ಯುದ್ಧಕ್ಕೆ 50 ದಿನ: ಉಕ್ರೇನ್ ದಾಳಿಗೆ ರಷ್ಯಾ ನೌಕೆ ಧ್ವಂಸ
* ನ್ಯಾಟೋ ಪಡೆಗೆ ಉಕ್ರೇನ್ ಸೇರ್ಪಡೆ ತಡೆ
* ಯುದ್ಧಕ್ಕೆ 50 ದಿನ: ಉಕ್ರೇನ್ ದಾಳಿಗೆ ರಷ್ಯಾ ನೌಕೆ ಧ್ವಂಸ
* ಕಪ್ಪು ಸಮುದ್ರದಲ್ಲಿ 500 ಸಿಬ್ಬಂದಿಗಳಿದ್ದ ಮೋಸ್‌್ಕವಾ ಯುದ್ಧ ನೌಕೆ ನಾಶ
ಕೀವ್(ಏ,15): ನ್ಯಾಟೋ ಪಡೆಗೆ ಉಕ್ರೇನ್ ಸೇರ್ಪಡೆ ತಡೆ, ತಮ್ಮ ಪರ ಒಲವು ಹೊಂದಿರುವ ಅಧ್ಯಕ್ಷರ ನಿಯೋಜನೆ ಮತ್ತು ತನ್ನ ನೆರೆಹೊರೆಯಲ್ಲಿ ನ್ಯಾಟೋ ಸೇನೆ ನಿಯೋಜನೆಯನ್ನು ತಡೆಯುವ ಉದ್ದೇಶದೊಂದಿಗೆ ಉಕ್ರೇನ್ ಮೇಲೆ ರಷ್ಯಾ ಸಾರಿದ್ದ ಭೀಕರ ಯುದ್ಧಕ್ಕೆ ಗುರುವಾರ 50 ದಿನ ತುಂಬಿದೆ. ಆದರೆ 50ನೇ ತುಂಬಿದ ದಿನವೇ ಉಕ್ರೇನ್ ನಡೆಸಿದ ಕ್ಷಿಪಣಿ ದಾಳಿಗೆ, ಕಪ್ಪು ಸಮುದ್ರದಲ್ಲಿ ರಷ್ಯಾ ಸೇನೆಯ ನೇತೃತ್ವ ವಹಿಸಿದ್ದ ಮೋಸ್‌್ಕವಾ ಎಂಬ ಯುದ್ಧ ನೌಕೆ ಪೂರ್ಣವಾಗಿ ನಾಶವಾಗಿದೆ.
ಈ ನಡುವೆ ತಾನು ನಡೆಸಿದ ನೆಪ್ಚೂನ್ ಕ್ಷಿಪಣಿ ದಾಳಿಯಲ್ಲಿ ರಷ್ಯಾ ನೌಕೆ ಧ್ವಂಸವಾಗಿದೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ. ಆದರೆ ನೌಕೆಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡ ಪರಿಣಾಮ ನೌಕೆಯಲ್ಲಿದ್ದ ಶಸ್ತ್ರಾಸ್ತ್ರಗಳಿಗೂ ಬೆಂಕಿ ತಗುಲಿ ಅವು ಸುಟ್ಟುನಾಶವಾಗಿದೆ. ಆದರೆ ಎಲ್ಲಾ ಸಿಬ್ಬಂದಿಗಳನ್ನು ಅದರಿಂದ ತೆರವು ಮಾಡಲಾಗಿದೆ ಎಂದು ರಷ್ಯಾ ಸೇನೆ ಹೇಳಿಕೊಂಡಿದೆ. ಸಾಮಾನ್ಯವಾಗಿ ಈ ನೌಕೆಯಲ್ಲಿ 500 ಸಿಬ್ಬಂದಿ ಇರುತ್ತಾರೆ. ಹೀಗಾಗಿ ಸಾಕಷ್ಟುಸಾವು-ನೋವಿನ ಅನುಮಾನಗಳಿವೆ.
50 ದಿನ ಪೂರ್ಣ:
ಭಾರೀ ಸುಲಭದ ಗೆಲುವಿನ ಲೆಕ್ಕಾಚಾರದಲ್ಲಿ ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಅರಂಭಿಸಿದ್ದ ದಾಳಿಗೆ ಗುರುವಾರ 50 ದಿನ ತುಂಬಿದೆ. ಆದರೆ ಮಿತ್ರ ದೇಶಗಳು ನೀಡಿದ ಶಸ್ತ್ರಾಸ್ತ್ರಗಳನ್ನೇ ಬಳಸಿಕೊಂಡು, ರಷ್ಯಾ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಉಕ್ರೇನ್ ಸೇನೆ, ಕಳೆದ 50 ದಿನಗಳಲ್ಲಿ ಸಾವಿರಾರು ಯೋಧರು, ನಾಗರಿಕರ ಸಾವು, ಭಾರೀ ಆಸ್ತಿ ಪಾಸ್ತಿ ನಷ್ಟದ ಹೊರತಾಗಿಯೂ ದೇಶದ ಸ್ವಾತಂತ್ರ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಾಜಧಾನಿ ಕೀವ್, ಖಾರ್ಕೀವ್, ಮರಿಯುಪೋಲ್, ಒಡೆಸ್ಸಿ ಸೇರಿದಂತೆ ಪ್ರಮುಖ ನಗರಗಳನ್ನೇ ಗುರಿಯಾಗಿಸಿ ಸತತ ದಾಳಿ ನಡೆಸಿದ್ದ ರಷ್ಯಾ, ಇದೀಗ ಉಕ್ರೇನ್ ವಶದಲ್ಲಿರುವ ಪ್ರಮುಖ ನಗರಗಳನ್ನು ಕೈಬಿಟ್ಟು, ಹಲವು ವರ್ಷಗಳಿಂದ ಉಕ್ರೇನಿ ಬಂಡುಕೋರರ ವಶದಲ್ಲಿರುವ ಡೋನ್‌ಬಾಸ್ ಪ್ರದೇಶವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುವತ್ತ ಗಮನ ಹರಿಸಿದೆ. ಹೀಗಾಗಿ ಕಳೆದೊಂದು ವಾರದಿಂದ ಉಕ್ರೇನ್‌ನ ಪ್ರಮುಖ ನಗರಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ತನ್ನ ಗಮನವನ್ನು ಕೇವಲ ದೇಶದ ಪೂರ್ವ ಭಾಗಕ್ಕೆ ಸೀಮಿತಗೊಳಿಸಿದೆ. ಅದರಲ್ಲೂ
ಉಕ್ರೇನ್‌ಗೆ ಅಮೆರಿಕ 60000 ಕೋಟಿ ರು. ಶಸ್ತ್ರಾಸ್ತ್ರ ನೆರವು
ರಷ್ಯಾಕ್ಕೆ ಸಡ್ಡು ಹೊಡೆಯುತ್ತಿರುವ ಉಕ್ರೇನ್‌ಗೆ ಅಮೆರಿಕ ಸರ್ಕಾರ ಮತ್ತೆ 800 ದಶಲಕ್ಷ ಡಾಲರ್ (60000 ಕೋಟಿ ರು.) ಸೇನಾ ನೆರವು ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ‘ಹೊಸ ನೆರವು ಶಸ್ತ್ರಾಸ್ತ್ರ, ಹೆಲಿಕಾಪ್ಟರ್ ಮತ್ತು ಇತರೆ ಅತ್ಯಂತ ಪರಿಣಾಮಕಾರಿ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿರಲಿದೆ. ಜೊತೆಗೆ ಯುದ್ಧ ಮುಂದುವರೆದಿರುವ ಹಿನ್ನೆಲೆಯಲ್ಲಿ ಮಿತ್ರ ದೇಶಗಳ ಜೊತೆ ಸಹಕಾರದ ಮೂಲಕ ಇನ್ನಷ್ಟುಶಸ್ತ್ರಾಸ್ತ್ರಗಳನ್ನು ಪೂರೈಸಲು ಅಮೆರಿಕ ಬದ್ಧ’ ಎಂದು ಭರವಸೆ ನೀಡಿದ್ದಾರೆ.