ಉಕ್ರೇನ್‌ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರೆಸಿದ್ದು ಬುಧವಾರ ಹೆರಿಗೆ ಆಸ್ಪತ್ರೆ ಸೇರಿ ವಿವಿಧ ಮೂಲಸೌಕರ್ಯ ವ್ಯವಸ್ಥೆಗಳನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಕ್ಷಿಣ ಉಕ್ರೇನ್‌ನ ಹೆರಿಗೆ ಆಸ್ಪತ್ರೆಯಲ್ಲಿ 2 ದಿನದ ನವಜಾತ ಶಿಶು ಸಾವನ್ನಪ್ಪಿದೆ.

ಕೀವ್‌: ಉಕ್ರೇನ್‌ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರೆಸಿದ್ದು ಬುಧವಾರ ಹೆರಿಗೆ ಆಸ್ಪತ್ರೆ ಸೇರಿ ವಿವಿಧ ಮೂಲಸೌಕರ್ಯ ವ್ಯವಸ್ಥೆಗಳನ್ನು ಧ್ವಂಸಗೊಳಿಸಿದೆ. ಇದರಲ್ಲಿ ದಕ್ಷಿಣ ಉಕ್ರೇನ್‌ನ ಹೆರಿಗೆ ಆಸ್ಪತ್ರೆಯಲ್ಲಿ 2 ದಿನದ ನವಜಾತ ಶಿಶು ಸಾವನ್ನಪ್ಪಿದೆ. ಇನ್ನುಳಿದಂತೆ ಕೀವ್‌ ಮೇಲಿನ ವಿದ್ಯುತ್‌ ಗ್ರಿಡ್‌ ಮೇಲೆ ದಾಳಿ ನಡೆಸಿದ್ದು, ಕಟ್ಟಡಗಳು ಧರೆಗೆ ಉರುಳಿ ಮೂವರು ಸಾವನ್ನಪ್ಪಿದ್ದಾರೆ. ಕೀವ್‌ನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ದಕ್ಷಿಣ ಉಕ್ರೇನ್‌ನ ವಿಲ್‌ನಿಯಾನ್ಸ್‌ ಪ್ರದೇಶದಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ರಷ್ಯಾ ಕ್ಷಿಪಣಿ ಮಳೆಗರೆಯಿತು. ದಾಳಿ ನಡೆದ ಸಮಯದಲ್ಲಿ ವೈದ್ಯರೊಂದಿಗೆ ತಾಯಿ ಮತ್ತು 2 ದಿನದ ನವಜಾತ ಶಿಶು ಇದ್ದರು. ಈ ದಾಳಿಗೆ ಎರಡು ಅಂತಸ್ತಿನ ಆಸ್ಪತ್ರೆ ಕಟ್ಟಡ ಕುಸಿದು ಬಿದ್ದಿದೆ. ಶಿಶು ಸಾವನ್ನಪ್ಪಿದೆ. ವೈದ್ಯ ಮತ್ತು ತಾಯಿಯನ್ನು ಆಸ್ಪತ್ರೆಯ ಅವಶೇಷಗಳ ಅಡಿಯಿಂದ ಹೊರತೆಗೆದು ರಕ್ಷಿಸಲಾಗಿದೆ. 


ಮನುಷ್ಯರನ್ನೇ ಕರಗಿಸುವ 'ಪೂರ್‌ ಮ್ಯಾನ್‌ ನ್ಯೂಕ್‌' ಬಾಂಬ್‌ ಅನ್ನು ಉಕ್ರೇನ್‌ನತ್ತ ಉಡಾಯಿಸಿದ ರಷ್ಯಾ?

Ukraine ವಿದ್ಯುತ್‌ ಗ್ರಿಡ್‌ಗಳ ಮೇಲೆ ರಷ್ಯಾ ದಾಳಿ: ಕೀವ್‌, ಖಾರ್ಕೀವ್‌ನಲ್ಲಿ ಕಾರ್ಗತ್ತಲು

ಉಕ್ರೇನ್‌ ಶಾಲೆ ಮೇಲೆ ರಷ್ಯಾ ದಾಳಿಗೆ 60 ಬಲಿ!