Asianet Suvarna News Asianet Suvarna News

ಲೇಖಕ ಸಲ್ಮಾನ್‌ ರಶ್ದಿ ಗಂಭೀರ, ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!

ಇಂಡಿಯನ್‌ -ಅಮೆರಿಕನ್‌, ಬ್ರಿಟಿಷ್‌-ಅಮೆರಿಕನ್‌ ಲೇಖಕ ಸಲ್ಮಾನ್‌ ರಶ್ಡಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ದುಷ್ಕರ್ಮಿಯೊಬ್ಬ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಅಂದಾಜು 15ಕ್ಕೂ ಹೆಚ್ಚು ಬಾರಿ ಅವರಿಗೆ ತಿವಿದಿದ್ದಾನೆ. ಈ ನಡುವೆ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ಮೂಲಗಳ ಪ್ರಕಾರ, ರಶ್ದಿ ಅವರು ಒಂದು ಕಣ್ಣಿನ ದೃಷ್ಟಿಯನ್ನು ಬಹುತೇಕವಾಗಿ ಕಳೆದುಕೊಳ್ಳಲಿದ್ದಾರೆ.

Salman Rushdie critical Writer put on ventilator unable to speak can lose sight in one eye san
Author
Bengaluru, First Published Aug 13, 2022, 12:42 PM IST

ನ್ಯೂಯಾರ್ಕ್‌ (ಆ.13): ನ್ಯೂಯಾರ್ಕ್‌ನಲ್ಲಿ ನಡೆದ ಭೀಕರ ದಾಳಿಯ ನಂತರ ಭಾರತೀಯ-ಅಮೆರಿಕನ್ ಬ್ರಿಟಿಷ್-ಅಮೆರಿಕನ್ ಬರಹಗಾರ ಸಲ್ಮಾನ್ ರಶ್ದಿ ಕಳೆದ 12 ಗಂಟೆಗಳ ಕಾಲ ವೆಂಟಿಲೇಟರ್‌ನಲ್ಲಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ರಶ್ದಿ ಅವರ ಏಜೆಂಟ್ ಆಂಡ್ರ್ಯೂ ಯೆಲ್ ನೀಡಿರುವ ಮಾಹಿತಿಯ ಪ್ರಕಾರ, ರಶ್ದಿ ಏನನ್ನು ಮಾತನಾಡುತ್ತಿಲ್ಲ. ಬಹುತೇಕ ಒಂದು ಕಣ್ಣಿನ ದೃಷ್ಟಿಯನ್ನು ಅವರು ಕಳೆದುಕೊಳ್ಳಬಹುದು ಎನ್ನಲಾಗಿದ್ದು, ಲಿವರ್‌ಗೂ ಗಂಭೀರ ಪ್ರಮಾಣದ ಗಾಯವಾಗಿದೆ. ಅದರೊಂದಿಗೆ ಅವರ ಕೈಗಳ ರಕ್ತನಾಳಗಳನ್ನೂ ಕತ್ತರಿಸಲಾಗಿದೆ. ಶುಕ್ರವಾರ, ಲೈವ್ ಕಾರ್ಯಕ್ರಮವೊಂದರಲ್ಲಿ 24 ವರ್ಷದ ಹಾದಿ ಮಾತರ್ ರಶ್ದಿಯ ಮೇಲೆ ಹಲ್ಲೆ ನಡೆಸಿದ್ದರು. ಮಾತರ್,‌ ರಶ್ದಿ ಅವರ ಗಂಟಲಿಗೆ 10-15 ಬಾರಿ ಇರಿದಿದ್ದಾನೆ, ನಂತರ ರಶ್ದಿಯನ್ನು ಏರ್-ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ರಶ್ದಿ ಅವರ ಗಂಟಲು ಮತ್ತು ಹೊಟ್ಟೆಯಲ್ಲಿ ಅನೇಕ ಇರಿತದ ಗಾಯಗಳಿವೆ ಎಂದು ಆಸ್ಪತ್ರೆಯ ವೈದ್ಯರು ಯುಎಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದ ಬೆನ್ನಲ್ಲಿಯೇ ತಕ್ಷಣವೇ ಶಸ್ತ್ರಚಿಕಿತ್ಸೆಯಾಗಿದೆ. ಘಟನೆಯ ನಂತರ ಉಪನ್ಯಾಸದ ವೇದಿಕೆಯ ಮೇಲಿದ್ದ ಸೋಫಾ ಮತ್ತು ಗೋಡೆಯ ಮೇಲೆ ರಕ್ತದ ಕಲೆಗಳಿದ್ದವು. ಕಾರ್ಯಕ್ರಮದ ವೇಳೆ, ಸಭಿಕರಲ್ಲಿ ಕುಳಿತಿದ್ದ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿದ್ದು,  ರಶ್ದಿಯವರ ದೇಹದ ಮೇಲೆ ಹಲವಾರು ಗಾಯಗಳು ಕಂಡುಬಂದಿವೆ ಎಂದು ಹೇಳಿದ್ದಾರೆ.

ಸಲ್ಮಾನ್‌ ರಶ್ದಿ ಬರೆದಿದ್ದ ದಿ ಸೆಟಾನಿಕ್ ವರ್ಸಸ್ ಕಾದಂಬರಿ ಮುಸ್ಲಿಂ ಸಂಪ್ರದಾಯಗಳ ಕುರಿತಾಗಿ ಇತ್ತು. ಈ ವಿವಾದಿತ ಕಾದಂಬರಿಯ ಈ ಕುರಿತಾಗಿ 33 ವರ್ಷಗಳ ಹಿಂದೆ ಇರಾನ್‌ನ ಧಾರ್ಮಿಕ ಮುಖಂಡರು ಸಲ್ಮಾನ್‌ ರಶ್ದಿ ವಿರುದ್ಧ ಫತ್ಮಾ ಹೊರಡಿಸಿದ್ದರು.  ಇರಾನ್‌ನ ಧಾರ್ಮಿಕ ಮುಖಂಡ ಅಯತೊಲ್ಲಾ ಖೊಮೇನಿ 1989 ರಲ್ಲಿ ಅವರ ವಿರುದ್ಧ ಫತ್ವಾ ಹೊರಡಿಸಿದ್ದರು. ಈ ದಾಳಿಗೆ ಅವರ ವಿರುದ್ಧ ಬಂದಿದ್ದ ಫತ್ವಾನೇ ಕಾರಣ ಎಂದು ಹೇಳಲಾಗಿದೆ. ಈ ನಡುವೆ ಇರಾನ್‌ನ ಅಧಿಕಾರಿ ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Salman Rushdie critical Writer put on ventilator unable to speak can lose sight in one eye san

ಮುಂಬೈನಲ್ಲಿ ಜನಿಸಿದ್ದ ರಶ್ದಿ: 1947 ಜೂನ್‌ 19 ರಂದು ಮುಂಬೈನಲ್ಲಿ ಜನಿಸಿದ್ದ ಸಲ್ಮಾನ್‌ ರಶ್ದಿ, ತಮ್ಮ ದಿ ಸೆಟಾನಿಕ್ ವರ್ಸಸ್ (The Satanic Verses) ಕಾದಂಬರಿಯಲ್ಲಿ ಪ್ರವಾದಿ (Prophet) ಮೊಹಮದ್‌ ಪೈಗಂಬರ್‌ ಅವರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. 75 ವರ್ಷದ ಸಲ್ಮಾನ್‌ ರಶ್ದಿ ಈ ಪುಸ್ತಕದ ಮೂಲಕವೇ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದರು. ಇದಕ್ಕಾಗಿ ಅವರಿಗೆ 1981ರಲ್ಲಿ ಬೂಕರ್‌ ಪ್ರಶಸ್ತಿಯೂ ಒಲಿದಿತ್ತು. ಇನ್ನು 1983ರಲ್ಲಿ ಮಿಡ್‌ ನೈಟ್ಸ್‌ ಚಿಲ್ಡ್ರನ್‌ (Midnight's Children) ಕೃತಿಗಾಗಿ ಬೆಸ್ಟ್‌ ಆಫ್‌ ಬೂಕರ್ಸ್‌ ಪ್ರಶಸ್ತಿಗೂ ಪಾತ್ರರಾಗಿದ್ದರು.  1975ರಲ್ಲಿ ಗ್ರಿಮಸ್‌ ಕೃತಿಯ ಮೂಲಕ ರಶ್ದಿ ಪುಸ್ತಕ ಜಗತ್ತಿಗೆ ಕಾಲಿರಿಸಿದ್ದರು. ರಶ್ದಿಯವರು ತಮ್ಮ ಎರಡನೇ ಕಾದಂಬರಿಯಾದ ಮಿಡ್‌ನೈಟ್ಸ್ ಚಿಲ್ಡ್ರನ್‌ನಿಂದ ಮನ್ನಣೆ ಗಳಿಸಿದರು. ಅವರು ಅನೇಕ ಪುಸ್ತಕಗಳನ್ನು ಬರೆದರು. ಇವುಗಳಲ್ಲಿ ದಿ ಜಾಗ್ವಾರ್ ಸ್ಮೈಲ್ (The Jaguar Smile), ದಿ ಮೂರ್ಸ್ ಲಾಸ್ಟ್ ಸಾಯಿ (The Moor's Last Sai), ದಿ ಗ್ರೌಂಡ್ ಬಿನೀತ್ ಹರ್ ಫೀಟ್ (The Ground Beneath Her Feet) ಮತ್ತು ಶಾಲಿಮಾರ್ ದಿ ಕ್ಲೌನ್ (Shalimar the Clown) ಸೇರಿವೆ. ಇವುಗಳ ಪೈಕಿ 'ದಿ ಸೆಟಾನಿಕ್ ವರ್ಸಸ್' ಬಗ್ಗೆ ಹೆಚ್ಚಾಗಿ ಚರ್ಚಿಸಲಾಗಿದೆ.

ಉಪನ್ಯಾಸ ನೀಡಲು ವೇದಿಕೆ ಹತ್ತಿದ ಲೇಖಕ ಸಲ್ಮಾನ್ ರಶ್ದಿ ಚಾಕು ಇರಿತ!

ಭಾರತ ಸೇರಿದಂತೆ ಹಲವು ದೇಶಗಳಲ್ಲಿ 'ದಿ ಸೆಟಾನಿಕ್ ವರ್ಸಸ್' ಕಾದಂಬರಿಗೆ ನಿಷೇಧ: 'ದಿ ಸೆಟಾನಿಕ್ ವರ್ಸಸ್' ಸಲ್ಮಾನ್ ರಶ್ದಿಯವರ ನಾಲ್ಕನೇ ಕಾದಂಬರಿ. ಈ ಕಾದಂಬರಿಯನ್ನು ಭಾರತ ಮತ್ತು ಪ್ರಪಂಚದ ಅನೇಕ ದೇಶಗಳಲ್ಲಿ ನಿಷೇಧಿಸಲಾಗಿದೆ. ಇದು 1988 ರಲ್ಲಿ ಪ್ರಕಟವಾಯಿತು. ರಶ್ದಿ ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂದು ಇದರಲ್ಲಿ ಆರೋಪಿಸಲಾಗಿತ್ತು.

ಕುರಾನ್ ಎಂಜಾಯ್ ಮಾಡಬಲ್ಲ ಗ್ರಂಥವಲ್ಲ; ರಶ್ದಿ ಹೊಸ ವಿವಾದ

ಸಾಕಷ್ಟು ಹತ್ಯೆಗಳಿಗೆ ಕಾರಣವಾದ ಕಾದಂಬರಿ: ದಿ ಸೆಟಾನಿಕ್ ವರ್ಸಸ್‌ನ ಜಪಾನೀ ಅನುವಾದಕ ಹಿತೋಶಿ ಇಗರಾಶಿ ಅವರನ್ನು ಹತ್ಯೆ ಮಾಡಲಾಯಿತು, ಬಳಿಕ ಇಟಾಲಿಯನ್ ಭಾಷಾಂತರಕಾರ ಮತ್ತು ನಾರ್ವೇಜಿಯನ್ ಪ್ರಕಾಶಕರ ಮೇಲೂ ದಾಳಿ ಮಾಡಲಾಯಿತು. ರಶ್ದಿಯನ್ನು ಹೊಗಳಿದ್ದಕ್ಕಾಗಿ ಭಾರತೀಯ ಮೂಲದ ಮಹಿಳಾ ಲೇಖಕಿ ಜೈನಾಬ್ ಪ್ರಿಯಾ ಅವರ ಮೇಲೂ ದಕ್ಷಿಣ ಆಫ್ರಿಕಾದಲ್ಲಿ ದಾಳಿ ನಡೆಸಲಾಯಿತು. ದಾಳಿಕೋರರು ಪ್ರಿಯಾಳ ಕುತ್ತಿಗೆಯನ್ನು ಚಾಕುವಿನಿಂದ ಕತ್ತರಿಸಿದ್ದಲ್ಲದೆ,  ಅವರ ಮುಖಕ್ಕೆ ಇಟ್ಟಿಗೆಯಿಂದ ಹಡೆದಿದ್ದರು.  ಕಳೆದ ವರ್ಷ ಸಂದರ್ಶನವೊಂದರಲ್ಲಿ, ರಶ್ದಿ ಅವರಿಗೆ ಜೀವನ ಈಗ ಹೇಗೆ ನಡೆಯುತ್ತಿದೆ ಎಂದು ಕೇಳಿದಾಗ, ಅವರು, ಬೇರೆ ಎಲ್ಲಾ ವಿಚಾರ ಹೋಗಲಿ, ನಾನು ನನ್ನ ಜೀವನವನ್ನು ನಡೆಸಬೇಕು ಎಂದಿದ್ದರು.

ರಶ್ದಿಯವರು ಉಪನ್ಯಾಸಕ್ಕಾಗಿ ತಲುಪಿದ ಸಭಾಂಗಣದಲ್ಲಿ ಸುಮಾರು ನಾಲ್ಕು ಸಾವಿರ ಪ್ರೇಕ್ಷಕರಿದ್ದರು. ರಶ್ದಿ ಸುಮಾರು 10 ವರ್ಷಗಳ ಕಾಲ ಪೊಲೀಸ್ ರಕ್ಷಣೆಯಲ್ಲಿದ್ದರು. 1998 ರಲ್ಲಿ, ಆಗಿನ ಇರಾನ್ ಅಧ್ಯಕ್ಷ ಮೊಹಮ್ಮದ್ ಖತಾಮಿ, ನಾವು ಇನ್ನು ಮುಂದೆ ರಶ್ದಿಯ ಹತ್ಯೆಯನ್ನು ಬೆಂಬಲಿಸುವುದಿಲ್ಲ ಎಂದಿದ್ದರಾದರೂ, ಫತ್ವಾ ಹಿಂಪಡೆದಿರಲಿಲ್ಲ. ಈ ಬಗ್ಗೆ ರಶ್ದಿ ಅವರು 'ಜೋಸೆಫ್ ಆಂಟನ್' ಎಂಬ ಆತ್ಮಚರಿತ್ರೆಯನ್ನೂ ಬರೆದಿದ್ದಾರೆ. ಅಂದಿನಿಂದ, ರಶ್ದಿ ನ್ಯೂಯಾರ್ಕ್‌ನಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. 2019 ರಲ್ಲಿ ಅವರು ತಮ್ಮ ಹೊಸ ಕಾದಂಬರಿ ಕ್ವಿಹೋಟ್ ಅನ್ನು ಬರೆದಿದ್ದರು.

Follow Us:
Download App:
  • android
  • ios