ಖಾರ್ಕೀವ್‌ನಲ್ಲಿರುವ ಉಕ್ರೇನ್‌ನ ಪರಮಾಣು ಸಂಶೋಧನಾ ಕೇಂದ್ರವನ್ನು ಗುರಿಯಾಗಿಸಿಕೊಂಡು ರಷ್ಯಾ ತನ್ನ ಶೆಲ್ ದಾಳಿಯನ್ನು ಯುದ್ಧದ 32ನೇ ದಿನವೂ ಮುಂದುವರೆಸಿದೆ.
ಕೀವ್ (ಮಾ.28): ಖಾರ್ಕೀವ್‌ನಲ್ಲಿರುವ (Kharkiv) ಉಕ್ರೇನ್‌ನ (Ukraine) ಪರಮಾಣು ಸಂಶೋಧನಾ ಕೇಂದ್ರವನ್ನು ಗುರಿಯಾಗಿಸಿಕೊಂಡು ರಷ್ಯಾ ತನ್ನ ಶೆಲ್ ದಾಳಿಯನ್ನು ಯುದ್ಧದ 32ನೇ ದಿನವೂ ಮುಂದುವರೆಸಿದೆ. ಖಾರ್ಕೀವ್‌ನಲ್ಲಿರುವ ಇನ್ಸಿಟ್ಯೂಟ್ ಆಫ್ ಫಿಸಿಕ್ಸ್ ಅಂಡ್ ಟೆಕ್ನಾಲಜಿ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ರಷ್ಯಾ (Russia) ದಾಳಿ ಮಾಡಿದೆ ಎಂದು ರಾಜ್ಯ ಪರಮಾಣು ನಿಯಂತ್ರಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಖಾರ್ಕೀವ್‌ನ ಅಣು ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆದರೆ ಯಾವುದೇ ವಿಕಿರಣ ಸೋರಿಕೆ ಸಂಭವಿಸಿರಲಿಲ್ಲ. ರಷ್ಯಾ ಮತ್ತೆ ಮತ್ತೆ ದಾಳಿ ನಡೆಸುತ್ತಿರುವುದು ವಿಕಿರಣ ಸೋರಿಕೆಯ ಭೀತಿ ತಂದೊಡ್ಡಿದೆ. ರಷ್ಯಾದ ಆಕ್ರಮಣ ಆರಂಭವಾದಾಗಿನಿಂದಲೂ ಖಾರ್ಕೀವ್ ಮೇಲೆ ರಷ್ಯಾದ ಪಡೆಗಳು ದಾಳಿ ನಡೆಸುತ್ತಲೇ ಇವೆ. ಇಲ್ಲಿನ ಹಲವಾರು ಕಟ್ಟಡಗಳು ದಾಳಿಯಿಂದಾಗಿ ನಾಶಗೊಂಡಿವೆ.
ಲಿವಿವ್ ಮೇಲೂ ದಾಳಿ: ಉಕ್ರೇನ್‌ನ ಲಿವಿವ್ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಈ ನಡುವೆ, ಲಿವಿವ್ ನೆರೆಯ ಪೋಲೆಂಡ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ನೀಡಿದ್ದ ಸಮಯದಲ್ಲೇ ರಷ್ಯಾ ರಾಕೆಟ್ ದಾಳಿ ನಡೆಸಿದ್ದು, ಉಕ್ರೇನ್‌ನ ಯಾವ ಭಾಗದ ಮೇಲಾದರೂ ದಾಳಿ ನಡೆಸಲು ರಷ್ಯಾ ಸಿದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ. ಹಲವು ಬಾರಿ ನಗರದ ಮೇಲೆ ದಾಳಿ ನಡೆದಿದೆ ಎಂದು ಗವರ್ನರ್ ಮ್ಯಾಕ್ಸಿಮ್ ಕೊಜಿಟ್ಸಕಿ ಹೇಳಿದ್ದಾರೆ. ಈ ಹಿಂದೆಯೂ ಲಿವಿವ್ ನಗರ ಮೇಲೆ ಏರ್‌ಸ್ಟೆ್ರೖಕ್ ನಡೆಸಿದ್ದ ರಷ್ಯಾ ವಿಮಾನ ದುರಸ್ತಿ ಕೇಂದ್ರವನ್ನು ನಾಶ ಮಾಡಿತ್ತು.
'ಉಕ್ರೇನ್ ಮೇಲೆ ಯುದ್ಧ ಸಿಲ್ಲಿಸಿಲ್ಲ ರಷ್ಯಾ, ಇದು ಪುಟಿನ್ ರಣತಂತ್ರದ ಭಾಗ'
ಕೀವ್, ಖಾರ್ಕೀವ್ ಮೇಲೆ ನಿರಂತರ ದಾಳಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಿಲುಗಡೆ ಮತ್ತು ಮಾನವೀಯ ನೆರವು ವಿಚಾರವಾಗಿ ಸೋಮವಾರ ಉಭಯ ದೇಶಗಳು ನಡೆಸಿದ ಸಂದಾನ ಸಭೆ ಮತ್ತೆ ಅಪೂರ್ಣಗೊಂಡಿದೆ. ಪೋಲಿಷ್ ಗಡಿಯ ಸಮೀಪವಿರುವ ಸೇನಾ ನೆಲೆಯ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯು ಅಪಾಯಕಾರಿ ಹಂತ ತಲುಪಿದ ನಂತರದಲ್ಲಿ ಉಕ್ರೇನಿನಿಂದ ನಾಗರಿಕರನ್ನು ಸ್ಥಳಾಂತರಿಸುವ ಬಗ್ಗೆ ಹಾಗೂ ಆಹಾರ, ನೀರು, ಔಷಧಿಗಳ ತುರ್ತು ಸರಬರಾಜಿನ ಬಗ್ಗೆ ಮಾತುಕತೆಗೆ ಉಭಯ ದೇಶಗಳು ತೀರ್ಮಾನಿಸಿದ್ದವು.
ಈ ಸಂಬಂಧ ಸೋಮವಾರ ಆನ್‌ಲೈನ್ ಮೂಲಕ 4ನೇ ಸುತ್ತಿನ ಸಂದಾನ ಸಭೆ ನಡೆಸಲಾಗಿತ್ತು. ಹಲವಾರು ತಾಸುಗಳ ಕಾಲ ನಡೆದ ಈ ಸಭೆಯೂ ಅಪೂರ್ಣಗೊಂಡಿದ್ದು, ನಾಳೆ ಮತ್ತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ರಷ್ಯಾ ಪಡೆಗಳು ಉಕ್ರೇನ್‌ನ ಹಲವು ನಗರಗಳ ಮೇಲೆ ಬಾಂಬ್ ದಾಳಿ ಮುಂದುವರೆಸಿವೆ. ಈ ಆಕ್ರಮಣದಲ್ಲಿ ಹಲವು ಜನರು ಗಾಯಗೊಂಡಿದ್ದಾರೆ.
ಉಕ್ರೇನ್ ವಶಕ್ಕೆ ರಷ್ಯಾ ಮತ್ತಷ್ಟು ದಾಳಿ: ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ತನ್ನ ಯತ್ನವನ್ನು ಸತತ 19ನೇ ದಿನವೂ ಮುಂದುವರೆಸಿರುವ ರಷ್ಯಾ ಸೇನೆ, ರಾಜಧಾನಿ ಕೀವ್ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ಭಾರೀ ಪ್ರಮಾಣದ ವೈಮಾನಿಕ ದಾಳಿ ಮುಂದುವರೆಸಿದೆ. ಹೀಗಾಗಿ ದೇಶಾದ್ಯಂತ ಭಾನುವಾರ ಇಡೀ ರಾತ್ರಿ ವೈಮಾನಿಕ ದಾಳಿಯ ಮುನ್ನೆಚ್ಚರಿಕೆ ನೀಡುವ ಸೈರನ್‌ಗಳು ಮೊಳಗುತ್ತಲೇ ಇದ್ದು, ಜನರಲ್ಲಿ ಭಾರೀ ಭೀತಿ ಹುಟ್ಟಿಸಿದ್ದವು.
ಒಂದೆಡೆ ಯುದ್ಧ ಕೊನೆಗೊಳಿಸಲು ಉಕ್ರೇನ್ ಜೊತೆ ಸೋಮವಾರ 4ನೇ ಸುತ್ತಿನ ಮಾತುಕತೆ ನಡೆಸಿದ ರಷ್ಯಾ, ಅದೇ ಮತ್ತೊಂದೆಡೆ ಭಾರೀ ದಾಳಿಯ ಮೂಲಕ ಉಕ್ರೇನಿ ಜನರ ಜೀವನ ಹೈರಾಣಾಗಿಸಿದೆ. ರಾಜಧಾನಿ ಕೀವ್, ಕೀವ್‌ನ ಹೊರವಲಯ ಪ್ರದೇಶಗಳಾದ ಬ್ರೊವರಿ, ಇರ್ಪಿನ್, ಬುಚಾ, ಹೊಸ್ಟೊಮೆಲ್, ಎರಡನೇ ಅತಿದೊಡ್ಡ ನಗರ ಖಾರ್ಕೀವ್, ದಕ್ಷಿಣದ ಪ್ರಮುಖ ನಗರ ಮೈಕೋಲೈವ್, ಬಂದರು ನಗರಿ ಖೇರ್ಸನ್, ಚೆರ್ನಿಹಿವ್ ಸೇರಿದಂತೆ ಹಲವು ನಗರಗಳ ಮೇಲೆ ಭಾನುವಾರ ರಾತ್ರಿಯಿಂದಲೂ ರಷ್ಯಾ ಪಡೆಗಳು ಶೆಲ್ ಮತ್ತು ಬಾಂಬ್‌ಗಳ ಮೂಲಕ ದಾಳಿ ನಡೆಸಿವೆ.
Russia Ukraine War: ದಾಳಿಯ ಮೊದಲ ಹಂತ ಪೂರ್ಣ: ರಷ್ಯಾ ಪ್ರಕಟ
ದಾಳಿಯ ಪರಿಣಾಮ ಬಹುತೇಕ ನಗರಗಳು ದುರಸ್ತಿ ಮಾಡಲಾಗದ ಸ್ಥಿತಿಗೆ ತಲುಪಿದ್ದು, ಯುದ್ಧ ನಿಂತರೂ ಇನ್ನೂ ಹಲವು ತಿಂಗಳ ಕಾಲ ಬಂಕರ್‌ಗಳಲ್ಲೇ ಜೀವನ ಮಾಡಬೇಕಾದ ಅಪಾಯಕಾರಿ ಸ್ಥಿತಿಯನ್ನು ನಿರ್ಮಿಸಿದೆ. ಜೊತೆಗೆ ಸತತ ದಾಳಿಯಿಂದಾಗಿ ಜನವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರುವ ಮಾಡುವ ನೆರವು ಸಂಸ್ಥೆಗಳ ಯತ್ನಕ್ಕೂ ಅಡ್ಡಿಯಾಗಿದೆ. ರಷ್ಯಾ ದಾಳಿಯಲ್ಲಿ ಬ್ರೋವರಿ ನಗರದ ಕೌನ್ಸಿಲರ್ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಅಪಾರ್ಟ್‌ಮೆಂಟ್ ಮೇಲೆ ನಡೆಸಲಾದ ದಾಳಿಯಲ್ಲಿ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಇನ್ನು ವಾಯುವ್ಯ ಉಕ್ರೇನ್‌ನ ರಿವಿನ್ ಪ್ರಾಂತ್ಯದಲ್ಲಿ ದಾಳಿಗೆ ತುತ್ತಾಗಿ ಟೆಲಿವಿಷನ್ ಟವರ್ ಧ್ವಂಸವಾಗಿದೆ.
