ಮಾಸ್ಕೋ(ಜು.16): ರಷ್ಯಾ ಅಭಿವೃದ್ಧಿ ಪಡಿಸಿದ SARS-CoV-2 ಕೊರೋನಾ ಔಷದ ಅತ್ಯಂತ ಸುರಕ್ಷಿತ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ. ಈ ಮೂಲಕ ರಷ್ಯಾದ ಕೊರೋನಾ ಔಷದ ಸೋಂಕು ನಿವಾರಿಸಲು ಪರಿಣಾಮಕಾರಿ ಮಾತ್ರವಲ್ಲ, ಅಡ್ಡಪರಿಣಾಮಗಳಿಲ್ಲದ ಸುರಕ್ಷಿತ ಔಷಧಿ ಎಂದಿದೆ. ಗಮೆಲಿ ಇನ್ಸಿ‌ಟಿಟ್ಯೂಟ್ ಆಫ್ ಎಪಿಡೆಮಿಯೋಲಜಿ ಹಾಗೂ ಮೈಕ್ರೋಬಯೋಲಜಿ ಸಂಸ್ಥೆ ಈ ಕೊರೋನಾ ಔಷಧ ಅಭಿವದ್ದಿ ಪಡಿಸಿದೆ.

ಕೊರೋನಾ ಔಷಧಿ ಸಂಶೋಧಿಸುತ್ತಿರುವ ಆಕ್ಸ್‌ಫರ್ಡ್‌ನಿಂದ ಸಿಹಿ ಸುದ್ದಿ; ಇಂದು ಘೋಷಣೆ!...

ಮಾನವನ ಮೇಲಿನ ಪ್ರಯೋಗದಲ್ಲೇ ರಷ್ಯಾದ ಕೊರೋನಾ ಔಷಧ ಸುರಕ್ಷಿತ ಎಂದು ಸಾಬೀತಾಗಿದೆ. ಮಾನವ ಪ್ರಯೋಗದಲ್ಲಿ ಸೋಂಕಿತರು ಶೀಘ್ರದಲ್ಲೇ ಚೇತರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಇತರ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಸೋಂಕಿತರಿಗೆ ಲಸಿಕೆ ಪ್ರಯೋಗದ ಬಳಿಕ ಅವರ ರಕ್ಷ ಪರೀಕ್ಷೆಯಿಂದ ಎಲ್ಲಾ ಪರೀಕ್ಷೆಗಳನ್ನು ಮಾಡಿದ್ದೇವೆ. ಮೊದಲ ಹಂತದಲ್ಲಿ ಲಸಿಕೆ ಪ್ರಯೋಗ ಮಾಡಿದ 18 ಮಂದಿ ಜುಲೈ 15ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಸೋಂಕಿತರ ಮೇಲಿನ ಪ್ರಯೋಗದ ಬಳಿಕ 28 ದಿನಗಳ ಕಾಲ ಸೋಂಕಿತರ ಮೇಲೆ ತೀವ್ರ ನಿಗಾ ಇಡಲಾಗಿತ್ತು. ದಿನದಿಂದ ದಿನಕ್ಕೆ ಸೋಂಕಿತರಲ್ಲಿ ಚೇತರಿಕಯಾಗಿತ್ತು. ರಷ್ಯಾದ SARS-CoV-2 ಪ್ರಯೋಗವನ್ನು ಹಲವು ಗುಂಪುಗಳ ಮೇಲೆ ಮಾಡಲಾಗಿತ್ತು. ಜೂನ್ 23 ರಂದು ಒಂದು ಗುಂಪಿಗೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಜುಲೈ ಅಂತ್ಯದಲ್ಲಿ ಎಲ್ಲಾ ಪ್ರಯೋಗಿತರು ಬಿಡುಗಡೆಯಾಗಲಿದ್ದಾರೆ. ಆಗಸ್ಟ್ ಮೊದಲ ವಾರದಿಂದಲೇ ಕೊರೋನಾ ಔಷಧ ರಷ್ಯಾ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ರಕ್ಷಿಣ ಸಚಿವಾಲಯ ಹೇಳಿದೆ.