World War III ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ, ರಾತ್ರೋರಾತ್ರಿ ತಲ್ಲಣ!

  • ಮೂರನೇ ಮಹಾಯುದ್ಧದ ನೈಜ ಅಪಾಯವಿದೆ ಎಂದ ರಷ್ಯಾ
  • ಉಕ್ರೇನ್‌ ಹಾಗೂ ಉಕ್ರೇನ್ ಬೆಂಬಲಿತ ರಾಷ್ಟ್ರಗಳಿಗೆ ಎಚ್ಚರಿಕೆ
  • ಸಂಧಾನಕ್ಕೂ ಮಿತಿ ಇದೆ, ಸರ್ಗೆ ಲಾವ್ರೋ ಎಚ್ಚರಿಕೆಗೆ ಸಂಚಲನ
Russia Ukraine crisis moscow foreign minister Sergei Lavrov warns of real danger of World War III ckm

ಮಾಸ್ಕೋ(ಏ.26): ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇದೀಗ ಮತ್ತೊಂದು ಅಪಾಯದ ಸೂಚನೆ ನೀಡಿದೆ. ಮೂರೇ ದಿನಕ್ಕೆ ಉಕ್ರೇನ್ ಮುಗಿಸಲು ಹೋದ ರಷ್ಯಾ ತಿಂಗಳು ಕಳೆದರೂ ಉಕ್ರೇನ್ ಕೈವಶ ಮಾಡಲು ಸಾಧ್ಯವಾಗಿಲ್ಲ. ಉಕ್ರೇನ್ ಬಹುತೇಕ ಧ್ವಂಸಗೊಂಡಿದ್ದರೂ ಹೋರಾಟ ನಿಂತಿಲ್ಲ. ಇತ್ತ ಹಲವು ದೇಶಗಳು ಉಕ್ರೇನ್‌ಗೆ ಬೆಂಬಲ ನೀಡಿದೆ. ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ರಷ್ಯಾ, ಇದೀಗ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ.

ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ವಿಶ್ವ ಮಹಾಯ ಯುದ್ಧದ ಸೂಚನೆ ನೀಡಿದ್ದಾರೆ. ರಷ್ಯಾ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಸರ್ಗೆ ಲಾವ್ರೋ ಈ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಉಕ್ರೇನ್ ಜೊತೆ ಶಾಂತಿ ಮಾತುಕತೆ ಮುಂದುವರಿಯಲಿದೆ. ಆದರೆ ಮೂರನೇ ಮಹಾಯುದ್ಧದ ನೈಜ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್‌ನ ಉಕ್ಕು ಕಾರ್ಖಾನೆ ಮೇಲೆ ರಷ್ಯಾ ದಾಳಿ

ಮಾತುಕತೆ ಹಾಗೂ ಸಂಧಾನಗಳಿಗೆ ಒಂದು ಮಿತಿ ಇದೆ. ಉತ್ತಮ ಸಂಬಂಧವಿಲ್ಲದಿದ್ದರೆ ಮಾತುಕತೆಗೆ ಅರ್ಥವೂ ಇರುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂದು ಲಾವ್ರೋ ಹೇಳಿದ್ದಾರೆ. ಈ ಮೂಲಕ ತನ್ನ ದಾಳಿಗೆ ಜಗ್ಗದ ಉಕ್ರೇನ್ ಮೇಲೆ ಇದೀಗ 3ನೇ ಮಹಾಯುದ್ಧ ಅಸ್ತ್ರ ಪ್ರಯೋಗಿಸಲು ರಷ್ಯಾ ಮುಂದಾಗಿದೆ. ಇತ್ತ ಉಕ್ರೇನ್ ಬೆಂಬಲಿಸುತ್ತಿರುವ ದೇಶಗಳಿಗೂ ರಷ್ಯಾ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ.

ಒಂದೇ ದಿನ ಉಕ್ರೇನ್‌ನ 1001 ಪ್ರದೇಶದ ಮೇಲೆ ರಷ್ಯಾ ದಾಳಿ
ಉಕ್ರೇನ್‌ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದ ರಷ್ಯಾ, ಒಂದೇ ದಿನ ಉಕ್ರೇನ್‌ನ 1001 ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಉಕ್ರೇನ್‌ನ ವಿವಿಧ ನಗರಗಳು, ಆಯಕಟ್ಟಿನ ಸ್ಥಳಗಳು, ರಷ್ಯಾದ ಮೇಲೆ ದಾಳಿ ನಡೆಸುತ್ತಿರುವ ಸ್ಥಳಗಳು ಸೇರಿದಂತೆ ಒಟ್ಟು 1001 ಸ್ಥಳಗಳ ಮೇಲೆ ಇಡೀ ದಿನ ದಾಳಿ ನಡೆಸಲಾಯಿತು ಎಂದು ರಷ್ಯಾ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಉಕ್ರೇನಿಗೆ ಅಮೆರಿಕ ಸಚಿವ ಬ್ಲಿಂಕನ್‌ ರಹಸ್ಯ ಭೇಟಿ
ಉಕ್ರೇನ್‌-ರಷ್ಯಾ ಯುದ್ಧದ ನಡುವೆಯೇ ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್‌ ಮತ್ತು ರಕ್ಷಣಾ ಕಾರ‍್ಯದರ್ಶಿ ಲಾಯ್ಡ್‌ ಆಸ್ಟಿನ್‌ ಸೋಮವಾರ ಉಕ್ರೇನಿಗೆ ರಹಸ್ಯ ಭೇಟಿ ನೀಡಿ ನೀಡಿದರು. ಯುದ್ಧ ಆರಂಭದ ಬಳಿಕ ಉಕ್ರೇನಿಗೆ ಅಮೆರಿಕದ ಮೊಟ್ಟಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ.

ರಷ್ಯಾದ ಮೇಲೆ ಪರಿಣಾಮ ಬೀರಲು ಆರಂಭಿಸಿದ ಪಾಶ್ಚಿಮಾತ್ಯ ನಿರ್ಬಂಧ, ಕೆಲಸ ಕಳೆದುಕೊಂಡ 2 ಲಕ್ಷ ಜನ!

ಭೇಟಿ ವೇಳೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಬ್ಲಿಂಕನ್‌, ರಷ್ಯಾ ವಿರುದ್ಧ ಹೋರಾಡಲು ಎಲ್ಲಾ ರೀತಿ ನೆರವು ನೀಡುವುದಾಗಿ ತಿಳಿಸಿದರು. ಹಾಗೆಯೇ ಭೀಕರ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧದ ಹೋರಾಟಕ್ಕಾಗಿ ಉಕ್ರೇನಿಗೆ 16.5 ಕೋಟಿ ಡಾಲರ್‌ ಮೊತ್ತದ ಸ್ಫೋಟಕಗಳನ್ನು ಮತ್ತು 30 ಕೋಟಿ ಡಾಲರ್‌ ವಿದೇಶಿ ಮಿಲಿಟರಿ ನೆರವು ನೀಡಲು ಅಮೆರಿಕ ನಿರ್ಧರಿಸಿದೆ ಎಂದು ತಿಳಿಸಿದರು.

ಪೋಲೆಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕನ್‌, ‘ಯುದ್ಧದಲ್ಲಿ ರಷ್ಯಾ ಸೋಲುತ್ತಿದೆ. ಉಕ್ರೇನ್‌ ಮೇಲುಗೈ ಸಾಧಿಸುತ್ತಿದೆ. ಉಕ್ರೇನಿನ ಮೇಲೆ ಹಿಡಿತ ಸಾಧಿಸಿ, ಅದರ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಕಸಿಯುವುದು ರಷ್ಯಾ ಉದ್ದೇಶವಾಗಿತ್ತು. ಆದರೆ ಈ ಪ್ರಯತ್ನದಲ್ಲಿ ರಷ್ಯಾ ಸೋತಿದೆ’ ಎಂದರು.

Latest Videos
Follow Us:
Download App:
  • android
  • ios