ಉಕ್ರೇನ್‌ಗೆ ಅಮೆರಿಕ, ಬ್ರಿಟನ್ ಸಹಾಯ: ಅಣ್ವಸ್ತ್ರ ದಾಳಿ ಎಚ್ಚರಿಕೆ ನೀಡಿದ ಪುಟಿನ್..!
ಪರಮಾಣು ದೇಶಗಳು ಪರಮಾಣು ಸಜ್ಜಿತ ಅಲ್ಲದ ದೇಶಕ್ಕೆ ಸಹಾಯ ಮಾಡುತ್ತಿವೆ. ಒಂದು ವೇಳೆ ಇದರಿಂದ ನಮ್ಮ ಮೇಲೆ ವಾಯುದಾಳಿ ನಡೆದರೆ ಅದನ್ನು ನಾವು ಜಂಟಿ ದಾಳಿ ಎಂದು ಪರಿಗಣಿಸಬೇಕಾಗುತ್ತದೆ. ಇದಕ್ಕೆ ಪರಮಾಣು ಪ್ರತಿಕ್ರಿಯೆಯನ್ನೇ ನೀಡಬೇಕಾಗುತ್ತದೆ’ ಎಂದು ಗುಡುಗಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಮಾಸ್ಕೋ(ಸೆ.26): ಉಕ್ರೇನ್‌ಗೆ ಅಮೆರಿಕ ಹಾಗೂ ಬ್ರಿಟನ್ ಶಸ್ತ್ರಾಸ್ತ್ರ ಪೂರೈಸುತ್ತಿರುವುದನ್ನು ಪ್ರಶ್ನಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ‘ ಪರಮಾಣು ದೇಶಗಳು ಪರಮಾಣು ಸಜ್ಜಿತ ಅಲ್ಲದ ದೇಶಕ್ಕೆ ಸಹಾಯ ಮಾಡುತ್ತಿವೆ. ಒಂದು ವೇಳೆ ಇದರಿಂದ ನಮ್ಮ ಮೇಲೆ ವಾಯುದಾಳಿ ನಡೆದರೆ ಅದನ್ನು ನಾವು ಜಂಟಿ ದಾಳಿ ಎಂದು ಪರಿಗಣಿಸಬೇಕಾಗುತ್ತದೆ. ಇದಕ್ಕೆ ಪರಮಾಣು ಪ್ರತಿಕ್ರಿಯೆಯನ್ನೇ ನೀಡಬೇಕಾಗುತ್ತದೆ’ ಎಂದು ಗುಡುಗಿದ್ದಾರೆ.
ಪುಟಿನ್ ಬುಧವಾರ ರಷ್ಯಾ ಭದ್ರತಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಇದೇ ಸಭೆಯಲ್ಲಿ ದೇಶದ ಪರಮಾಣು ಸಿದ್ಧಾಂತ ಬದಲಿಸುವ ಬಗ್ಗೆ ಚರ್ಚೆ ನಡೆಯಿತು. ಈ ಸಿದ್ಧಾಂತ ಬದಲಾವಣೆ ಅಂದರೆ ಅಣ್ವಸ್ತ್ರ ಬಳಕೆ ಆಗಿದೆ ಎಂದು ತಜ್ಞರು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಸಂಧಾನಕ್ಕೆ ಪುಟಿನ್ ಸಮ್ಮತಿ: ಮೋದಿ ನೇತೃತ್ವದಲ್ಲಿ ಮಾತುಕತೆ?
ಕಳೆದ ವಾರ ಬ್ರಿಟನ್ ಹಾಗೂ ಅಮೆರಿಕ ಉಕ್ರೇನ್‌ಗೆ ಕೆಲವು ಮಾರಕ ಶಸ್ತ್ರಾಸ್ತ್ರ ನೀಡುವ ಘೋಷಣೆ ಮಾಡಿದ್ದವು.