ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾಗೆ ಹೆಚ್ಚಾಯ್ತು ತಲೆನೋವು 20 ಸೇನಾಧಿಕಾರಿಗಳ ಬಂಧನದಿಂದ ಆತಂಕಕ್ಕೆ ಒಳಗಾದ ರಷ್ಯಾ ರಷ್ಯಾ ರಕ್ಷಣಾ ಸಟಿವ ತೀವ್ರ ಹೃದಯಾಘಾತದಿಂದ ಆಸ್ಪತ್ರೆ ದಾಖಲು 

ಮಾಸ್ಕೋ(ಏ.15): ಮೂರು ದಿನಕ್ಕೆ ಉಕ್ರೇನ್ ಮುಗಿಸಲು ದಂಡೆತ್ತಿ ಹೋದ ರಷ್ಯಾ ಇದೀಗ ತಿಂಗಳು ಕಳೆದರೂ ಸಂಪೂರ್ಣ ಮೇಲುಗೈ ಸಾಧಿಸಿಲ್ಲ. ಉಕ್ರೇನ್‌ನ ಬಹುತೇಕ ಭಾಗಗಳನ್ನು ರಷ್ಯಾ ಧ್ವಂಸ ಮಾಡಿದೆ. ಆದರೆ ಉಕ್ರೇನ್ ಕೈವಶ ಮಾಡಲು ಸಾಧ್ಯವಾಗಿಲ್ಲ. ಇದರ ನಡುವೆ ರಷ್ಯಾದ ಸೈನಿಕರನ್ನು ಉಕ್ರೇನ್ ಬಂಧಿಸುತ್ತಿದೆ. ಈಗಾಗಲೇ 20 ಸೇನಾಧಿಕಾರಿಗಳೇ ಉಕ್ರೇನ್ ವಶದಲ್ಲಿದ್ದಾರೆ. ಇದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ ರಷ್ಯಾ ರಕ್ಷಣಾ ಸಚಿವ ಸರ್ಗೈ ಶೋಯಿಗುಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆ ದಾಖಲಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಪ್ತರಾಗಿರುವ ರಕ್ಷಣಾ ಸಚಿವ ಸರ್ಗೈ ಶೋಯಿಗು ಯಾವುದೇ ಸಭೆಗಳಲ್ಲಿ ಕಾಣಿಸಿಕೊಂಡಿಲ್ಲ. ಮಿಲಿಟರಿ ಕಾರ್ಯಾಚರಣೆ ಸಭೆಗೂ ಗೈರಾಗಿದ್ದರು ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ರಕ್ಷಣಾ ಸಚಿವರ ತೀವ್ರ ಒತ್ತಡಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಯುದ್ಧಕ್ಕೆ 50 ದಿನ: ಉಕ್ರೇನ್‌ ದಾಳಿಗೆ ರಷ್ಯಾ ನೌಕೆ ಧ್ವಂಸ

ಉಕ್ರೇನ್ ಮೇಲೆ ದಂಡೆತ್ತಿ ಹೋದ ರಷ್ಯಾದ ಹಲವು ಸೈನಿಕರು ಹತರಾಗಿದ್ದಾರೆ. ಇನ್ನು ಹಲವರು ಸೆರೆಯಾಗಿದ್ದಾರೆ. ಇದರಲ್ಲಿ ರಷ್ಯಾದ ಪ್ರಮುಖ 20 ಸೇನಾಧಿಕಾರಿಗಳು ಉಕ್ರೇನ್ ಸೇನೆಯ ವಶದಲ್ಲಿದ್ದಾರೆ ಅನ್ನೋ ವರದಿ ರಷ್ಯಾವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ವಿಚಾರ ವ್ಲಾದಿಮಿರ್ ಪುಟಿನ್ ಹಾಗೂ ರಕ್ಷಣಾ ಸಚಿವರ ನಡುವೆ ಅಸಮಧಾನಕ್ಕೆ ಕಾರಣವಾಗಿದೆ. ಯುದ್ಧದಲ್ಲಿ ಹಿನ್ನಡೆ, ರಷ್ಯಾ ಅಧ್ಯಕ್ಷರ ಖಡಕ್ ವಾರ್ನಿಂಗ್ ಸೇರಿದಂತೆ ಹಲವು ಕಾರಣಗಳಿಂದ ಸರ್ಗೈ ಶೋಯಿಗು ಆರೋಗ್ಯ ಏರುಪೇರಾಗಿದೆ. ಕುಸಿದು ಬಿದ್ದ ರಕ್ಷಣ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಉಕ್ರೇನ್ ವಿರುದ್ಧದ ಯುದ್ಧ ರಷ್ಯಾಗೆ ಲಾಭಕ್ಕಿಂತ ನಷ್ಟ ತಂದುಕೊಟ್ಟಿದೆ. ರಷ್ಯಾ ಮಿಲಿಟರಿ ಶಸ್ತ್ರಗಳು ಸುಖಾಸುಮ್ಮನೆ ಕಟ್ಟಡಗಳ ಮೇಲೆ ದಾಳಿ ಮಾಡಲು, ರಸ್ತೆ, ಸೇತುವೆ ಮೇಲೆ ದಾಳಿಗೆ ಬಳಸಲಾಗಿದೆ. ಆದರೆ ಉಕ್ರೇನ್ ನೀಡಿರುವ ತಿರುಗೇಟಿಗೆ ರಷ್ಯಾದ ಹಲವು ಟ್ಯಾಂಕ್, ಹೆಲಿಕಾಪ್ಟರ್, ಡ್ರೋನ್ ವೆಪನ್‌ಗಳನ್ನು ನಾಶ ಮಾಡಿದೆ. ಇದರಿಂದ ಕಳೆದ ಕೆಲ ದಿನಗಳ ಹಿಂದೇಯ ರಕ್ಷಣಾ ಸಚಿವರಿಗೆ ಪುಟಿನ್ ಖಡಕ್ ವಾರ್ನಿಂಗ್ ನೀಡಿದ್ದರು.

ರಷ್ಯಾಗೆ 200 ಕೋಟಿ ಡಾಲರ್‌ ವಸ್ತು ರಫ್ತು: ಭಾರತ ಚಿಂತನೆ

ಇದಾದ ಬಳಿಕ ರಕ್ಷಣಾ ಸಚಿವರನ್ನು ಸಭೆಗಳಿಂದ ಕಡೆಗಣಿಸಲಾಗಿತ್ತು. ಒತ್ತಡಕ್ಕೆ ಸಿಲುಕಿದ ರಕ್ಷಣಾ ಸಚಿವ ಸರ್ಗೈ ಇದೀಗ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅನ್ನೋ ಮಾತುಗಳ ಕೇಳಿಬರುತ್ತಿದೆ. 

ಮತ್ತೆ ಪರಮಾಣು ಅಸ್ತ್ರ ನಿಯೋಜನೆ ಎಚ್ಚರಿಕೆ ನೀಡಿದ ರಷ್ಯಾ

ಸ್ವೀಡನ್‌ ಮತ್ತು ಫಿನ್ಲೆಂಡ್‌ ದೇಶಗಳು ಅಮೆರಿಕ ನೇತೃತ್ವದ ನ್ಯಾಟೋ ಸೇರುವ ಪ್ರಸ್ತಾಪ ಮುಂದಿಟ್ಟಿರುವುದನ್ನು ಬಲವಾಗಿ ವಿರೋಧಿಸಿರುವ ರಷ್ಯಾ, ಒಂದು ವೇಳೆ ಅಂಥ ಬೆಳವಣಿಗೆ ನಡೆದರೆ, ನಮ್ಮ ವಲಯವನ್ನು ರಕ್ಷಿಸಿಕೊಳ್ಳಲು ನಾವು ಗಡಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ನಿಯೋಜನೆ ಸೇರಿದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದೆ.

ಉಕ್ರೇನ್‌ಗೆ ಅಮೆರಿಕ 60000 ಕೋಟಿ ರು. ಶಸ್ತ್ರಾಸ್ತ್ರ ನೆರವು

ವಾಷಿಂಗ್ಟನ್‌: ರಷ್ಯಾಕ್ಕೆ ಸಡ್ಡು ಹೊಡೆಯುತ್ತಿರುವ ಉಕ್ರೇನ್‌ಗೆ ಅಮೆರಿಕ ಸರ್ಕಾರ ಮತ್ತೆ 800 ದಶಲಕ್ಷ ಡಾಲರ್‌ (60000 ಕೋಟಿ ರು.) ಸೇನಾ ನೆರವು ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ‘ಹೊಸ ನೆರವು ಶಸ್ತ್ರಾಸ್ತ್ರ, ಹೆಲಿಕಾಪ್ಟರ್‌ ಮತ್ತು ಇತರೆ ಅತ್ಯಂತ ಪರಿಣಾಮಕಾರಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿರಲಿದೆ. ಜೊತೆಗೆ ಯುದ್ಧ ಮುಂದುವರೆದಿರುವ ಹಿನ್ನೆಲೆಯಲ್ಲಿ ಮಿತ್ರ ದೇಶಗಳ ಜೊತೆ ಸಹಕಾರದ ಮೂಲಕ ಇನ್ನಷ್ಟುಶಸ್ತ್ರಾಸ್ತ್ರಗಳನ್ನು ಪೂರೈಸಲು ಅಮೆರಿಕ ಬದ್ಧ’ ಎಂದು ಭರವಸೆ ನೀಡಿದ್ದಾರೆ.