ಅಣುಸ್ಥಾವರದ ಬಳಿ ದಾಳಿ ನಡೆಸಿದ 2ನ ದಿನಗಳ ಬಳಿಕ ಮತ್ತೊಮ್ಮೆ ರಷ್ಯಾದ ದಾಳಿಖಾರ್ಕೀವ್ ನ ಭೌತಶಾಸ್ತ್ರ ಕೇಂದ್ರದ ಮೇಲೆ ರಾಕೆಟ್ ದಾಳಿಉಕ್ರೇನ್ ನ ರಾಷ್ಟ್ರೀಯ ಭದ್ರತಾ ಸೇವೆಯಿಂದ ಫೇಸ್ ಬುಕ್ ನಲ್ಲಿ ಮಾಹಿತಿ

ಕೀವ್ (ಮಾ. 6): ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಸೇವೆಯ (Ukraine's national security service) ಪ್ರಕಾರ, ರಷ್ಯಾದ ಪಡೆಗಳು ಖಾರ್ಕಿವ್ ನಗರದ ಭೌತಶಾಸ್ತ್ರ ಸಂಸ್ಥೆಯೊಂದರ ಮೇಲೆ ರಾಕೆಟ್‌ಗಳನ್ನು ಹಾರಿಸುತ್ತಿದ್ದು, ಅದು ಪರಮಾಣು ವಸ್ತು ಮತ್ತು ರಿಯಾಕ್ಟರ್(uclear material and a reactor ) ಅನ್ನು ಹೊಂದಿರುವ ಕೇಂದ್ರವಾಗಿದ್ದು, 'ದೊಡ್ಡ ಪ್ರಮಾಣದ ಪರಿಸರ ವಿಪತ್ತಿಗೆ' ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಖಾರ್ಕಿವ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಅಂಡ್ ಟೆಕ್ನಾಲಜಿಯಲ್ಲಿ( Kharkiv Institute of Physics and Technology) ರಷ್ಯನ್ನರು ಗ್ರಾಡ್ ಲಾಂಚರ್‌ಗಳಿಂದ (Grad launchers) ದಾಳಿ ನಡೆಸುತ್ತಿದ್ದಾರೆ ಎಂದು ಭದ್ರತಾ ಸೇವೆಯು ಭಾನುವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

ಗ್ರಾಡ್ ಲಾಂಚರ್‌ಗಳಿಂದ ಹಾರಿಸಲಾದ ಕ್ಷಿಪಣಿಗಳು ನಿಖರವಾದ ಗುರಿಯನ್ನು ಹೊಂದಿಲ್ಲ, ಇದು ರಿಯಾಕ್ಟರ್ ಅನ್ನು ಹಾನಿಗೊಳಿಸಬಹುದು ಮತ್ತು ಯುರೋಪಿನಾದ್ಯಂತ ಮಾರಣಾಂತಿಕ ವಿಕಿರಣವನ್ನು ಬಿಡುಗಡೆ ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ. ಈ ವಿಜ್ಞಾನ ಸಂಸ್ಥೆಯು ನ್ಯೂಟ್ರಾನ್ ಮೂಲ ಪರಮಾಣು ಸಂಶೋಧನಾ ಸೌಲಭ್ಯವನ್ನು ಹೊಂದಿದ್ದಲ್ಲದೆ ಅದರ ಮಧ್ಯಭಾಗದಲ್ಲಿ 37 ಪರಮಾಣು ಇಂಧನ ಕೋಶಗಳನ್ನು ಹೊಂದಿದೆ ಎಂದು ಉಕ್ರೇನಿಯನ್ ವಿದೇಶಾಂಗ ಸಚಿವ ಎಮಿನ್ ಡಿಜೆಪ್ಪರ್ ಹೇಳಿದ್ದಾರೆ.

1986 ರಲ್ಲಿ ನಡೆದ ಚೆರ್ನೋಬಿಲ್ ದುರಂತದಂತೆಯೇ ಪರಮಾಣು ದುರಂತದ ಭಯವನ್ನು ಹುಟ್ಟುಹಾಕಿದ್ದ, ಜಪೋರಿಝಿಯಾದಲ್ಲಿನ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಪಡೆಗಳು ಶೆಲ್ ಮಾಡಿದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ. ಉಕ್ರೇನಿಯನ್ ಅಧಿಕಾರಿಗಳು ಪರಮಾಣು ಸ್ಥಾವರದ ನಿಯಂತ್ರಣ ಕೊಠಡಿಯೊಳಗಿನ ತುಣುಕನ್ನು ಬಿಡುಗಡೆ ಮಾಡಿದ್ದು, ಇದು ಸ್ಥಾವರದಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಅನೌನ್ಸರ್ ರಷ್ಯಾದ ಸೈನಿಕರನ್ನು ಬೇಡಿಕೊಳ್ಳುವುದನ್ನು ತೋರಿಸಿದೆ.

"'ಪರಮಾಣು ಅಪಾಯಕಾರಿ ಘಟಕದಲ್ಲಿ ಶೂಟಿಂಗ್ ನಿಲ್ಲಿಸಿ. ತಕ್ಷಣ ಶೂಟಿಂಗ್ ನಿಲ್ಲಿಸಿ! ನೀವು ಇಡೀ ಪ್ರಪಂಚದ ಭದ್ರತೆಗೆ ಬೆದರಿಕೆ ಹಾಕುತ್ತೀರಿ!' " ಎಂದು ಘಟಕದ ಅನೌನ್ಸರ್ ಘೋಷಣೆ ಮಾಡುತ್ತಿರುವ ವಿಡಿಯೋವನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದೆ. ನಿಮ್ಮ ಈ ದಾಳಿಯಿಂದ ಝಪೊರಿಝಿಯಾ ನಿಲ್ದಾಣದ ಪ್ರಮುಖ ಅಂಗಗಳ ಕೆಲಸವು ಅಡ್ಡಿಪಡಿಸಬಹುದು. ಅದನ್ನು ಮರುಸ್ಥಾಪಿಸಲು ನಮಗೆ ಅಸಾಧ್ಯವಾಗುತ್ತದೆ' ಎಂದು ಅವರು ಹೇಳಿರುವ ಅಂಶ ವಿಡಿಯೋದಲ್ಲಿ ದಾಖಲಾಗಿದೆ.

Russia Ukraine War: ಯುರೋಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ಗುಂಡಿನ ದಾಳಿ: ಉಕ್ರೇನ್
'ನೀವು ಇಡೀ ಪ್ರಪಂಚದ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಿದ್ದೀರಿ. ಗಮನ! ಪರಮಾಣು ಅಪಾಯಕಾರಿ ಸೌಲಭ್ಯದಲ್ಲಿ ಶೂಟಿಂಗ್ ನಿಲ್ಲಿಸಿ. ಪರಮಾಣು ಅಪಾಯಕಾರಿ ಸೌಲಭ್ಯದಲ್ಲಿ ಶೂಟಿಂಗ್ ನಿಲ್ಲಿಸಿ! ಪರಮಾಣು ಅಪಾಯಕಾರಿ ಸೌಲಭ್ಯದಲ್ಲಿ ಶೂಟಿಂಗ್ ನಿಲ್ಲಿಸಿ!" ಎಂದು ಅವರು ಹೇಳುತ್ತಿರುವುದು ಈ ವಿಡಿಯೋದಲ್ಲಿ. ಸೋವಿಯತ್ ಒಕ್ಕೂಟವು ಅಭಿವೃದ್ಧಿಪಡಿಸಿದ ಮೊದಲ ಪರಮಾಣು ಬಾಂಬ್‌ ನ ಹಿಂದೆ ಈ ಸಂಸ್ಥೆ ಪ್ರಮುಖವಾಗಿ ಕೆಲಸ ಮಾಡಿತ್ತು. ಇನ್ನೊಂದೆಡೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ಪಡೆಗಳು ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ನೇರವಾಗಿ ಮಧ್ಯಪ್ರವೇಶಿಸಿದರೆ ಪರಮಾಣು ದಾಳಿಯ ಎಚ್ಚರಿಕೆ ಹಾಕಿದ್ದಾರೆ.

Fire at Zaporizhzhya NPP: ಪರಮಾಣು ಸ್ಥಾವರ ಸ್ಫೊಟಗೊಂಡರೆ ಇಡೀ ಯುರೋಪ್ ನಾಶ
1986ರಲ್ಲಿ ಚರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸತ್ತಿದ್ದು ಕೆಲವೇ ನೂರಾರು ಜನರಾದರೂ, ಅದರ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು. ಈಗಲೂ ಅದರಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಜಪೋರಿಝಿಯಾ ಎನ್‌ಪಿಪಿ ಸ್ಫೋಟಗೊಂಡರೆ ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೋ ಕುಲೆಬಾ (Dmytro Orlov) ಹೇಳಿದ್ದರು. ಹೀಗಾಗಿ ಮತ್ತೇನಾದರೂ ಅಂಥದ್ದೇ ದುರಂತ ಸಂಭವಿಸಿದರೆ ವಿಶ್ವ ಮತ್ತೊಂದು ಘೋರ ದುರಂತಕ್ಕೆ ಸಾಕ್ಷಿಯಾಗುವ ಭೀತಿ ಎದುರಾಗಿದೆ.