Russia Ukraine War ಚರ್ನೋಬಿಲ್‌ನಲ್ಲಿ ಉಕ್ರೇನ್‌ನಿಂದ ಡರ್ಟಿ ಬಾಂಬ್‌!

ಈ ಕಾರಣದಿಂದಲೇ ಉಕ್ರೇನ್‌ನ ಎಲ್ಲಾ ಪರಮಾಣು ಸ್ಥಾವರ ವಶಕ್ಕೆ ಯತ್ನ?

ಉಕ್ರೇನ್ ನಲ್ಲಿ ಪ್ಲುಟೋನಿಯಂ ಆಧಾರಿತ ಡರ್ಟಿ ಬಾಂಬ್ ನಿರ್ಮಾಣ

ರಷ್ಯಾದಲ್ಲಿ ಮಾಸ್ಟರ್‌ಕಾರ್ಡ್‌, ವೀಸಾ ಕಾರ್ಯಾಚರಣೆ ಸ್ಥಗಿತ

russia claimed ukraine was close to building plutonium based nuclear weapon dirty bomb in chernobyl san

ಮಾಸ್ಕೋ (ಮಾ.7): ಉಕ್ರೇನ್‌ನ ಪರಮಾಣು ಸ್ಥಾವರಗಳ (NPP) ಮೇಲೆ ದಾಳಿಗೆ ಜಾಗತಿಕ ಖಂಡನೆ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ, ಚರ್ನೋಬಿಲ್‌ (chernobyl) ಸೇರಿದಂತೆ ಹಲವು ಅಣುಸ್ಥಾವರಗಳಲ್ಲಿ ಉಕ್ರೇನ್‌ ಸರ್ಕಾರ ರಹಸ್ಯವಾಗಿ ಪ್ಲುಟೋನಿಯಂ (plutonium based) ಆಧರಿತ ಡರ್ಟಿ ಬಾಂಬ್‌ (ಅಣ್ವಸ್ತ್ರ) ಉತ್ಪಾದಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಷ್ಯಾದ (Russia) ಹಲವು ಮಾಧ್ಯಮಗಳು ವರದಿ ಮಾಡಿವೆ.

ಇದೇ ಕಾರಣಕ್ಕಾಗಿಯೇ ಇತ್ತೀಚೆಗೆ ಝೆಪೋರ್‌ಝಿಯಾ ಪರಮಾಣು ಘಟಕವನ್ನು ತನ್ನ ವಶಕ್ಕೆ ಪಡೆದಿತ್ತು. ಜೊತೆಗೆ ಶನಿವಾರ ಉಕ್ರೇನಿನ ಎರಡನೇ ಅತಿದೊಡ್ಡ ಅಣುಸ್ಥಾವರ ಯುಝ್ನೋಕ್ರೈನ್ಸ್‌$್ಕದಿಂದ ಕೇವಲ 20 ಕಿ.ಮೀ. ದೂರಲ್ಲಿ ತನ್ನ ಸೇನೆಯನ್ನು ನೆಲೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಚರ್ನೋಬಿಲ್‌ ಘಟಕ 2000ನೇ ಇಸವಿಯಲ್ಲೇ ಮುಚ್ಚಿದ್ದರೂ ಈಗಲೂ ಅಲ್ಲಿ ಉಕ್ರೇನ್‌ ವಿಜ್ಞಾನಿಗಳು ಡರ್ಟಿ ಬಾಂಬ್‌ ಉತ್ಪಾದಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಉಕ್ರೇನ್‌ ಮಾತ್ರ 1994ರಲ್ಲಿ ಸೋವಿಯತ್‌ ಒಕ್ಕೂಟದ (Soviet Union)ಪತನದ ಬಳಿಕ ತಾನು ಅಣ್ವಸ್ತ್ರ ರಹಿತ ದೇಶ ಎಂದು ಘೋಷಿಕೊಂಡಿದ್ದು, ಈಗಲೂ ಅದಕ್ಕೆ ಬದ್ಧ. ತಾನು ಮರಳಿ ಪರಮಾಣು ಅಸ್ತ್ರ ಉತ್ಪಾದನೆಯಲ್ಲಿ ಹೆಜ್ಜೆ ಹಾಕುವುದಿಲ್ಲ ಎಂದು ಹೇಳಿದೆ.

ಏನಿದು ಡರ್ಟಿ ಬಾಂಬ್‌?: ಇದು ಸಾಮಾನ್ಯ ಅಣು ಬಾಂಬ್‌ ಅಥವಾ ಇತರೆ ಸಾಂಪ್ರದಾಯಿಕ ಬಾಂಬ್‌ನ ಮಿಶ್ರಣ ಎನ್ನಬಹುದು. ಇದರಲ್ಲಿ ಡೈನಾಮೈಟ್‌ ಮತ್ತು ವಿಕಿರಣಕಾರಿ ಪದಾರ್ಥಗಳನ್ನು ಘನ, ದ್ರವ ಅಥವಾ ಅನಿಲ ರೂದದಲ್ಲಿಟ್ಟು ಸ್ಫೋಟಕ್ಕೆ ಬಳಸಲಾಗುತ್ತದೆ. ಈ ಮೂಲಕ ಸ್ಫೋಟದ ಬಳಿಕ ಸುತ್ತಮುತ್ತಲ ಸಣ್ಣ ಪ್ರದೇಶದಲ್ಲಿ ವಿಕಿರಣಕಾರಿ ವಸ್ತುಗಳನ್ನು ಹರಡಲು ಬಳಸಲಾಗುತ್ತದೆ.

ರಷ್ಯಾದಲ್ಲಿ ಮಾಸ್ಟರ್‌ಕಾರ್ಡ್‌, ವೀಸಾ ಕಾರ್ಯಾಚರಣೆ ಸ್ಥಗಿತ
ನ್ಯೂಯಾರ್ಕ್:
ಉಕ್ರೇನಿನ ಮೇಲೆ ಅಪ್ರಚೋದಿತವಾಗಿ ದಾಳಿ ನಡೆಸಿದ್ದಕ್ಕಾಗಿ ರಷ್ಯಾದಲ್ಲಿ ಮಾಸ್ಟರ್‌ ಕಾರ್ಡ್‌ (Master Card) ಹಾಗೂ ವೀಸಾ (Visa) ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿವೆ ಎಂದು ಕಂಪನಿ ಶನಿವಾರ ಹೇಳಿದೆ. ರಷ್ಯಾದಲ್ಲಿ ಶೇ.74 ರಷ್ಟುಹಣಕಾಸಿನ ವಹಿವಾಟಿಗಾಗಿ ಮಾಸ್ಟರ್‌ ಕಾರ್ಡ್‌ ಹಾಗೂ ವೀಸಾಗಳನ್ನೇ ಬಳಸಲಾಗುತ್ತಿದ್ದ ಹಿನ್ನೆಲೆಯಲ್ಲಿ ಕಂಪನಿಯ ಈ ಕ್ರಮದಿಂದಾಗಿ ರಷ್ಯಾದ ಜನಸಾಮಾನ್ಯರೂ ಭಾರೀ ಬೆಲೆ ತೆರಬೇಕಾಗಿದೆ.

‘ರಷ್ಯಾದ ಬ್ಯಾಂಕುಗಳು ನೀಡಿದ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲಾಗುವುದು. ಅಲ್ಲದೇ ಇತರೆ ದೇಶಗಳ ಮಾಸ್ಟರ್‌ ಕಾರ್ಡ್‌ ಸಹ ರಷ್ಯಾದ ಮಾರುಕಟ್ಟೆಹಾಗೂ ಎಟಿಎಂಗಳಲ್ಲಿ ಇನ್ನು ಕಾರ್ಯ ನಿರ್ವಹಿಸುವುದಿಲ್ಲ’ ಎಂದು ಮಾಸ್ಟರ್‌ ಕಾರ್ಡ್‌ ಕಂಪನಿ ಹೇಳಿದೆ. ಅದರಂತೇ ಮುಂಬರುವ ದಿನಗಳಲ್ಲಿ ವೀಸಾ ಕಾರ್ಡಿನ ಎಲ್ಲ ವಹಿವಾಟುಗಳನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ವೀಸಾ ಕಂಪನಿಯ ಮುಖ್ಯಸ್ಥ ಎ.ಐ. ಕೆಲ್ಲಿ ಹೇಳಿದ್ದಾರೆ.

ಉಕ್ರೇನಿನ ಅಧ್ಯಕ್ಷ ವ್ಲಾದಿಮಿರ್‌ ಜೆಲೆನ್‌ಸ್ಕಿ ರಷ್ಯಾದಲ್ಲಿ ಮಾಸ್ಟರ್‌ ಕಾರ್ಡ್‌ ಹಾಗೂ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅಮೆರಿಕದ ಶಾಸಕರೊಂದಿಗಿನ ಖಾಸಗಿ ಸಂವಾದದಲ್ಲಿ ವಿನಂತಿಸಿಕೊಂಡಿದ್ದರು. ನಂತರ ಕೇವಲ 16 ನಿಮಿಷಗಳ ಅಂತರದಲ್ಲಿ ಎರಡೂ ಕಂಪನಿಗಳು ತಮ್ಮ ಸೇವೆಯನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿವೆ.

ಪ್ಯಾಲೆಸ್ತೀನ್‌ನ ಭಾರತೀಯ ರಾಯಭಾರಿ ಆರ್ಯ ನಿಧನ
ಜೆರುಸಲೇಂ: ಪ್ಯಾಲೇಸ್ತೀನ್‌ ರಾಜಧಾನಿ ರಮಲ್ಲಾದಲ್ಲಿ ಭಾರತೀಯ ರಾಯಭಾರಿಯಾಗಿ (Palestine Envoy) ಕಾರ್ಯನಿರ್ವಹಿಸುತ್ತಿದ್ದ ಮುಖುಲ್‌ ಆರ್ಯ(38)  (Mukul Arya) ಭಾನುವಾರ ನಿಧನರಾದರು. 2008ನೇ ಬ್ಯಾಚಿನ ಐಎಫ್‌ಎಸ್‌ ಅಧಿಕಾರಿಯಾಗಿದ್ದ ಆರ್ಯ, ವಿದೇಶಾಂಗ ವ್ಯವಹಾರ ಸಚಿವಾಲಯದ ಅಧಿಕಾರಿಯಾಗಿ, ಯುನೆಸ್ಕೋ ಭಾರತ ನಿಯೋಗದ ಕಾಯಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ‘ಈ ದುಃಖದ ಸಂದರ್ಭದಲ್ಲಿ ವಿದೇಶಾಂಗ ಸಚಿವರಾದ ಡಾ.ರಿಯಾದ್‌ ಅಲ್‌-ಮಲಿಕಿ ಅವರು, ಜೈಶಂಕರ್‌ ಅವರ ಮೂಲಕ ಆರ್ಯ ಅವರ ಕುಟುಂಬಕ್ಕೆ ಮತ್ತು ಸಂಬಂಧಿಕರಿಗೆ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದಾರೆ’ ಎಂದು ಪ್ಯಾಲೆಸ್ತೀನ್‌ ಸರ್ಕಾರದ ಪ್ರಕಟಣೆ ತಿಳಿಸಿದೆ. ಪ್ಯಾಲೇಸ್ತೀನ್‌ ಸರ್ಕಾರದ ಹಲವು ಗಣ್ಯರು ಆರ್ಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios