Asianet Suvarna News Asianet Suvarna News

ವಿಶ್ವದ ಪ್ರಖ್ಯಾತ ಮೊಬೈಲ್‌ ಫೋನ್‌ ಕಂಪನಿ 'ಆಪಲ್‌' ವಿರುದ್ಧ ರಷ್ಯಾದ ಗಂಭೀರ ಆರೋಪ!

ಅಮೆರಿಕದ ವಿರುದ್ಧ ರಷ್ಯಾ ಬಹುದೊಡ್ಡ ಆರೋಪ ಮಾಡಿದ್ದು, ಐಫೋನ್‌ಗಳ ಮೂಲಕ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ ಎಂದು ಹೇಳಿದೆ. ಆದರೆ, ಆಪಲ್‌ ಕಂಪನಿ ರಷ್ಯಾದ ಆರೋಪಗಳನ್ನು ನಿರಾಕರಿಸಿದೆ.
 

Russia claims America is spying with iPhone Apple company rejects allegations san
Author
First Published Jun 2, 2023, 4:34 PM IST

ಮಾಸ್ಕೋ (ಜೂ.2): ತನ್ನ ವಿರುದ್ಧ ಗೂಢಾಚಾರಿಕೆ ಮಾಡಲು ಅಮೆರಿಕ ಐಫೋನ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಷ್ಯಾ ಇಂದು ವಿಶ್ವದ ಅತ್ಯಂತ ಪ್ರಖ್ಯಾತ ಮೊಬೈಲ್‌ ಕಂಪನಿಯ ಮೇಲೆ ಆರೋಪ ಮಾಡಿದೆ. ಮೂಲಗಳ ಪ್ರಕಾರ ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವೀಸ್‌ ಅಥವಾ ಎಫ್‌ಎಸ್‌ಬಿ, ಐಪೋನ್‌ಗಳಲ್ಲಿ ಅಮೆರಿಕದ ಕಣ್ಗಾವಲು ವ್ಯವಸ್ಥೆಯ ಪರಿಕರಗಳನ್ನು ಪತ್ತೆ ಮಾಡಿರುವುದಾಗಿ ತಿಳಿಸಿದೆ. ಅಮೆರಿಕದ ಹ್ಯಾಕರ್‌ಗಳು ಇಸ್ರೇಲ್, ಸಿರಿಯಾ, ಚೀನಾ ಮತ್ತು ನ್ಯಾಟೋ ಸದಸ್ಯರ ರಾಜತಾಂತ್ರಿಕರನ್ನು ಬೇಹುಗಾರಿಕೆ ಅಭಿಯಾನದಲ್ಲಿ ಗುರಿಯಾಗಿಸಿಕೊಂಡಿದ್ದಾರೆ. ಇದಲ್ಲದೆ, ಸೋವಿಯತ್ ಒಕ್ಕೂಟದ ಭಾಗವಾಗಿದ್ದ ದೇಶಗಳಲ್ಲಿ ಕೆಲಸ ಮಾಡುವ ರಷ್ಯಾದ ಅನೇಕ ಸ್ಥಳೀಯ ಜನರು ಮತ್ತು ರಾಜತಾಂತ್ರಿಕರ ಫೋನ್‌ಗಳನ್ನು ಸಹ ಹ್ಯಾಕ್ ಮಾಡಲಾಗುತ್ತಿದೆ ಎಂದು ಎಫ್‌ಎಸ್‌ಬಿ ನೇರ ಆರೋಪ ಮಾಡಿದೆ. ಅಮೆರಿಕದ ವಿಶೇಷ ಸೇವೆಯು ಈ ಗುಪ್ತಚರ ಕಾರ್ಯಾಚರಣೆಯನ್ನು ಬಹಳ ವರ್ಷಗಳಿಂದ ನಡೆಸುತ್ತಿದೆ. ಯುಎಸ್ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್ಎಸ್ಎ) ಮತ್ತು ಆಪಲ್ ಕಂಪನಿಯ ನಡುವೆ ನಿಕಟ ಸಹಕಾರವಿದೆ ಎಂದು ರಷ್ಯಾದ ಸಂಸ್ಥೆ ಹೇಳಿಕೊಂಡಿದೆ.

ಆರೋಪ ನಿರಾಕರಿಸಿದ ಆಪಲ್‌: ಆದರೆ, ಅಪಲ್‌ ಕಂಪನಿ ಮಾತ್ರ ರಷ್ಯಾದ ಆರೋಪಗಳನ್ನು ನೇರವಾಗಿ ತಿರಸ್ಕಾರ ಮಾಡಿದೆ. ಇಂಥದ್ದೊಂದು ಬೇಹುಗಾರಿಕೆ ಆಗುತ್ತಿರುವ ಬಗ್ಗೆಯೇ ನಮಗೆ ತಿಳಿದಿಲ್ಲ. ಅದರೊಂದಿಗೆ ಎಫ್‌ಎಸ್‌ಬಿಯ ಆರೋಪಗಳನ್ನು ಆಪಲ್‌ ನಿರಾಕರಿಸಿದೆ. ನಾವು ಯಾವುದೇ ದೇಶದ ಸರ್ಕಾರದ ಸಹಯೋಗದೊಂದಿಗೆ ಫೋನ್ ಅನ್ನು ಟ್ಯಾಂಪರ್ ಮಾಡಿಲ್ಲ ಮತ್ತು ಮುಂದೆ ಎಂದಿಗೂ ಹಾಗೆ ಮಾಡೋದಿಲ್ಲ ಎಂದು ತಿಳಿಸಿದೆ. 

2019ರಿಂದಲೂ ಬೇಹುಗಾರಿಕೆ: ಇನ್ನೊಂದೆಡೆ ರಷ್ಯಾದ ಎನ್‌ಎಸ್‌ಎ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದೆ. ಮತ್ತೊಂದೆಡೆ, ಮಾಸ್ಕೋ ಮೂಲದ ಕ್ಯಾಸ್ಪರ್ಸ್ಕಿ ಲ್ಯಾಬ್ ಕಂಪನಿಯು ತನ್ನ ಹಲವಾರು ಉದ್ಯೋಗಿಗಳ ಸಾಧನಗಳನ್ನು ಈ ಕಾರ್ಯಾಚರಣೆಯ ಮೂಲಕ ರಾಜಿ ಮಾಡಿಕೊಂಡಿದೆ ಎಂದು ಹೇಳಿದೆ. 2019ರಲ್ಲಿ ಮೊದಲ ಬಾರಿಗೆ ಐಫೋನ್‌ ಮೂಲ ಬೇಹುಗಾರಿಕೆ ನಡೆಸಿದ್ದ ಪುರಾವೆಗಳು ಕಂಡು ಬಂದಿತ್ತು.ಅದು ಇಲ್ಲಿಯವರೆಗೂ ಮುಂದುವರಿದಿದೆ. ಆದರೆ, ಆ ವರ್ಷದಲ್ಲಿ ನಡೆದ ಸೈಬರ್‌ ದಾಳಿಯ ಪ್ರಮುಖ ಗುರಿ ನಾನಾಗಿರಲಿಲ್ಲ ಎಂದು ಕ್ಯಾಸ್ಪರ್ಸ್ಕಿ ಲ್ಯಾಬ್  ತಿಳಿಸಿದೆ.

ಐಫೋನ್ ಬಳಸದಂತೆ ರಷ್ಯಾದ ಅಧಿಕಾರಿಗಳಿಗೆ ಆದೇಶ: ಅಮೆರಿಕಾದಲ್ಲಿ ತಯಾರಿಸಿದ ಐಫೋನ್‌ಗಳು ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಸಾಬೀತುಪಡಿಸಲು ಇದು ನಿರಾಕರಿಸಿದೆ ಎಂದು ರಷ್ಯಾದ ವಿದೇಶಾಂಗ ಇಲಾಖೆ ತಿಳಿಸಿದೆ.  ನಮ್ಮ ಮೇಲೂ ಸೈಬರ್ ದಾಳಿ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಸಚಿವಾಲಯದ ಪ್ರಕಾರ, ಯುಎಸ್ ಗುಪ್ತಚರ ಸಂಸ್ಥೆ ಐಟಿ ಕಂಪನಿಗಳನ್ನು ಇಂಟರ್ನೆಟ್ ಬಳಕೆದಾರರ ಡೇಟಾವನ್ನು ಅವರ ಅರಿವಿಲ್ಲದೆ ಸಂಗ್ರಹಿಸಲು ವರ್ಷಗಳಿಂದ ಬಳಸುತ್ತಿದೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಬೆಲ್ಫರ್ ಸೆಂಟರ್ ಸೈಬರ್ 2022 ಪವರ್ ಇಂಡೆಕ್ಸ್ ಪ್ರಕಾರ, ಅಮೆರಿಕವು ಸೈಬರ್ ಶಕ್ತಿಯಲ್ಲಿ ಮುಂಚೂಣಿಯಲ್ಲಿದೆ. ಅದರ ನಂತರ ಚೀನಾ, ರಷ್ಯಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿದೆ. ಇದಕ್ಕೂ ಮೊದಲು, ರಷ್ಯಾದಲ್ಲಿ 2024 ರ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಐಫೋನ್‌ಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಕ್ರೆಮ್ಲಿನ್ ಅಧಿಕಾರಿಗಳಿಗೆ ಸೂಚಿಸಿತ್ತು.. ಈ ಮೂಲಕ ಅಮೆರಿಕದ ಗುಪ್ತಚರ ಸಂಸ್ಥೆಗಳು ರಷ್ಯಾದ ಮೇಲೆ ಕಣ್ಣಿಟ್ಟಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ರಷ್ಯಾದ ಪ್ರಧಾನ ಭದ್ರತಾ ಸಂಸ್ಥೆ ಮತ್ತು ಸೋವಿಯತ್ ಒಕ್ಕೂಟದ ಕೆಜಿಬಿಯ ಮುಖ್ಯ ಉತ್ತರಾಧಿಕಾರಿ ಸಂಸ್ಥೆ ಎಫ್‌ಸಿಬಿ ಆಗಿದೆ. ಇದನ್ನು 1995 ರಲ್ಲಿ ಬೋರಿಸ್ ಯೆಲ್ಟ್ಸಿನ್ ಸ್ಥಾಪಿಸಿದರು. ಇದರ ಪ್ರಧಾನ ಕಛೇರಿ ಮಾಸ್ಕೋದಲ್ಲಿದೆ. ಇದರ ನೇತೃತ್ವವನ್ನು ಅಲೆಕ್ಸಾಂಡರ್ ಬೊರ್ಟ್ನಿಕೋವ್ ಅವರು ರಷ್ಯಾದ ಅಧ್ಯಕ್ಷರಾದ ಪುಟಿನ್ ಅವರಿಗೆ ನೇರವಾಗಿ ವರದಿ ಮಾಡುತ್ತಾರೆ.
 

Follow Us:
Download App:
  • android
  • ios