ನಾಗರಿಕರ ರಕ್ಷಣೆಗೆ ಮತ್ತೆ 5 ಗಂಟೆ ದಿಢೀರ್ ಕದನ ವಿರಾಮ ಘೋಷಿಸಿದ ರಷ್ಯಾ
- ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ
- ಎರಡು ನಾಗರಿಕರ ಸ್ಥಳಾಂತರಕ್ಕೆ ಕದನ ವಿರಾಮ
- ಐದು ಗಂಟೆಗಳ ಕಾಲ ಕದನ ವಿರಾಮ ಘೋಷಿಸಿದ ರಷ್ಯಾ
ಕೀವ್(ಮಾ.5): ಉಕ್ರೇನ್ ಮೇಲಿನ ತನ್ನ ಆಕ್ರಮಣಕ್ಕೆ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ನಾಗರಿಕರ ಸ್ಥಳಾಂತರಕ್ಕಾಗಿ ಉಕ್ರೇನ್ ಮೇಲಿನ ಆಕ್ರಮಣವನ್ನು ಐದು ಗಂಟೆಗಳ ಕಾಲ ರಷ್ಯಾ ತಡೆ ಹಿಡಿದಿದೆ. ಪ್ರಸ್ತುತ ಉಕ್ರೇನ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ ಕದನ ವಿರಾಮ ಘೋಷಣೆ ಆಗಿದೆ. ( (ಭಾರತದಲ್ಲಿ ಮಧ್ಯಾಹ್ನ 1.30ರ ಅವಧಿಗೆ ಉಕ್ರೇನ್‌ನಲ್ಲಿ ಬೆಳಗ್ಗೆ 10 ಗಂಟೆ) ಹೀಗೆಂದು ರಷ್ಯಾದ ಮಾಧ್ಯಮ ಸ್ಪುಟ್ನಿಕ್ ವರದಿ ಮಾಡಿದೆ ಎಂಬುದನ್ನುಉಲ್ಲೇಖಿಸಿ ಟೈಮ್ಸ್ ನವ್ ವರದಿ ಮಾಡಿದೆ.
ಮಾರಿಯುಪೋಲ್(Mariupol) ಮತ್ತು ವೊಲ್ನೋವಾಖಾದಿಂದ(Volnovakha) ನಾಗರಿಕರನ್ನು ಸ್ಥಳಾಂತರ ಮಾಡಲು ಈ ಕದನ ವಿರಾಮ ಘೋಷಣೆ ಮಾಡಲಾಗಿದೆ. ರಷ್ಯಾ ಮುತ್ತಿಗೆ ಹಾಕಿದ ಎರಡು ನಗರಗಳಾದ ಮರಿಯುಪೋಲ್ ಮತ್ತು ವೊಲ್ನೊವಾಖಾ ನಿವಾಸಿಗಳನ್ನು ಸ್ಥಳಾಂತರಿಸಲು ರಷ್ಯಾದ ರಕ್ಷಣಾ ಸಚಿವಾಲಯ ಶನಿವಾರ ಕದನ ವಿರಾಮವನ್ನು ಘೋಷಿಸಿದೆ. 'ಇಂದು, ಮಾರ್ಚ್ 5, ಮಾಸ್ಕೋ ಸಮಯ ಬೆಳಗ್ಗೆ 10 ರಿಂದ ರಷ್ಯಾದ ಕಡೆಯವರು ಮೌನವನ್ನು ಘೋಷಿಸುತ್ತಾರೆ. ಮರಿಯುಪೋಲ್ ಮತ್ತು ವೋಲ್ನೋವಾಖಾದಿಂದ ನಾಗರಿಕರ ನಿರ್ಗಮನಕ್ಕಾಗಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯುತ್ತಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಮಾನವೀಯ ಕಾರಿಡಾರ್‌ಗಳನ್ನು ಅನುಮತಿಸಲು ರಷ್ಯಾದ ಪಡೆಗಳು ಮಾಸ್ಕೋ ಸಮಯ 10 ಗಂಟೆಗೆ ಗುಂಡಿನ ದಾಳಿಯನ್ನು ನಿಲ್ಲಿಸುತ್ತವೆ.
ಉಕ್ರೇನ್‌ನ ಬಂದರು ನಗರದಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮಾನವೀಯ ಕಾರಿಡಾರ್ ಅನ್ನು ಸ್ಥಾಪಿಸಲು ಮಾರಿಯುಪೋಲ್ ಮೇಯರ್ ವಾಡಿಮ್ ಬಾಯ್ಚೆಂಕೊ (Vadym Boychenko) ಕರೆ ನೀಡಿದ ನಂತರ ಈ ಬೆಳವಣಿಗೆ ಆಗಿದೆ ಎಂದು ತಿಳಿದು ಬಂದಿದೆ.
Russia-Ukraine War: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಪರಾರಿ?
450,000 ಜನಸಂಖ್ಯೆಯನ್ನು ಹೊಂದಿರುವ ಮರಿಯುಪೋಲ್ ರಷ್ಯಾದ ಪಡೆಗಳಿಗೆ ಹೆಚ್ಚಿನ ಕಾರ್ಯತಂತ್ರ ಕೈಗೊಳ್ಳಲು ಪ್ರಮುಖ ಕೇಂದ್ರವಾಗಿದೆ
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನಗರವು ಭಾರೀ ಶೆಲ್ ದಾಳಿಗೆ ಸಾಕ್ಷಿಯಾಗಿದೆ ಮತ್ತು ನೀರು ಅಥವಾ ವಿದ್ಯುತ್ ಸಂಪರ್ಕವಿಲ್ಲದೇ ಇಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ. ಸದ್ಯಕ್ಕೆ, ನಾವು ಮಾನವೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿದ್ದೇವೆ ಮತ್ತು ಮಾರಿಯುಪೋಲ್ ಅನ್ನು ದಿಗ್ಬಂಧನದಿಂದ ಹೊರಬರಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿದ್ದೇವೆ ಎಂದು ಮೇಯರ್ ಬಾಯ್ಚೆಂಕೊ ಹೇಳಿದ್ದಾರೆಂದು ಮಾಧ್ಯಮ ಉಲ್ಲೇಖಿಸಿದೆ.
Russia-Ukraine War: ನಾನು ದೇಶ ಬಿಟ್ಟು ಹೋಗಿಲ್ಲ ಎಂದ ಉಕ್ರೇನ್ ಅಧ್ಯಕ್ಷ
ಯುದ್ಧ ಪೀಡಿತ ಉಕ್ರೇನ್‌ನ ಸ್ಥಿತಿ ಭೂಮಿಯ ನರಕದಂತಾಗಿದೆ. 160 ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳು ಧ್ವಂಸಗೊಂಡಿವೆ. ಬಂಕರ್ ನಲ್ಲೇ ಸಾವಿರಾರು ಮಂದಿ ಆಶ್ರಯ ಪಡೆದಿದ್ಧಾರೆ. ಅನ್ನ, ನೀರು, ಯಾವುದೂ ಇಲ್ಲದೇ ಬಂಕರ್‌ನಲ್ಲಿ ಸಾವಿರಾರು ಮಂದಿ ಪರದಾಡುತ್ತಿದ್ದಾರೆ. ಮನೆ ಮುಂದೆ ಬಿಳುವ ಹಿಮದ ಹನಿಯೇ ನೀರಿಗೆ ಆಸರೆಯಾಗಿದೆ. ಕಳೆದೆರಡು ದಿನಗಳಿಂದ ಅನ್ನ, ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಮೈನಸ್ ಡಿಗ್ರಿ ಉಷ್ಣಾಂಶದಲ್ಲಿ ಜನ ಕಷ್ಟಪಡುತ್ತಿದ್ದಾರೆ.
ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಸದ್ಯ ಅವರು ಪೋಲೆಂಡ್‌ನಲ್ಲಿದ್ದಾರೆ ಎಂದು ರಷ್ಯಾ ಆರೋಪಿಸಿದೆ. ಆದರೆ, 'ನಾನು ದೇಶ ತೊರೆದಿಲ್ಲ, ನಾನೆಲ್ಲಿಗೂ ಹೋಗಿಲ್ಲ. ಉಕ್ರೇನ್‌ನಲ್ಲೇ ಇದ್ದೇನೆ. ಕೆಲಸ ಮಾಡುತ್ತಿದ್ದೇನೆ ಎಂದು ಜೆಲೆನ್‌ಸ್ಕಿ ಸಮರ್ಥನೆ ನೀಡಿದ್ದಾರೆ. ಯುದ್ಧ ಆರಂಭವಾಗುತ್ತಿದ್ದಂತೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಜೆಲೆನ್‌ಸ್ಕಿ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು ಹಾಗೂ ತಮ್ಮ ದೇಶಕ್ಕೆ ಆಹ್ವಾನ ನೀಡಿದ್ದವು. ಆದರೆ ಯಾವುದೇ ಕಾರಣಕ್ಕೂ ದೇಶ ತೊರೆಯುವುದಿಲ್ಲ ಎಂದು ಜೆಲೆನ್‌ಸ್ಕಿ ಹೇಳಿದ್ದರು. ತಾವು ಈ ಹಿಂದೆ ದೇಶ ತೊರೆದಿದ್ದಾಗಿ ಎದ್ದಿದ್ದ ಪುಕಾರುಗಳನ್ನು ತಳ್ಳಿ ಹಾಕಿದ್ದರು.