಪ್ಪು ಮಾರ್ಗದರ್ಶನ, ಅವುಗಳ ಅಡ್ಡದಾರಿ, ಸಂಘಟನೆಗಳಿಂದ ಇರುವ ಅಪಾಯ ಮತ್ತು ಇವು ಭಯೋತ್ಪಾದನೆಗೆ ಹೆಬ್ಬಾಗಿಲು ಎಂಬುದರ ಬಗ್ಗೆ ಎಚ್ಚರಿಸಬೇಕು.

2. ಈ ಸಂಘಟನೆಗಳ ಪ್ರಮುಖ ತಪ್ಪು ನಡೆಗಳ ಬಗ್ಗೆ ವಿವರಣೆ ನೀಡಬೇಕು.

3. ಈ ಸಂಘಟನೆಗಳಿಂದ ಸಮಾಜಕ್ಕೆ ಇರುವ ಅಪಾಯಗಳ ಬಗ್ಗೆ ತಿಳುವಳಿಕೆ ಕೊಡಬೇಕು.

4. ಈ ಸಂಘಟನೆಗಳ ಯಾವುದೇ ನಂಟು ಹೊಂದುವುದನ್ನು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು

ಎಂದು ಸರ್ಕಾರ ಮಸೀದಿಗಳಿಗೆ ಸೂಚಿಸಿದೆ.

 

 

ಯಾವುದೀ ತಬ್ಲೀಘಿ ಜಮಾತ್‌ ಸಂಘಟನೆ?:

ಬ್ರಿಟೀಷರ ಆಡಳಿತದ (British Rule) ಕಾಲದಲ್ಲಿ 1926ರಲ್ಲಿ ಭಾರತದಲ್ಲಿ ಈ ಸಂಘಟನೆ ಆರಂಭವಾಯಿತು. ಸಂಪ್ರದಾಯ, ವಸ್ತ್ರ ಮತ್ತು ವೈಯಕ್ತಿಕ ನಡತೆಗಳಲ್ಲಿ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈ ಸಂಘಟನೆ ತನ್ನ ಆನುಯಾಯಿಗಳಿಗೆ ಬೋಧಿಸುತ್ತದೆ. ವಿಶ್ವದಾದ್ಯಂತ ಇದಕ್ಕೆ ಅಂದಾಜು 40 ಕೋಟಿ ಅನುಯಾಯಿಗಳು ಇದ್ದಾರೆ. ರಾಜಕೀಯ ಚಟುವಟಿಕೆಗಳಿಂದ ತಾನು ಪೂರ್ಣ ದೂರವಿದ್ದು, ಕೇವಲ ಧರ್ಮ ಪ್ರಚಾರವಷ್ಟೇ ತನ್ನ ಉದ್ದೇಶ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.

Kentucky Tornadoes:ಅಮೆರಿಕದಲ್ಲಿ ಸುಂಟರಗಾಳಿಗೆ 70 ಬಲಿ, ಪೀಡಿತ ಪ್ರದೇಶಕ್ಕೆ ಅಧ್ಯಕ್ಷ ಬೈಡೆನ್ ಭೇಟಿ!

ಈ ಸಂಘಟನೆ ನೇರವಾಗಿ ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ (Terrorism Activities) ಭಾಗಿಯಾದ ಉದಾಹರಣೆ ಇಲ್ಲವಾದರೂ, 2001ರಿಂದಲೂ ಈ ಸಂಘಟನೆ ಮೇಲೆ ಅಮೆರಿಕ (USA) ಕೂಡಾ ಕಣ್ಣಿಟ್ಟಿದೆ. ಈ ಸಂಘಟನೆಯ ನೇರವಾಗಿ ಉಗ್ರ ಕೃತ್ಯಕ್ಕೆ ಪ್ರಚೋದನೆ ನೀಡದೇ ಇದ್ದರೂ, ಸಂಘಟನೆಯ ಬೋಧನೆ ಮತ್ತು ನಂಬಿಕೆಗಳು ಅನುಯಾಯಿಗಳನ್ನು ತೀವ್ರವಾದಿ ಮುಸ್ಲಿಂ ಸಂಘಟನೆಗಳತ್ತ ತಳ್ಳುವ ಆರಂಭಿಕ ಕೇಂದ್ರ ಎಂಬುದು ಅಮೆರಿಕದ ವಾದ.

Afghans Sell Body Organs: ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ ಅಫ್ಘಾನಿಗಳು!

ಹರ್ಕತ್‌-ಉಲ್‌-ಮುಜಾಹಿದೀನ್‌ ಎಂಬ ಉಗ್ರ ಸಂಘಟನೆಯ ಸಂಸ್ಥಾಪಕರು ತಬ್ಲೀಘಿ ಜಮಾತ್‌ ಸಂಘಟನೆಗೆ ಸೇರಿದವರು ಎಂಬುದು ಭಾರತ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ನಂಬಿಕೆ. ಕನಿಷ್ಠ 6000 ತಬ್ಲೀಘಿ ಕಾರ್ಯಕರ್ತರನ್ನು ಪಾಕಿಸ್ತಾನದ ಹರ್ಕತ್‌ ಉಲ್‌ ಮುಜಾಹಿದೀನ್‌ ಸಂಘಟನೆಗೆ ಉಗ್ರ ಕೃತ್ಯಗಳಿಗೆ ತರಬೇತಿ ನೀಡಿದೆ ಎಂಬ ಮಾಹಿತಿಯನ್ನು ಎರಡೂ ದೇಶಗಳ ಗುಪ್ತಚರ ಸಂಸ್ಥೆಗಳು ಕಲೆ ಹಾಕಿವೆ. 2020ರಲ್ಲಿ ರಷ್ಯಾದ ಉಗ್ರ ನಿಗ್ರಹ ಪಡೆಗಳು ನಡೆಸಿದ ದಾಳಿಯೊಂದರಲ್ಲಿ ತಬ್ಲೀಘಿ ಸಂಘಟನೆಗೆ ಸೇರಿದ 7 ಉಗ್ರರನ್ನು ಬಂಧಿಸಿದ್ದವು.2020ರಲ್ಲಿ ನವದೆಹಲಿಯಲ್ಲಿ ತಬ್ಲೀಘಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನೂರಾರು ಜನರಿಗೆ ಕೋವಿಡ್‌ ಕೇಸು (Corona Cases) ಪತ್ತೆಯಾದ ಬಳಿಕ ಈ ಹೆಸರು ದೊಡ್ಡ ಮಟ್ಟದಲ್ಲಿ ಚಲಾವಣೆಗೆ ಬಂದಿತ್ತು.

Follow Us:
Download App:
  • android
  • ios