ಸುಲಭವಾಗಿ ಉಕ್ರೇನ್‌ ವಶಪಡಿಸಿಕೊಳ್ಳಲು ವಿಫಲವಾಗಿದ್ದಕ್ಕೆ ಗರಂಉಕ್ರೇನ್‌ ಶರಣಾಗಲಿದೆ ಎಂದಿದ್ದ ಗುಪ್ತಚರ ಸಂಸ್ಥೆ ಮೇಲೂ ಆಕ್ರೋಶಯುದ್ಧದ ಯೋಜನೆ ಸರಿಯಾಗಿ ರೂಪಿಸದ ಆರೋಪ

ಮಾಸ್ಕೋ (ಮಾ.12): ದಾಳಿ ಆರಂಭವಾಗಿ 13 ದಿನ ಕಳೆದರೂ ಉಕ್ರೇನ್‌ನನ್ನು (Ukraine) ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ರಷ್ಯಾದ (Russia) 8 ಮಂದಿ ಸೇನಾ ಜನರಲ್‌ಗಳನ್ನು ಅಧ್ಯಕ್ಷ ಪುಟಿನ್‌ (Vladimir Putin ) ವಜಾ ಮಾಡಿದ್ದಾರೆ ಎಂದು ಹೇಳಲಾಗಿದೆ.

ಯುದ್ಧದ ಯೋಜನೆಯನ್ನು ಸರಿಯಾಗಿ ರೂಪಿಸದೇ ಮತ್ತು ಕಾರ್ಯತಂತ್ರಗಳನ್ನು ಸರಿಯಾಗಿ ಪಾಲನೆ ಮಾಡದೇ ರಷ್ಯಾಕ್ಕೆ ಮುಜುಗರ ಉಂಟು ಮಾಡಿದ ಕಾರಣಕ್ಕಾಗಿ ಈ ಜನರಲ್‌ಗಳನ್ನು(generals ) ಪುಟಿನ್‌ ವಜಾ ಮಾಡಿದ್ದಾರೆ ಎಂದು ಉಕ್ರೇನ್‌ನ ಭದ್ರತಾ ಮಂಡಳಿ ಮುಖ್ಯಸ್ಥ ಒಲೆಕ್ಸಿ ಡನಿಲೋವ್‌ (Ukraine's Defence Secretary Oleksiy Danilov) ಹೇಳಿದ್ದಾರೆ.

ಇದಲ್ಲದೆ ಉಕ್ರೇನ್‌ ಸೇನೆ (Ukraine Army) ಅಷ್ಟೇನು ಬಲವಾಗಿಲ್ಲ. ಅದೊಂದು ದುರ್ಬಲ, ನಾಜಿಗಳ ಗುಂಪು. ದಾಳಿ ಮಾಡಿದರೆ ಸುಲಭವಾಗಿ ಶರಣಾಗಲಿದ್ದಾರೆ ಎಂದು ವರದಿ ನೀಡಿದ್ದ ಗುಪ್ತಚರ ಅಧಿಕಾರಿಗಳ ವಿರುದ್ಧವೂ ಪುಟಿನ್‌ ತೀವ್ರ ಅಸಮಾಧಾನ ಹೊಂದಿದ್ದಾರೆ. ಇಂಥ ತಪ್ಪು ನಿಲುವುಗಳಿಂದಾಗಿಯೇ ಯುದ್ಧ ಇಷ್ಟುದಿನಕ್ಕೆ ವಿಸ್ತಾರಗೊಂಡಿದೆ. ಜೊತೆಗೆ ಸಾಕಷ್ಟುಸಾವು ನೋವು ಅನುಭವಿಸಬೇಕಾಗಿ ಬಂದಿದೆ. ಇದಕ್ಕೆಲ್ಲಾ ನೀವೇ ಕಾರಣ ಎಂದು ಗುಪ್ತಚರ ಸಂಸ್ಥೆಯ (intelligence officials) ವಿರುದ್ಧ ಪುಟಿನ್‌ ಹರಿಹಾಯ್ದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಒಲೆಕ್ಸಿ ಹೇಳಿದ್ದಾರೆ.

ಕಳೆದ 2 ವಾರದ ಯುದ್ಧದ ಅವಧಿಯಲ್ಲಿ ತನ್ನ ಎಷ್ಟುಯೋಧರು ಸಾವನ್ನಪ್ಪಿದ್ದಾರೆ ಎಂಬುದಾಗಿ ರಷ್ಯಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಉಕ್ರೇನ್‌ ಸೇನೆ ಪ್ರಕಾರ ರಷ್ಯಾದ 12000ಕ್ಕೂ ಹೆಚ್ಚು ಯೋಧರು ಯುದ್ಧದ ವೇಳೆ ಸಾವನ್ನಪ್ಪಿದ್ದಾರೆ.

ಉಕ್ರೇನ್‌ ಮಕ್ಕಳು ಮಾನವ ತಡೆಗೋಡೆಯಾಗಿ ಬಳಕೆ?
ಕೀವ್‌:
ಉಕ್ರೇನ್‌ನಲ್ಲಿ ತಾವು ಈಗಾಗಲೇ ವಶಪಡಿಸಿಕೊಂಡ ಪ್ರದೇಶಗಳಲ್ಲಿನ ಮಹಿಳೆಯರು ( Women ) ಮತ್ತು ಮಕ್ಕಳನ್ನು ( Children ) ರಷ್ಯಾ ಸೇನೆ ( Russia Army ) ತನ್ನ ವಶಕ್ಕೆ ಪಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯುದ್ಧದ ವೇಳೆ ಅವರನ್ನು ಮಾನವ ತಡೆಗೋಡೆಯಾಗಿ ( Human Shield ) ಬಳಸುವ ಸಂಚಿನ ಭಾಗವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Russia Ukraine War ಉಕ್ರೇನ್‌ಗೆ ಸೇನಾ ನೆರವು ಹೆಚ್ಚಿಸಿದ ಐರೋಪ್ಯ ಒಕ್ಕೂಟ
ರಾಜಧಾನಿ ಕೀವ್‌ನಿಂದ 25 ಕಿಮೀ ದೂರದಲ್ಲಿದ್ದ ಡಿಮೇರ್‌ ಎಂಬ ಹಳ್ಳಿಯಲ್ಲಿ ನೆಲೆಸಿದ ಮಹಿಳೆಯೊಬ್ಬಳು ತನ್ನ ಪುತ್ರ ಸೇರಿದಂತೆ ಇನ್ನಿಬ್ಬರನ್ನು ರಷ್ಯಾದ ಯೋಧರು ಬಂಧಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾಳೆ. ಶೆಲ್‌ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆಯ ಬೇಸ್‌ಮೆಂಟ್‌ನಲ್ಲಿ ಅಡಗಿದ್ದ 33 ವರ್ಷದ ಉದ್ಯಮಿಯನ್ನೂ ರಷ್ಯನ್‌ ಪಡೆಗಳು ಬಂಧಿಸಿದ್ದಾರೆ ಎಂದು ಬಂಧಿತನ ಪತ್ನಿಯೇ ಮಾಹಿತಿ ನೀಡಿದ್ದಾಳೆ. ‘ರಷ್ಯನ್‌ ಪಡೆಗಳು ಬೇಸ್‌ಮೆಂಟ್‌ಗೆ ಬಂದು ಮಹಿಳೆ ಹಾಗೂ ಮಕ್ಕಳನ್ನು ಅಲ್ಲಿಂದ ಹೊರಡಲು ತಿಳಿಸಿದರು. ನಡೆಯಲಾಗದ ವೃದ್ಧರು ಹಾಗೂ ಪುರುಷರನ್ನು ಬಂಧಿಸಿದರು. ಹಿಂದೆ ನಾಝೀ ಜರ್ಮನಿಯವರಂತೆ ನಾಗರಿಕರನ್ನು ಮಾನವ ಶೀಲ್ಡ್‌ನಂತೆ ಬಳಸುತ್ತಿದ್ದರು. ರಷ್ಯಾದ ಯೋಧರು ಇದಕ್ಕಾಗಿಯೇ ನಾಗರಿಕರನ್ನು ಬಂಧಿಸುತ್ತಿರಬೇಕು’ ಎಂದು ಮಹಿಳೆ ಭೀತಿ ವ್ಯಕ್ತಪಡಿಸಿದ್ದಾಳೆ.

Tesla Cars ಕೈಗೆಟುಕುವ ದರದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ನೀಡುವ ಮಸ್ಕ್ ಕನಸಿಗೆ ರಷ್ಯಾ ಉಕ್ರೇನ್ ಯುದ್ಧ ಅಡ್ಡಿ!
ಇದರ ನಡುವೆ ಉಕ್ರೇನ್‌ ( Ukraine) ಮೇಲೆ ಆಕ್ರಮಣ ಮಾಡಿರುವ ರಷ್ಯಾ ( Russia ) ಮೇಲೆ ಮತ್ತಷ್ಟುಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಮತ್ತು ಉಕ್ರೇನ್‌ಗೆ ಹೆಚ್ಚಿನ ಸೈನಿಕ ಒದಗಿಸುವುದಾಗಿ ಐರೋಪ್ಯ ಒಕ್ಕೂಟದ ( European Union ) ದೇಶಗಳ ಮುಖ್ಯಸ್ಥರು ಹೇಳಿದ್ದಾರೆ. ಉಕ್ರೇನ್‌ಗೆ ಸೈನಿಕ ಸಹಾಯ ಒದಗಿಸಲು 4,100 ಕೋಟಿ ರು. ಹೆಚ್ಚುವರಿ ಅನುದಾನ ನೀಡುವುದಾಗಿ ಐರೋಪ್ಯ ಒಕ್ಕೂಟದ ಮುಖ್ಯ ಕಾನೂನು ತಜ್ಞ ಜೋಸೆಫ್‌ ಬೊರೆಲ್‌ (Josep Borrell Fontelles ) ಹೇಳಿದ್ದಾರೆ.