Asianet Suvarna News Asianet Suvarna News

Pandora Paper: ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವದ ದಿಗ್ಗಜರ ಅಕ್ರಮ ಬಯಲು!

* ಪನಾಮ ಪೇಪರ್ಸ್‌ ಬಳಿಕ ಇದೀಗ ಸದ್ದು ಮಾಡಿದ ಪಂಡೋರಾ ಪೇಪರ್ಸ್‌

* ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವದ ದಿಗ್ಗಜರ ಅಕ್ರಮ ಬಯಲು

* ಪಾಕಿಸ್ತಾನದ 700ಕ್ಕೂ ಅಧಿಕ ಗಣ್ಯರ ಹೆಸರೂ ಶಾಮೀಲು

Sachin Tendulkar among celebrities named in Pandora Papers leak exposing offshore dealings pod
Author
Bangalore, First Published Oct 4, 2021, 8:49 AM IST
  • Facebook
  • Twitter
  • Whatsapp

ನವದೆಹಲಿ(ಅ.04): ಪನಾಮ ಪೇಪರ್ಸ್‌(Panama Papers) ಬಳಿಕ ಇದೀಗ ಪಂಡೋರ ಪೇಪರ್ಸ್‌(Pandora Papers) ಹೆಸರಿನಲ್ಲಿ ಸೋರಿಕೆಯಾದ ಲಕ್ಷಾಂತರ ದಾಖಲೆಗಳು ಭಾರತ(India) ಸೇರಿದಂತೆ 91 ದೇಶಗಳ ಹಾಲಿ ಮತ್ತು ಮಾಜಿ ನಾಯಕರು, ಅಧಿಕಾರಿಗಳು ಮತ್ತು ಸೆಲೆಬ್ರಿಟಿಗಳ ಹಣಕಾಸಿನ ರಹಸ್ಯ ಬಹಿರಂಗಪಡಿಸುವುದಾಗಿ ಹೇಳಿದೆ. ಈ ದಾಖಲೆಗಳಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿರುವುದು ಬಹಳ ಆಘಾತಕಾರಿಯಾಗಿದೆ. ಇದರೊಂದಿಗೆ ಭಾರತದ ಆರು ಮತ್ತು ಪಾಕಿಸ್ತಾನದ(Pakistan) ಏಳು ರಾಜಕಾರಣಿಗಳ ಹೆಸರೂಗಳೂ ಇದರಲ್ಲಿವೆ. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಭಾರತೀಯರ ಹೆಸರು ಈ ಪಟ್ಟಿಯಲ್ಲಿದೆ.  

ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ICJ) ಭಾನುವಾರ ಬಿಡುಗಡೆ ಮಾಡಿದ ವರದಿಯಲ್ಲಿ ತೆಂಡುಲ್ಕರ್ ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ, ಅವರ ವಕೀಲರು ಅವರ ಹೂಡಿಕೆಯು ನ್ಯಾಯಸಮ್ಮತವಾಗಿದೆ ಮತ್ತು ತೆರಿಗೆ ಅಧಿಕಾರಿಗಳಿಗೆ ಅದರ ಬಗ್ಗೆ ತಿಳಿದಿದೆ ಎಂದಿದ್ದಾರೆ. ಈ ಪಟ್ಟಿಯಲ್ಲಿರುವ ಇನ್ನುಳಿದ ಭಾರತೀಯರ ಬಗ್ಗೆ ವಿವರಗಳು ಕಂಡುಬಂದಿಲ್ಲ.

700 ಕ್ಕೂ ಹೆಚ್ಚು ಪಾಕಿಸ್ತಾನಿಯರ ಹೆಸರುಗಳು

ICIJ ನೀಡಿರುವ ಹೇಳಿಕೆ ಅನ್ವಯ, ಗೌಪ್ಯ ದಾಖಲೆ ಜೋರ್ಡಾನ್‌ನ ಷಾ; ಉಕ್ರೇನ್, ಕೀನ್ಯಾ ಮತ್ತು ಈಕ್ವೆಡಾರ್ ಅಧ್ಯಕ್ಷರು; ಜೆಕ್ ಗಣರಾಜ್ಯದ ಪ್ರಧಾನಿ; ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರ ವಿದೇಶಿ ವಹಿವಾಟುಗಳನ್ನು ಬಹಿರಂಗಪಡಿಸಲಿದೆ ಎಂದಿದೆ. 

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ "ಅನಧಿಕೃತ ಮಂತ್ರಿ" ಮತ್ತು ರಷ್ಯಾ, ಯುಎಸ್, ಟರ್ಕಿ ಮತ್ತು ಇತರ ದೇಶಗಳ 130 ಕ್ಕೂ ಹೆಚ್ಚು ಶತಕೋಟ್ಯಾಧಿಪತಿಗಳ ಹಣಕಾಸಿನ ಚಟುವಟಿಕೆಗಳನ್ನುಈ ಕಡತಗಳು ಬಹಿರಂಗಪಡಿಸಿವೆ. ಅವುಗಳಲ್ಲಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಕೆಲ ಸಚಿವರಿಗೆ ಅತ್ಯಂತ ಆಪ್ತರಾಗಿರುವವರ ಹೆಸರು ಸೇರಿದಂತೆ 700 ಕ್ಕೂ ಹೆಚ್ಚು ಪಾಕಿಸ್ತಾನಿಯರ ಹೆಸರುಗಳಿವೆ. ಇವುಗಳಲ್ಲಿ ಹಣಕಾಸು ಸಚಿವ ಶೌಕತ್ ತಾರಿ, ಜಲ ಸಂಪನ್ಮೂಲ ಸಚಿವ ಮೂನಿಸ್ ಎಲಾಹಿ, ಸೆನೆಟರ್ ಫೈಸಲ್ ವವಾಡಾ, ಕೈಗಾರಿಕಾ ಸಚಿವ ಖುಸ್ರೋ ಬಕ್ತಿಯಾರ್ ಮತ್ತು ಅನೇಕರು ಸೇರಿದ್ದಾರೆ.

ಪಾಪ್ ತಾರೆ ಶಕೀರಾ ಮತ್ತು ಸೂಪರ್ ಮಾಡೆಲ್ ಕ್ಲೌಡಿಯಾ ಸ್ಚಿಫರ್ ಹೆಸರು

ಕಡತಗಳ ವರದಿಯು ಪಾಪ್ ಸ್ಟಾರ್ ಶಕೀರಾ ಮತ್ತು ಸೂಪರ್ ಮಾಡೆಲ್ ಕ್ಲೌಡಿಯಾ ಸ್ಚಿಫರ್ ಅವರ ಹೆಸರನ್ನೂ ಹೊಂದಿದೆ. ಐಸಿಐಜೆ 111 ದೇಶಗಳ 150 ಮಾಧ್ಯಮ ಸಂಸ್ಥೆಗಳಿಂದ 600 ಕ್ಕೂ ಹೆಚ್ಚು ಪತ್ರಕರ್ತರನ್ನು ಒಳಗೊಂಡಿದ್ದು, 1.19 ಕೋಟಿಗೂ ಅಧಿಕ ಗೌಪ್ಯ ಕಡತಗಳನ್ನು ಅತಿ ಶ್ರೀಮಂತರ ಆರ್ಥಿಕ ರಹಸ್ಯಗಳನ್ನು ಬಿಚ್ಚಿಟ್ಟಿದೆ.

ಅನಿಲ್‌ ಅಂಬಾನಿ(Anil Ambani): ಭಾರತದಲ್ಲಿ ದಿವಾಳಿ ಎಂದು ಘೋಷಿಸಲಾಗಿರುವ ಉದ್ಯಮಿ ಅನಿಲ್‌ ಅಂಬಾನಿ ತೆರಿಗೆ ವಂಚನೆಗೆ ನೆರವಾಗುವ ದೇಶಗಳಲ್ಲಿ 18 ಕಂಪನಿಗಳನ್ನು ಹೊಂದಿದ್ದಾರೆ.

ಕಿರಣ್‌ ಮುಂಜುದಾರ್‌ ಪತಿ: ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರ ಪತಿ ವಿದೇಶದಲ್ಲಿ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಅದರ ಹೊಣೆಯನ್ನು ಇನ್‌ಸೈಡರ್‌ ಟ್ರೇಡಿಂಗ್‌ಗಾಗಿ ಸೆಬಿಯಿಂದ ನಿಷೇಧಕ್ಕೆ ಒಳಗಾದ ವ್ಯಕ್ತಿಗೆ ನೀಡಲಾಗಿದೆ.

ಸಚಿನ್‌ ತೆಂಡುಲ್ಕರ್‌(Sachin Tendulkar): 2016ರಲ್ಲಿ ಪನಾಮಾ ಪೇಪರ್‌ ಬಹಿರಂಗವಾದ ಬಳಿಕ ವಿದೇಶದಲ್ಲಿನ ತಮ್ಮ ಆಸ್ತಿಯನ್ನು ನಗದೀಕರಣ ಮಾಡುವಂತೆ ಸಚಿನ್‌ ಕೋರಿದ್ದರು ಎಂದು ವರದಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ.

Follow Us:
Download App:
  • android
  • ios