* ಅಮೆರಿಕಕ್ಕೆ ರಾಕೆಟ್ ಎಂಜಿನ್ ರಫ್ತು ನಿಲ್ಲಿಸಲು ರಷ್ಯಾ ನಿರ್ಧಾರ* ಪೊರಕೆಯ ಮೇಲೆ ಅವರು ಬಾಹ್ಯಾಕಾಶಕ್ಕೆ ಹಾರಲಿ* ರೋಸ್ಕೊಸ್ಮೊಸ್ ಮಹಾನಿರ್ದೇಶಕ ಡಿಮಿಟ್ರಿ ರೋಗೋಜಿನ್ ವ್ಯಂಗ್ಯ
ಮಾಸ್ಕೋ (ಮಾ.4): ಉಕ್ರೇನ್‌ಗೆ (Ukraine) ಶಸ್ತ್ರಾಸ್ತ್ರ ನೆರವು ನೀಡುತ್ತಿರುವ ಅಮೆರಿಕ (United States) ವಿರುದ್ಧವೂ ರಷ್ಯಾ (Russia) ಪ್ರತೀಕಾರಕ್ಕೆ ಮುಂದಾಗಿದೆ. ‘ಇನ್ಮುಂದೆ ಅಮೆರಿಕಕ್ಕೆ ರಾಕೆಟ್ ಎಂಜಿನ್ ರಫ್ತನ್ನು ನಿಲ್ಲಿಸುತ್ತೇವೆ. ಅವರು ಪೊರಕೆ (broomsticks) ಮೇಲೇ ಬಾಹ್ಯಾಕಾಶಕ್ಕೆ ಹಾರಲಿ’ ಎಂದು ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೋಸ್ಕೊಸ್ಮೊಸ್ (Roscosmos) ಮಹಾನಿರ್ದೇಶಕ ಡಿಮಿಟ್ರಿ ರೋಗೋಜಿನ್ (Dmitry Rogozin) ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿನ ಪ್ರಯೋಗಳಿಗೆ ಅಮೆರಿಕ ಸರ್ಕಾರಕ್ಕೆ ನೀಡಿದ್ದ ಸಹಕಾರವನ್ನೂ ರಷ್ಯಾ ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ. ಹಾಗೆಯೇ ಜರ್ಮನ್ ಏರೋಸ್ಪೇಸ್ ಕೇಂದ್ರ (ಡಿಎಲ್‌ಆರ್)ದ ಜೊತೆಗಿನ ಸಹಕಾರವನ್ನೂ ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಉನ್ನತ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮತ್ತು ವೃತ್ತಿಪರ ತರಬೇತಿ ಕ್ಷೇತ್ರ ಸೇರಿದಂತೆ ರಷ್ಯಾದ ಸಂಸ್ಥೆಗಳೊಂದಿಗಿನ ಎಲ್ಲಾ ಸಹಯೋಗವನ್ನು ಅಂತ್ಯಗೊಳಿಸುತ್ತಿರುವುದಾಗಿ ಗುರುವಾರ ಡಿಎಲ್‌ಆರ್ ಸಹ ಘೋಷಿಸಿದೆ.
ಉಕ್ರೇನ್ ಸುದ್ದಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ರೇಡಿಯೋ ಕೇಂದ್ರ ಬಂದ್
ಮಾಸ್ಕೋ: ಉಕ್ರೇನಿನ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ವಿಮರ್ಶಾತ್ಮಕವಾಗಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ಪ್ರಗತಿಪರ ರೇಡಿಯೊ (Radio Statio) ಕೇಂದ್ರ ಎಖೋ ಮೊಸ್ಕವಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ ಎಂದು ರೇಡಿಯೋ ಕೇಂದ್ರದ ಮುಖ್ಯಸ್ಥ ಗುರುವಾರ ಆರೋಪಿಸಿದ್ದಾರೆ.
ರಷ್ಯಾ ಸರ್ಕಾರ ಉಕ್ರೇನಿನ ಮೇಲಿನ ದಾಳಿಯನ್ನು ‘ಕೇವಲ ಸೇನಾ ಕಾರ್ಯಾಚರಣೆ’ ಎಂದು ಕರೆದಿದ್ದು, ರಷ್ಯಾದ ಭದ್ರತೆಗೆ ಅಪಾಯಕಾರಿಯೆನಿಸುವ ಉಕ್ರೇನಿನ ಸೇನಾನೆಲೆಗಳನ್ನು ಮಾತ್ರ ನಾಶಪಡಿಸುವ ಉದ್ದೇಶದಿಂದ ಇದನ್ನು ನಡೆಸಲಾಗಿದೆ ಎಂದು ಹೇಳಿಕೆ ನೀಡಿತ್ತು. ಮಾಧ್ಯಮಗಳು ಇದೇ ನಿಲುವಿನೊಂದಿಗೆ ಸುದ್ದಿಯನ್ನು ಪ್ರಸಾರ ಮಾಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿತ್ತು. ಇದನ್ನು ಉಲ್ಲಂಘಿಸಿ ವಿಮರ್ಶಾತ್ಮಕವಾಗಿ ಪ್ರಸಾರ ಮಾಡಿದ್ದಕ್ಕೆ ರಷ್ಯಾದ ಪ್ರಾಸಿಕ್ಯೂಟರ್ ಜನರಲ್ ಆದೇಶದಂತೆ ಎಖೋ ಮಾಸ್ಕ್‌ವಿ ರೇಡಿಯೋ ಕೇಂದ್ರ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದ ಮೇಲೆ ಮಾರ್ಚ್ 3 ರಿಂದ ನಿರ್ಬಂಧ ಹೇರಲಾಗಿದೆ. ರಷ್ಯಾದ ಸೇನಾ ಕಾರ್ಯಾಚರಣೆ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮಾಧ್ಯಮ ಸಂಪಾದಕರಿಗೆ 15 ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನನ್ನು ರಷ್ಯಾ ಶೀಘ್ರವೇ ಹೊರಡಿಸಲಿದೆ ಎನ್ನಲಾಗಿದೆ.
ಬೆಲಾರಸ್ ಮೇಲೂ ಅಮೆರಿಕ ನಿರ್ಬಂಧ
ವಾಷಿಂಗ್ಟನ್: ಉಕ್ರೇನ್ ದಾಳಿ ನಡೆಸಿರುವ ರಷ್ಯಾಗೆ ಬೆಂಬಲ ನೀಡುತ್ತಿರುವ ಉಕ್ರೇನ್‌ನ ನೆರೆಯ ರಾಷ್ಟ್ರ ಬೆಲಾರಸ್ (Belarus) ಮೇಲೆ ಅಮೆರಿಕ ಮೊದಲ ಬಾರಿಗೆ ನಿಷೇಧ ಹೇರಿದೆ. ರಷ್ಯಾ ಆಕ್ರಮಣಕ್ಕೂ ಮೊದಲು ಸಮರಾಭ್ಯಾಸ ನಡೆಸಲು ಮತ್ತೂ ಉಕ್ರೇನ್ ಉತ್ತರ ಗಡಿಯಿಂದ ರಷ್ಯಾ ಆಕ್ರಮಣ ಮಾಡಲು ಬೆಲಾರಸ್ ನೀಡಿತ್ತು.
News Hour 8ನೇ ದಿನಕ್ಕೆ ಕಾಲಿಟ್ಟ ಯುದ್ಧ, ಸೈಬಿರಿಯಾಕ್ಕೆ ಪುಟಿನ್ ಕುಟುಂಬ
ಬೆಲಾರಾಸ್‌ನಿಂದ ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದ ತಂತ್ರಜ್ಞಾನ ಸರಕುಗಳಿಗೆ ಅಮೆರಿಕ ಸಂಪೂರ್ಣ ನಿರ್ಬಂಧ ಹೇರಿದೆ. ಅಷ್ಟೇ ಅಲ್ಲದೇ ರಷ್ಯಾದ ರಕ್ಷಣಾ ವಲಯವನ್ನು ಗುರಿಯಾಗಿಸಿಕೊಂಡು ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ಉತ್ಪಾದನಾ ಕಂಪನಿಗಳ ಮೇಲೆ ಗಮನಾರ್ಹ ವೆಚ್ಚವನು ವಿಧಿಸಲು ತೀರ್ಮಾನಿಸಿದೆ.
ಟೀವಿ ನೇರಪ್ರಸಾರದಲ್ಲೇ ಉಕ್ರೇನ್ ಬಾಂಬ್ ಸ್ಫೋಟ: ಬೆಚ್ಚಿದ ವರದಿಗಾರ!
ಕೀವ್: ಉಕ್ರೇನಿನ ಮೇಲೆ ರಷ್ಯಾ ಬಾಂಬ್ ದಾಳಿಯನ್ನು ಮತ್ತಷ್ಟುತೀವ್ರಗೊಳಿಸಿದ್ದು, ರಾಜಧಾನಿ ಕೀವ್‌ನಲ್ಲಿ ಮಾಧ್ಯಮ ವರದಿಗಾರರೊಬ್ಬರು ವಿಡಿಯೋ ನೇರಪ್ರಸಾರ ಮಾಡುತ್ತಿರುವ ಸಂದರ್ಭದಲ್ಲೇ ಬೃಹತ್ ಸ್ಫೋಟವಾಗಿದೆ. ಸ್ಫೋಟವು ವಿಡಿಯೋದಲ್ಲಿ ಸೆರೆಯಾಗಿದ್ದು ಕೂಡಲೇ ವರದಿಗಾರರು ನೇರ ಪ್ರಸಾರವನ್ನು ಮೊಟಕುಗೊಳಿಸಿದ್ದಾರೆ.
Jyotiraditya Scindia ಹಾಗೂ ರೊಮೇನಿಯಾ ಮೇಯರ್ ನಡುವೆ ವಾಕ್ಸಮರಕ್ಕೆ ಇದು ಕಾರಣ!
ಕೀವ್, ಖಾರ್ಕೀವ್ ಸೇರಿದಂತೆ ಉಕ್ರೇನಿನ ದೊಡ್ಡ ನಗರಗಳಲ್ಲಿ ರಷ್ಯಾ ಗುರುವಾರ ನಡೆಸಿದ ಶೆಲ್ ದಾಳಿಯಲ್ಲಿ 5 ಜನರು ಮೃತಪಟ್ಟಿದ್ದಾರೆ. 30 ಲಕ್ಷಕ್ಕೂ ಹೆಚ್ಚು ಸಂತ್ರಸ್ತರು ಬಂಕರ್‌ಗಳಲ್ಲಿ ಅಡಗಿದ್ದಾರೆ. ನಗರಗಳಲ್ಲಿ ನಿರಂತರವಾಗಿ ಸೈರನ್ ಮೊಳಗುತ್ತಿದ್ದು ಜನರಿಗೆ ಬಂಕರ್ ಬಿಟ್ಟು ಹೊರಬರದಂತೆ ಸೂಚಿಸಲಾಗಿದೆ.
