ವಾಷಿಂಗ್ಟನ್(ಆ.16): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಾಬರ್ಟ್‌ ಟ್ರಂಪ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 71 ವರ್ಷದ ರಾಬರ್ಟ್‌ ಅವರಿಗೆ ನ್ಯೂಯಾರ್ಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ರಾಬರ್ಟ್‌ರವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರವಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸ್ಪತ್ರೆಗೆ ಭೇಟಿ ನೀಡಿ ತಮ್ಮನ ಆರೋಗ್ಯ ವಿಚಾರಿಸಿದ್ದರು.

ಇನ್ನು ತಮ್ಮನ ನಿಧನದ ಬೆನ್ನಲ್ಲೇ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್ ನನ್ನ ಸಹೋದರ ರಾಬರ್ಟ್ ಕುರಿತ ಈ ಸುದ್ದಿಯನ್ನು ಹೇಳಲು ಹೃದಯ ಅತ್ಯಂತ ಭಾರ ಎನಿಸುತ್ತಿದೆ. ಕಳೆದ ರಾತ್ರಿ ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಸಹೋದರ ಶಾಂತಿಯುತವಾಗಿ ಚಿರನಿದ್ರೆಗೆ ಜಾರಿದ್ದಾರೆ. ರಾಬರ್ಟ್ ನನ್ನ ಸಹೋದರ ಮಾತ್ರನಲ್ಲ, ಅತ್ಯುತ್ತಮ ಸ್ನೇಹಿತನಾಗಿದ್ದ. ಆತನ ಅಗಲಿಕೆ ಬಹಳ ನೋವು ತಂದಿದೆ. ಮತ್ತೆ ಆತನನ್ನು ಭೇಟಿಯಾಗುತ್ತೇನೆ. ಆತನ ನೆನಪು ಸದಾಕಾಲ ನನ್ನೊಂದಿಗಿರುತ್ತದೆ. ರಾಬರ್ಟ್ ಐ ಲವ್ ಯು. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದಿದ್ದಾರೆ.