ಬ್ರಿಟನ್ ಪ್ರಧಾನಿ ರೇಸ್: 5ನೇ ಸುತ್ತಲ್ಲೂ ರಿಷಿ ಸುನಕ್ಗೆ ಮುನ್ನಡೆ: ಗೆಲುವಿಗೆ ಇನ್ನೊಂದೇ ಹೆಜ್ಜೆ
United Kingdom Prime Minister Election: ಬ್ರಿಟನ್‌ನ ನೂತನ ಪ್ರಧಾನಿ ಆಯ್ಕೆ ಮಾಡಲು ನಡೆಯುತ್ತಿರುವ ಚುನಾವಣೆಯ ಐದನೇ ಸುತ್ತಿನಲ್ಲೂ ರಿಷಿ ಸುನಾಕ್ ಮುನ್ನಡೆ ಸಾಧಿಸಿದ್ದಾರೆ
ಲಂಡನ್ (ಜು. 20): ಬ್ರಿಟನ್‌ನ ನೂತನ ಪ್ರಧಾನಿ ಆಯ್ಕೆ ಮಾಡಲು ಸ್ಥಳೀಯ ಟೋರಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಚುನಾವಣೆಯ ಐದನೇ ಸುತ್ತಿನಲ್ಲೂ, ಭಾರತೀಯ ಮೂಲದ ರಿಷಿ ಸುನಾಕ್ (Rishi Sunak) ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ರಿಷಿ ಸುನಾಕ್ ನಾಯಕತ್ವದ ಚುನಾವಣೆ ಅಂತಿಮ ಹಂತಕ್ಕೆ ತಲುಪಿದ್ದಾರೆ. ಕೊನೆಯ ಹಂತದಲ್ಲಿ ಲಿಜ್ ಟ್ರಸ್ (Liz Truss) ಅವರೊಂದಿಗೆ ರಿಷಿ ಸುನಾಕ್ ಸ್ಪರ್ಧಿಸಲಿದ್ದಾರೆ. ಮೂವರು ಸ್ಪರ್ಧಿಗಳನ್ನು ಒಳಗೊಂಡ 5 ನೇ ಸುತ್ತಿನ ಮತದಾನದಲ್ಲಿ, ಸುನಕ್ 137 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಲಿಜ್ ಟ್ರಸ್ 113 ಮತಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಬುಧವಾರದ ಸ್ಪರ್ಧೆಯಲ್ಲಿ ಅತ್ಯಂತ ಕಡಿಮೆ ಮತಗಳನ್ನು (105) ಪಡೆದ ಪೆನ್ನಿ ಮೊರ್ಡಾಂಟ್ ಚುನಾವಣಾ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.
ಇನ್ನು ಭಾರತೀಯ ಮೂಲದ ರಿಷಿ ಸುನಾಕ್ ತಮ್ಮ ಇದುವರೆಗಿನ ಪ್ರತಿ ಸುತ್ತಿನ ಮತದಾನದಲ್ಲಿ ಉತ್ತಮ ಅಂತರದಿಂದ ಅಗ್ರಸ್ಥಾನದಲ್ಲಿದ್ದಾರೆ.
ಅಂತಿಮವಾಗಿ ಉಳಿದ ಇಬ್ಬರನ್ನು ಟೋರಿ ಪಕ್ಷದ ನೊಂದಾಯಿತ 1.60 ಲಕ್ಷ ಮತದಾರರು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಲಿದ್ದಾರೆ. ಹೀಗೆ ಆಯ್ಕೆಯಾದವರು, ಟೋರಿ ಪಕ್ಷದ ನೂತನ ನಾಯಕರಾಗಿ ಮತ್ತು ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ
ಇದನ್ನೂ ಓದಿ: ಯಾರಿಗೆ ಬೇಕಾದ್ರೂ ಮತ ಕೊಡಿ, ರಿಷಿಗೆ ಕೊಡ್ಬೇಡಿ: ಇನ್ಫಿ ಮೂರ್ತಿ ಅಳಿಯನ ವಿರುದ್ಧ ಬೋರಿಸ್ ಜಾನ್ಸನ್ ಗರಂ!
ಹೀಗಾಗಿ ಸುನಕ್ ಮತ್ತು ಟ್ರಸ್ ಮುಂದಿನ ಕೆಲವು ವಾರಗಳ ಕಾಲ ದೇಶಾದ್ಯಂತ ಸುಮಾರು 180,000 ಕನ್ಸರ್ವೇಟಿವ್ ಪಕ್ಷದ (Conservative Party) ಸದಸ್ಯರ ಮತಗಳಿಗಾಗಿ ಪ್ರಚಾರ ಮಾಡಲಿದ್ದಾರೆ. ಈ ಸದಸ್ಯರು ಅಂಚೆ ಅಥವಾ ಆನ್‌ಲೈನ್ ಮತಪತ್ರದ ಮೂಲಕ ಮತ ಚಲಾಯಿಸುತ್ತಾರೆ. ಪಕ್ಷದ ನಾಯಕತ್ವದ ಮತದ ವಿಜೇತರನ್ನು ಸೆಪ್ಟೆಂಬರ್ 5 ರಂದು ಘೋಷಿಸಲಾಗುತ್ತದೆ ಮತ್ತು ವಿಜೇತರು ಸ್ವಯಂಚಾಲಿತವಾಗಿ ಪ್ರಧಾನಿಯಾಗುತ್ತಾರೆ.