ಪ್ರಧಾನಿಗೆ ಚಾಲಕನಾದ ರಷ್ಯಾ ಅಧ್ಯಕ್ಷ : ಇಲೆಕ್ಟ್ರಿಕ್ ಕಾರ್‌ನಲ್ಲಿ ಮೋದಿ ಪುಟಿನ್ ರೌಂಡ್ಸ್
ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಹಳ ಆತ್ಮೀಯವಾಗಿ ನಿನ್ನೆ ಬರಮಾಡಿಕೊಂಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಹಳ ಆತ್ಮೀಯವಾಗಿ ನಿನ್ನೆ ಬರಮಾಡಿಕೊಂಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ಡ್ರೈವರ್ ಸೀಟಿನಲ್ಲಿ ಕುಳಿತಿದ್ದು, ಪ್ರಧಾನಿ ಮೋದಿ ಅವರ ಪಕ್ಕದಲ್ಲೇ ಕುಳಿತಿದ್ದಾರೆ. ಇಬ್ಬರು ಆ ಪ್ರಯಾಣವನ್ನು ಎಂಜಾಯ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಹೀಗೆ ಕಾರಿನಲ್ಲಿ ಪ್ರಧಾನಿಯವರನ್ನು ಕೂರಿಸಿಕೊಂಡೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ತಮ್ಮ ಬಂಗಲೆಗೆ ಒಂದು ಸುತ್ತು ಬಂದಿದ್ದು, ಸುತ್ತಲ ದೃಶ್ಯಗಳನ್ನು ಪ್ರಧಾನಿಗೆ ತೋರಿಸಿದರು. ಸಾಮಾನ್ಯವಾಗಿ ಇವರಿಬ್ಬರು ಸಂಭಾಷಣೆ ಮಾಡುವ ವೇಳೆ ಸದಾ ಇವರ ಜೊತೆ ಭಾಷಾಂತರಕ್ಕೆ ಸಂವಹನಕಾರರಿರುತ್ತಾರೆ. ಆದರೆ ಈ ವೀಡಿಯೋದಲ್ಲಿ ಕಾಣಿಸುವಂತೆ ಗಾರ್ಡನ್‌ನಲ್ಲಿ ಓಡಾಡುವ ವೇಳೆ ಇಬ್ಬರಿಗೂ ಭಾಷಾಂತರಕಾರರಿರಲಿಲ್ಲ, ಇಬ್ಬರೂ ಅವರಷ್ಟಕ್ಕೆ ಅವರೇ ವೈಯಕ್ತಿಕ ಸಂಭಾಷಣೆಯಲ್ಲಿ ತೊಡಗಿದ್ದರು.
ಇನ್ನು ಟ್ವಿಟ್ಟರ್‌ನಲ್ಲಿ ರಷ್ಯಾ ಭೇಟಿ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪುಟಿನ್ ಅವರು ತಮಗಾಗಿ ವಿಶೇಷ ಖಾಸಗಿ ಔತಣಕೂಟ ಏರ್ಪಡಿಸಿರುವುದಕ್ಕೆ ಧನ್ಯವಾದ ಹೇಳಿದರು. ಸೋಮವಾರ ಸಂಜೆ ಮಾಸ್ಕೋಗೆ ಬಂದಿಳಿದ ಮೋದಿ ಅವರನ್ನು ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮನುಟ್ರೋವ್ ಸ್ವಾಗತಿಸಿದರು. ಈ ಹಿಂದೆ ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್ ಅವರನ್ನೂ ಡೆನಿಸ್ ಅವರೇ ಸ್ವಾಗತಿಸಿದ್ದರು. ಈ ವೇಳೆ ರಷ್ಯಾದ ಯುವತಿಯರು ಭರತನಾಟ್ಯ ಮಾಡಿ ಮೋದಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಬಳಿಕ ಪುಟಿನ್ ಅವರು ಮೋದಿ ಅವರಿಗೆ ಖಾಸಗಿ ಔತಣ ಹಮ್ಮಿಕೊಂಡಿದ್ದರು. ಪುಟಿನ್ ತಮ್ಮ ಆಪ್ತರಿಗೆ ಮಾತ್ರ ಈ ಔತಣ ಕೂಟ ನೀಡುತ್ತಾರೆ. ರಷ್ಯಾಗೆ ಬರುವ ಎಲ್ಲ ವಿದೇಶಿ ನಾಯಕರಿಗೆ ಈ ರೀತಿ ಔತಣ ನೀಡುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಈ ವೇಳೆ ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಇಬ್ಬರ ನಡುವೆ ಅನೌಪಚಾರಿಕ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಇಂದು ಏನೇನು ಕಾರ್ಯಕ್ರಮ?
ಇಂದು ಭಾರತ-ರಷ್ಯಾ 2ನೇ ವಾರ್ಷಿಕ ಶೃಂಗ ನಡೆಯಲಿದ್ದು, ಈ ವೇಳೆ ಪುಟಿನ್ ಹಾಗೂ ಮೋದಿ ಹಲವು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ಬಳಿಕ ಭಾರತೀಯ ಸಮುದಾಯವನ್ನು ಉದ್ದೇಶಿಸಿ ರಸಾಟೋಂ ಪೆವಿಲಿಯನ್ ಸಭಾಂಗಣದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. ರಷ್ಯಾದ ಹುತಾತ್ಮ ಸ್ಮಾರಕಕ್ಕೂ ಮೋದಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಕಳೆದ ವರ್ಷ ಸಾರಲಾಗಿದ್ದ ‘ಆರ್ಡರ್ ಆಫ್ ಸೇಂಟ್ ಆ್ಯಂಡ್ರ್ಯೂ ಅಪಾಸಲ್’ ಹೆಸರಿನ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮೋದಿ ಅವರಿಗೆ ಪ್ರದಾನ ಮಾಡಲಾಗುತ್ತದೆ.
'ಬ್ರಿಟನ್‌ನಲ್ಲಿ ಹಿಂದುಫೋಬಿಯಾಗೆ ಜಾಗವಿಲ್ಲ..' ಬ್ರಿಟಿಷ್ ಹಿಂದುಗಳಿಗೆ ವಿಶ್ವಾಸ ನೀಡಿದ ಯುಕೆ ಹೊಸ ಪಿಎಂ!
ದೇಗುಲ, ಶಾಲೆ, ಹೆಚ್ಚಿನ ವಿಮಾನಕ್ಕೆ ಮೋದಿಗೆ ಭಾರತೀಯರ ಕೋರಿಕೆ
ಮಾಸ್ಕೋ: ರಷ್ಯಾದಲ್ಲಿ ಹಿಂದೂ ದೇಗುಲ, ಭಾರತೀಯ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಹಾಗೂ ಭಾರತಕ್ಕೆ ನೇರವಾಗಿ ತಲುಪಲು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳನ್ನು ಮಂಜೂರು ಮಾಡುವಂತೆ ರಷ್ಯಾದಲ್ಲಿ ನೆಲೆಸಿರುವ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಮಾಸ್ಕೋ ಭೇಟಿ ವೇಳೆ ಮೋದಿ, ಭಾರತೀಯ ಸಮುದಾಯದ ಜನರನ್ನು ಭೇಟಿ ಮಾಡಲಿದ್ದು ಈ ವೇಳೆ ಇಂಥದ್ದೊಂದು ಬೇಡಿಕೆ ಸಲ್ಲಿಸಲು ಅವರು ನಿರ್ಧರಿಸಿದ್ದಾರೆ.
ಪ್ರಧಾನಿ ಮೋದಿಗೆ ರಷ್ಯಾದ ಅತ್ಯುಚ್ಛ ನಾಗರಿಕ ಸಮ್ಮಾನ ಸೇಂಟ್ ಆ್ಯಂಡ್ರ್ಯೂ ಪುರಸ್ಕಾರ