ಯುರೋಪಿನಲ್ಲಿ ನಡೆದ ಅತ್ಯಂತ ಕೆಟ್ಟಮಹಾ ವಲಸೆ  ಉಕ್ರೇನಿನಿಂದ 35.3 ಲಕ್ಷ ಜನರು ಪಲಾಯನ ರಷ್ಯಾ ಉಕ್ರೇನ್‌ನಿಂದ ಸಂಕಷ್ಟದಲ್ಲಿ ಜನತೆ, ವಿಶ್ವಸಂಸ್ಥೆ  

ಜಿನೇವಾ(ಮಾ.23): ರಷ್ಯಾ ಆಕ್ರಮಣ ಆರಂಭವಾದಾನಿಂದ ಈವರೆಗೆ ಉಕ್ರೇನಿನಿಂದ ಸುಮಾರು 35 ಲಕ್ಷ ಜನರು ಗುಳೆ ಹೋಗಿದ್ದಾರೆ. ಇದು ಎರಡನೇ ಮಹಾಯುದ್ಧನ ನಂತರ ಯುರೋಪಿನಲ್ಲಿ ನಡೆದ ಅತ್ಯಂತ ಕೆಟ್ಟಮಹಾ ವಲಸೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ತಿಳಿಸಿದೆ. ಮಂಗಳವಾರ ಈ ಕುರಿತ ವರದಿ ಬಿಡುಗಡೆ ಮಾಡಿದ ವಿಶ್ವ ಸಂಸ್ಥೆಯ ನಿರಾಶ್ರಿತರ ಉನ್ನತ ಆಯೋಗ, ಯುದ್ಧ ಆರಂಭವಾದಾಗಿನಿಂದ ಉಕ್ರೇನಿನಿಂದ 35.3 ಲಕ್ಷ ಜನರು ಪಲಾಯನ ವಿದೇಶಗಳಿಗೆ ಮಾಡಿದ್ದಾರೆ. ಈ ಪೈಕಿ ನೆರೆಯ ಪೋಲೆಂಡ್‌ ದೇಶ ಸಿಂಹ ಪಾಲು ಪಡೆದಿದ್ದು 21 ಲಕ್ಷ ಮಂದಿ ಆಶ್ರಯ ನೀಡಿದೆ. ನಂತರ ರೊಮೇನಿಯಾಗೆ 5.40 ಲಕ್ಷ ಜನರು ಮತ್ತು ಮೋಲ್ಡೋವಾಗೆ 3.67 ಲಕ್ಷ ಜನರು ವಲಸೆ ಹೋಗಿದ್ದಾರೆ ಎಂದು ತಿಳಿಸಿದೆ. ಇಂಟರ್‌ನ್ಯಾಷನಲ… ಆರ್ಗನೈಸೇಶನ್‌ ಫಾರ್‌ ಮೈಗ್ರೇಶನ್‌, ಉಕ್ರೇನ್‌ನಲ್ಲಿ ಸುಮಾರು 65 ಲಕ್ಷ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಯುದ್ಧ ಮುಂದುವರಿದರೆ ಅವರಲ್ಲಿ ಹೆಚ್ಚಿನವರು ವಿದೇಶಕ್ಕೆ ಪಲಾಯನ ಮಾಡಬಹುದೆಂದು ಅಂದಾಜಿಸಿದೆ.

ಮರಿಯುಪೋಲ್‌ನಲ್ಲಿರುವ ಉಕ್ಕು ಘಟಕದ ಮೇಲೆ ದಾಳಿ
ರಷ್ಯಾ-ಉಕ್ರೇನ್‌ ನಡುವಿನ ಕದನ 24ನೇ ದಿನ ಪೂರೈಸಿದೆ. ದಾಳಿಯಿಂದ ತೀವ್ರ ಜರ್ಝರಿತಗೊಂಡಿರುವ ಉಕ್ರೇನ್‌ನ ಮರಿಯುಪೋಲ್‌ ನಗರದಲ್ಲಿನ ಅಝೋವ್‌ಸ್ಟಾಲ್‌ ಉಕ್ಕು ಘಟಕವನ್ನು ವಶಪಡಿಸಿಕೊಳ್ಳಲು ರಷ್ಯಾ ಸೇನೆ ಶನಿವಾರ ಭಾರೀ ದಾಳಿ ಆರಂಭಿಸಿದೆ. ಇದು ಯುರೋಪ್‌ನ ಅತಿದೊಡ್ಡ ಉಕ್ಕು ಘಟಕವಾಗಿದೆ.

ವಿಕಿರಣ ತಡೆಯುವ ಮಾತ್ರೆಗಳಿಗೆ ಭಾರೀ ಬೇಡಿಕೆ!

ಇದನ್ನು ತಡೆಯಲು ಉಕ್ರೇನ್‌ ಸೇನೆ ಹೋರಾಟ ಆರಂಭಿಸಿದೆ. ಹೀಗಾಗಿ ಸ್ಥಳದಲ್ಲೀಗ ಭಾರೀ ಕದನ ನಡೆದಿದೆ. ಈ ಕುರಿತು ಹೇಳಿಕೆ ನೀಡಿರುವ ಉಕ್ರೇನ್‌ನ ಆಂತರಿಕ ಸಚಿವಾಲಯದ ಸಲಹೆಗಾರ ವಾಡಿಮ್‌ ಡೆನಿಸೆನ್ಕೋ, ನಾವು ನಮ್ಮ ಆರ್ಥಿಕ ದೈತ್ಯನನ್ನು ಕಳೆದುಕೊಂಡಿದ್ದೇವೆ. ಇನ್ನೂ ಹೇಳಬೇಕೆಂದರೆ ಇಡೀ ಯುರೋಪ್‌ನಲ್ಲೇ ಅತಿದೊಡ್ಡ ಮೆಟಲರ್ಜಿಕಲ್‌ ಘಟಕವನ್ನು ನಾಶಪಡಿಸಲಾಗುತ್ತಿದೆ ಎಂದು ಬೇಸರಿಸಿದ್ದಾರೆ. ಇನ್ನು ಕೀವ್‌, ಖಾರ್ಕೀವ್‌ ಹಾಗೂ ಇತರೆಡೆ ಕೂಡ ಬಾಂಬ್‌ ದಾಳಿಯ ವರದಿಯಾಗಿದೆ.

ಥಿಯೇಟರ್‌ನಲ್ಲಿದ್ದ ಇನ್ನೂ 1300 ಜನ ನಾಪತ್ತೆ:
ಗುರುವಾರ ಮರಿಯುಪೋಲ್‌ನಲ್ಲಿ ದಾಳಿಗೊಳಗಾದ ಥಿಯೇಟರ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದವರ ಪೈಕಿ 130 ಜನರನ್ನು ರಕ್ಷಿಸಲಾಗಿದೆ. ಇನ್ನೂ 1300 ಜನರು ಇನ್ನೂ ಅದರೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉಕ್ರೇನ್‌ ಸರ್ಕಾರ ಹೇಳಿದೆ.

ಅಮೆರಿಕ ಜೊತೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳುವುದಾಗಿ ರಷ್ಯಾ ಎಚ್ಚರಿಕೆ!

ಉಕ್ರೇನ್‌ ಸೇನೆ ಬಗ್ಗುಬಡಿಯಲು ರಷ್ಯಾ ಯತ್ನ
ಸತತ ಮೂರು ವಾರಗಳ ಪ್ರಯತ್ನದ ಹೊರತಾಗಿಯೂ ಉಕ್ರೇನ್‌ ಸೇನೆ ಮತ್ತು ರಾಜಧಾನಿ ಕೀವ್‌ ಇನ್ನೂ ಕೈವಶವಾಗದ ಕಾರಣ ಇರಸುಮುರಿಸಿಗೆ ಒಳಾಗಿರುವ ರಷ್ಯಾ ಸೇನೆ, ಉಕ್ರೇನ್‌ ಸೇನೆಯನ್ನು ಹೆಡೆಮುರಿ ಕಟ್ಟುವ ಆಶಯದೊಂದಿಗೆ ಬುಧವಾರ ಭಾರೀ ದಾಳಿ ನಡೆಸಿದೆ.

ರಾಜಧಾನಿ ಕೀವ್‌, ಕೀವ್‌ನ ಹೊರ ವಲಯದ ಪ್ರದೇಶಗಳು, ಖಾರ್ಕೀವ್‌, ಸೇರಿದಂತೆ ಹಲವು ನಗರಗಳ ಮೇಲೆ ಬುಧವಾರ ಭಾರಿ ಪ್ರಮಾಣದ ಶೆಲ್‌, ಬಾಂಬ್‌ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಹಲವು ಜನವಸತಿ ಪ್ರದೇಶಗಳು ಹಾನಿಗೊಳಗಾಗಿದ್ದು, ಹಲವು ಅಪಾರ್ಟ್‌ಮೆಂಟ್‌ಗಳು ಬೆಂಕಿಗೆ ಆಹುತಿಯಾಗಿದೆ. ಕೀವ್‌ನ ಸುತ್ತಮುತ್ತಲ 12 ನಗರಗಳಿಗೆ ನೀರಿನ ಪೂರೈಕೆ ಬಂದ್‌ ಆಗಿದ್ದರೆ, 6 ನಗರಗಳಿಗೆ ವಿದ್ಯುತ್‌ ಮತ್ತು ಉಷ್ಣಾಂಶ ಪೂರೈಕೆ ಸ್ಥಗಿತಗೊಂಡಿದೆ.

ಉಕ್ರೇನ್‌ ನಿಂದ 22,500 ಮಂದಿ ಭಾರತಕ್ಕೆ
ಫೆ.1ರಿಂದ ಮಾ.11ರ ನಡುವೆ 22,500 ಮಂದಿ ಭಾರತೀಯರು ಉಕ್ರೇನ್‌ನಿಂದ ಭಾರತಕ್ಕೆ ಆಗಮಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ.ಸಿಂಗ್‌ ತಿಳಿಸಿದ್ದಾರೆ. ರಷ್ಯಾ ಉಕ್ರೇನ್‌ ಮೇಲೆ ದಾಳಿ ನಡೆಸಿದ ಪರಿಣಾಮ ಫೆ.24ರಿಂದ ಉಕ್ರೇನ್‌ನ ವಾಯುಪ್ರದೇಶವನ್ನು ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ 26ರಿಂದ ಉಕ್ರೇನ್‌ನ ನೆರೆಯ ದೇಶಗಳಾದ ಪೋಲೆಂಡ್‌, ರೊಮೇನಿಯಾ ಮತ್ತು ಹಂಗೇರಿಗಳಿಗೆ ಭಾರತೀಯರನ್ನು ಸ್ಥಳಾಂತರಿಸಲಾಯಿತು 14 ಭಾರತೀಯ ವಿಮಾನಗಳು ಸೇರಿದಂತೆ 90 ವಿಮಾನಗಳಿಂದ ಆಪರೇಷನ್‌ ‘ಗಂಗಾ’ ಅಡಿಯಲ್ಲಿ ಭಾರತೀಯರನ್ನು ಕರೆತರಲಾಯಿತು. ಈ ವಿಮಾನಯಾದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ವಿ.ಕೆ. ಸಿಂಗ್‌ ತಿಳಿಸಿದ್ದಾರೆ.