ರಷ್ಯಾ ಉಕ್ರೇನ್ ಯುದ್ಧ ಒಂದು ಹಂತಕ್ಕೆ ತೀವ್ರ ಸ್ವರೂಪ ಪಡೆದು ಬಳಿಕ ತಣ್ಣಗಾಗಿತ್ತು. ಆದರೆ ರಷ್ಯಾದ ಕ್ರಿಮಿಯಾ ಸೇತುವೆ ಮೇಲಿನ ದಾಳಿ ಸ್ಫೋಟಕ್ಕೆ ರಷ್ಯಾ ಕೆರಳಿದ. ಇದಕ್ಕೆ ಪ್ರತೀಕಾರವಾಗಿ ಉಕ್ರೇನ್ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿದೆ. ಜೊತೆಗೆ ಖುದ್ದು ರಷ್ಯಾ ಅಧ್ಯಕ್ಷ ಪುಟಿನ್ ವಿಡಿಯೋ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

ಕೀವ್(ಅ.10): ರಷ್ಯಾ ಉಕ್ರೇನ್ ನಡುವಿನ ಯುದ್ಧ ಮತ್ತೆ ತೀವ್ರಗೊಳ್ಳುತ್ತಿದೆ. ಬರೋಬ್ಬರಿ 230 ದಿನಗಳ ಸತತ ಯುದ್ಧ ಹಲವು ಸಾವುನೋವುಗಳಿಗೆ ಕಾರಣವಾಗಿದೆ. ಇದೀಗ ರಷ್ಯಾ ಮತ್ತೆ ಕೆರಳಿದೆ. ಇಂದು ಉಕ್ರೇನ್‌ನ ಕೀವ್ ಸೇರಿದಂತೆ ಹಲವು ಭಾಗದ ಮೇಲೆ ರಷ್ಯಾ ದಾಳಿ ನಡೆಸಿದೆ. ಮಿಸೈಲ್ ದಾಳಿ ಮಾಡಿರುವ ರಷ್ಯಾ, ಇದು ಕ್ರಿಮಿಯಾ ಸೇತುವ ಸ್ಫೋಟಕ್ಕೆ ಪ್ರತೀಕಾರ ಎಂದಿದೆ. ಭಯೋತ್ಪಾದಕರ ಛೂ ಬಿಟ್ಟು ಸೇತುವೆ ಸ್ಫೋಟಿಸಲಾಗಿದೆ. ಇದರ ಹಿಂದೆ ಉಕ್ರೇನ್ ನೇರ ಕೈವಾಡ ಎಂದು ರಷ್ಯಾ ಆರೋಪಿಸಿತ್ತು. ಆದರೆ ಈ ಆರೋಪವನ್ನು ಉಕ್ರೇನ್ ನಿರಾಕರಿಸಿತ್ತು. ಆರೋಪ ಪ್ರತ್ಯಾರೋಪದ ನಡುವೆ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಐವರು ನಾಗರೀಕರು ಮೃತಪಟ್ಟಿದ್ದಾರೆ. 

ಉಕ್ರೇನ್ ಮೇಲೆ(Russia Ukraine war) ದಾಳಿ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ವಿಡಿಯೋ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕ್ರಿಮಿಯಾ(Cremia Bridge) ಸೇತುವೆ ಸ್ಫೋಟವನ್ನು ರಷ್ಯಾ ಸಹಿಸುವುದಿಲ್ಲ. ದೇಶದೊಳಗೆ ಭಯೋತ್ಪಾದನೆ ಚಟುವಟಿಕೆ, ಅದಕ್ಕೆ ಕುಮ್ಮಕ್ಕು ನೀಡುವ ಉಕ್ರೇನ್ ನಡೆಯನ್ನು ರಷ್ಯಾ ಖಂಡಿಸುತ್ತದೆ. ದೇಶದೊಳಗೆ ಇಂತಹ ಸ್ಫೋಟಕ್ಕೆ ಯತ್ನ ನಡೆಸಿದರೆ ಪರಿಣಾಮ ಇನ್ನುಷ್ಟು ಕೆಟ್ಟದಾಗಿರುತ್ತದೆ ಎಂದು ವ್ಲಾದಿಮಿರ್ ಎಚ್ಚರಿಸಿದ್ದಾರೆ. ಕ್ರಿಮಿಯಾ ಸೇತುವೆ ದಾಳಿ ಹಿಂದೆ ಉಕ್ರೇನ್ ವಿಷೇಷ ಪಡೆಯ ಕೈವಾಡವಿದೆ ಎಂದು ಪುಟಿನ್ ಆರೋಪಿಸಿದ್ದಾರೆ.

Russia Ukraine War 227ನೇ ದಿನಕ್ಕೆ ಕಾಲಿಟ್ಟ ಯುದ್ಧ, ಇನ್ನೂ ತಣ್ಣಗಾಗದ ಕಿಚ್ಚು!

 ಝಪೋರಿಝ್ಝಿಯಾ ಮೇಲಿನ ದಾಳಿಯಲ್ಲಿ 17 ಸಾವು
 ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆಯನ್ನು ಉಕ್ರೇನ್‌ ಸ್ಫೋಟಿಸಿದ್ದಕ್ಕೆ ಪ್ರತಿಯಾಗಿ ರಷ್ಯಾ ನಡೆಸಿದ ಬಾಂಬ್‌ ದಾಳಿಯಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದ ಬಾಂಬ್‌ಗಳು ಝಪೋರಿಝ್ಝಿಯಾದಲ್ಲಿರುವ ಅಪಾರ್ಚ್‌ಮೆಂಟ್‌ ಕಟ್ಟಡಗಳು ಸೇರಿದಂತೆ ಹಲವೆಡೆ ಅಪ್ಪಳಿಸಿವೆ. ಈ ದುರ್ಘಟನೆಯಲ್ಲಿ 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ಬಾಂಬ್‌ ಸ್ಫೋಟದಿಂದ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಒಂದು ಕಟ್ಟಡ ಕುಸಿದು ಬಿದ್ದಿದೆ. ರಷ್ಯಾ ಬಾಂಬ್‌ ದಾಳಿ ನಡೆಸಿದ ಪ್ರದೇಶವನ್ನು ಉಭಯ ದೇಶಗಳು ತಮಗೆ ಸೇರಿದ್ದು ಎಂದು ಹೇಳಿಕೊಂಡಿವೆ. ರಷ್ಯಾ ರಾತ್ರಿಯಿಡೀ ನಡೆಸಿದ ರಾಕೆಟ್‌ ದಾಳಿಯಲ್ಲಿ 20 ಖಾಸಗಿ ಮನೆಗಳು ಮತ್ತು 50 ಅಪಾರ್ಚ್‌ಮೆಂಟ್‌ನ ಕಟ್ಟಡಗಳು ನಾಶಗೊಂಡಿವೆ. 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ. ಈ ದಾಳಿಯನ್ನು ಉಕ್ರೇನ್‌ ಸೇನೆ ದೃಢಪಡಿಸಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಅಣ್ವಸ್ತ್ರ ಪ್ರಯೋಗದ ಬಗ್ಗೆ ಪುಟಿನ್‌ ಜೋಕ್‌ ಮಾಡುತ್ತಿಲ್ಲ; ಅಮೆರಿಕಾ ಅಧ್ಯಕ್ಷ ಜೋ ಬೈಡನ್‌

ಶನಿವಾರ ರಷ್ಯಾ ಹಾಗೂ ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್‌ ಬಾಂಬ್‌ ಸ್ಫೋಟವಾಗಿದ್ದು, ಇದರಿಂದ ಸೇತುವೆ ಭಾಗಶಃ ಕುಸಿದಿತ್ತು. ಈ ಸೇತುವೆ ಉಕ್ರೇನ್‌ ಯುದ್ಧದಲ್ಲಿ ರಷ್ಯಾದ ಶಸ್ತ್ರಾಸ್ತ್ರ ಪೂರೈಕೆಯ ಪ್ರಮುಖ ಕೊಂಡಿ ಆಗಿತ್ತು. ಹೀಗಾಗಿ ರಷ್ಯಾ ಉಕ್ರೇನ್‌ ಮೇಲೆ ಕೋಪಗೊಂಡಿದೆ.