ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಕ್ರೇನ್‌ ನೌಕಾಪಡೆಗೆ ಸೇರಿದ ಅತಿದೊಡ್ಡ ಹಡಗೊಂದು ರಷ್ಯಾ ನಡೆಸಿದ ಮೊದಲ ಸಮುದ್ರ ಡ್ರೋನ್‌ ದಾಳಿಯಿಂದ ಸ್ಫೋಟಿಸಿ ಮುಳುಗಡೆಯಾಗಿದೆ.

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಉಕ್ರೇನ್‌ ನೌಕಾಪಡೆಗೆ ಸೇರಿದ ಅತಿದೊಡ್ಡ ಹಡಗೊಂದು ರಷ್ಯಾ ನಡೆಸಿದ ಮೊದಲ ಸಮುದ್ರ ಡ್ರೋನ್‌ ದಾಳಿಯಿಂದ ಸ್ಫೋಟಿಸಿ ಮುಳುಗಡೆಯಾಗಿದೆ.

ಈ ಬಗ್ಗೆ ರಷ್ಯಾದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಉಕ್ರೇನ್‌ ಅಧಿಕಾರಿಗಳೂ ದಾಳಿಯನ್ನು ದೃಢಪಡಿಸಿದ್ದಾರೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್ ಮತ್ತು ಆಪ್ಟಿಕಲ್ ವಿಚಕ್ಷಣಕ್ಕಾಗಿ ವಿನ್ಯಾಸಗೊಳಿಸಲಾದ ಮಧ್ಯಮ ಗಾತ್ರದ ಸಿಮ್ಫೆರೋಪೋಲ್ ಹಡಗು ಉಕ್ರೇನ್‌ನ ಒಡೆಸ್ಸಾ ಪ್ರದೇಶದ ದನ್ಯೂಬ್‌ ನದಿಯಲ್ಲಿದ್ದಾಗ ದಾಳಿ ನಡೆಸಿರುವುದಾಗಿ ರಷ್ಯಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಡ್ರೋನ್‌ ಬಳಸಿ ಮಾಡಿದ ದಾಳಿ ಇದಾಗಿದೆ. ‘ದಾಳಿಯಿಂದಾಗಿ ಹಡಗಲ್ಲಿದ್ದ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಬಹುತೇಕ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಕಾಣೆಯಾದವರಿಗಾಗಿ ಶೋಧ ನಡೆಯುತ್ತಿದೆ’ ಎಂದು ಉಕ್ರೇನ್‌ ನೌಕಾಪಡೆಯ ವಕ್ತಾರರು ತಿಳಿಸಿರುವುದಾಗಿ ವರದಿಯಾಗಿದೆ.

ಉಕ್ರೇನ್‌ ಯುದ್ಧವನ್ನೇ ಮೋದಿ ಯುದ್ಧ ಎಂದು ಬಣ್ಣಿಸಿದೆ

ನ್ಯೂಯಾರ್ಕ್‌/ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿ ಮೂಲಕ ಉಕ್ರೇನ್ ಯುದ್ಧದ ಬೆಂಕಿಗೆ ಭಾರತ ತುಪ್ಪ ಸುರಿಯುತ್ತಿದೆ ಎಂದು ಆರೋಪಿಸುತ್ತಿದ್ದ ಅಮೆರಿಕ, ಇದೀಗ ಉಕ್ರೇನ್‌ ಯುದ್ಧವನ್ನೇ ಮೋದಿ ಯುದ್ಧ ಎಂದು ಬಣ್ಣಿಸಿದೆ. ಜೊತೆಗೆ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ನಾಳೆಯೇ ನಾವು ಹೆಚ್ಚುವರಿ ತೆರಿಗೆ ಕಡಿತಕ್ಕೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ವ್ಯಾಪಾರ ನೀತಿಯ ಸಲಹೆಗಾರ ಪೀಟರ್‌ ನವಾರೋ ಹೇಳಿದ್ದಾರೆ.

ಇನ್ನೊಂದೆಡೆ, ‘ ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಟ್ರಂಪ್‌ ಕೂಡ ಭಾರತದ ವಿರುದ್ಧದ ಕ್ರಮಗಳಿಂದ ಹಿಂದೆ ಸರಿಯುವುದಿಲ್ಲ. ಅಮೆರಿಕದ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆ ತೆರೆಯುವ ವಿಚಾರದಲ್ಲಿ ಭಾರತ ತನ್ನ ಬಿಗಿಪಟ್ಟು ಮುಂದುವರಿಸಿದೆ. ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಜಟಿಲವಾಗುತ್ತಿದೆ ಎಂದು ಟ್ರಂಪ್‌ರ ಮತ್ತೊಬ್ಬ ಆರ್ಥಿಕ ಸಲಹೆಗಾರ ಕೆವಿನ್‌ ಹಸ್ಸೆಟ್‌ ಕೂಡ ಭಾರತಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ.