Asianet Suvarna News Asianet Suvarna News

UK New PM Rishi Sunak: ಭಾರತೀಯ ಸಂಸ್ಕೃತಿಯಂತೆ ಕೈಗೆ ದಾರ ಕಟ್ಟಿಕೊಂಡ ರಿಷಿ

UK Prime Minister Rishi Sunak: ರಿಷಿ ಸುನಕ್‌ ಅವರು ಭಾರತದವರು, ಅವರ ಪತ್ನಿ ಖ್ಯಾತ ಉದ್ಯಮಿ ಇನ್ಫೊಸಿಸ್‌ ನಾರಾಯಣ ಮೂರ್ತಿ ಅವರ ಮಗಳು ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ಮತ್ತೆ ಪವಿತ್ರ ದಾರ ಕೈಗೆ ಕಟ್ಟಿಕೊಳ್ಳುವ ಮೂಲಕ, ಭಾರತೀಯ ಸಂಸ್ಕೃತಿಯನ್ನು ಇಂದಿಗೂ ಪಾಲಿಸುತ್ತಿರುವುದನ್ನು ರಿಷಿ ಸುನಕ್‌ ಸಾಬೀತು ಪಡಿಸಿದ್ದಾರೆ. 

Rishi Sunak ties holy thread to his hand before his first speech as uk prime minister
Author
First Published Oct 25, 2022, 7:31 PM IST

ನವದೆಹಲಿ: ಇಂಗ್ಲೆಂಡಿನ ಪ್ರಧಾನಿಯಾಗಿ ಆಯ್ಕೆಯಾದ ಭಾರತ ಮೂಲದ ರಿಷಿ ಸುನಕ್‌ ಕೈಗೆ ಮಂತ್ರಿಸಿದ ದಾರ ಕಟ್ಟಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮೆರೆದಿದ್ದಾರೆ. 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಪ್ರಧಾನಿಯಾದ ನಂತರ ಮೊದಲ ಭಾಷಣ ಮಾಡುವ ಮುಂಚೆ ರಿಷಿ ಸುನಕ್‌ ಹೆಂಡತಿ ಅಕ್ಷತಾ ಮೂರ್ತಿ ಸಮ್ಮುಖದಲ್ಲಿ ದಾರ ಕಟ್ಟಿಕೊಂಡರು. ಇಂಗ್ಲೆಂಡಿನ ಪ್ರಧಾನಿಯಾದರೂ ಭಾರತೀಯ ಹಿಂದೂ ಸಂಸ್ಕೃತಿಯನ್ನು ರಿಷಿ ಸುನಕ್‌ ಪಾಲಿಸುತ್ತಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಾಯಿತು. ಈ ಪವಿತ್ರ ದಾರ ಧರಿಸಿದರೆ ಸೋಲೇ ಇಲ್ಲ ಎಂಬ ನಂಬಿಕೆಯಿದೆ. ಶತ್ರು ಸಂಹಾರಕ್ಕೆ, ಆತ್ಮ ರಕ್ಷಣೆಗೆ ಈ ಪವಿತ್ರ ದಾರ ರಕ್ಷಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ ಎಂಬ ವಾಡಿಕೆ ಹಿಂದೂ ಸಂಪ್ರದಾಯದಲ್ಲಿದೆ. 

ರಿಷಿ ಸುನಕ್‌ ಇಂದು ಇಂಗ್ಲೆಂಡಿನ ಪ್ರಧಾನಿಯಾಗುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದರು. ರಿಷಿ ಸುನಕ್‌ ಭಾರತ ಮೂಲದ ಮೊದಲ ಬ್ರಿಟನ್‌ ಪ್ರಧಾನಿ. ಜೊತೆಗೆ ಕಳೆದ ಇನ್ನೂರು ವರ್ಷಗಳ ಬ್ರಿಟನ್‌ ಇತಿಹಾಸದಲ್ಲಿ ಅತೀ ಕಡಿಮೆ ವಯಸ್ಸಿನ ಪ್ರಧಾನಿ ಕೂಡ ಹೌದು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ ಮಾತನಾಡಿದ ರಿಷಿ, ಆದ ತಪ್ಪುಗಳನ್ನು ಸರಿಪಡಿಸಲು ನನ್ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ, ನಾನು ದೇಶದ ಆರ್ಥಿಕತೆ, ಜನರ ಜೀವನ ಎಲ್ಲವನ್ನೂ ಮತ್ತೆ ಸರಿ ಹಂತಕ್ಕೆ ತರುವ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಪ್ರಧಾನಿಯಾಗಿ ಪ್ರಮಾಣ:

ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಇಂಗ್ಲೆಂಡ್ ರಾಜ ಮೂರನೇ ಚಾರ್ಲ್ಸ್ ಭೇಟಿಯಾದ ಬೆನ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬ್ರಿಟನ್ ಪ್ರಧಾನಿಯಾಗಿ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ಈ ಕ್ಷಣದಿಂದಲೇ ನನ್ನ ಅಧಿಕಾರವದಿ ಆರಂಭಗೊಂಡಿದೆ. ಬ್ರಿಟನ್ ಎದುರಿಸುತ್ತಿರುವ ಸಂಕಷ್ಟಕ್ಕೆ ಸೂಕ್ತ ಪರಿಹಾರ ಒದಿಗಿಸುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಬ್ರಿಟನ್ ಎದುರಿಸುತ್ತಿರುವ ಅಸ್ಥಿರತೆ ದೂರ ಮಾಡಿ ಸ್ಥಿರತ ತರುತ್ತೇನೆ. ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳು ಜಾರಿಯಾಗಲಿದೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ರಿಷಿ ಸುನಕ್ ಪ್ರಧಾನಿಯಾಗಿ ಪದಗ್ರಹಣ ಮಾಡಲು ಇಂಗ್ಲೆಂಡ್ ರಾಜ ಚಾರ್ಲ್ಸ್ ಭೇಟಿಯಾಗಿ ಅನುಮತಿ ಕೋರಿದರು. ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ರಾಜ ಚಾರ್ಲ್ಸ್ ಭೇಟಿಯಾದ ಸುನಕ್ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಬ್ರಿಟನ್ ರಾಣಿ ಕ್ಯಾಮಿಲ್ಲಾ ಸದ್ಯ ಬೆಂಗಳೂರಿನಲ್ಲಿದ್ದಾರೆ. ಪ್ರಕೃತಿ ಚಿಕಿತ್ಸೆಗಾಗಿ ನಿನ್ನೆ ಬೆಂಗಳೂರಿಗೆ ಆಗಮಿಸಿರುವ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ ಸದ್ಯ ವೈಟ್‌ಫೀಲ್ಡ್‌ನಲ್ಲಿರುವ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ದಿನಗಳ ಕಾಲ ಬೆಂಗಳೂರಿನಲ್ಲಿ ತಂಗಲಿದ್ದಾರೆ. ಆದರೆ ಯಾವುದೇ ಕಾರ್ಯಕ್ರಮಗಳಲ್ಲಿ ಕ್ಯಾಮಿಲ್ಲಾ ಭಾಗಿಯಾವುದಿಲ್ಲ. ಇದು ಖಾಸಗಿ ಬೇಟಿಯಾಗಿದೆ ಎಂದು ಇಂಗ್ಲೆಂಡ್ ರಾಜಮನೆತನದ ಮೂಲಗಳು ಹೇಳಿವೆ. ಹೀಗಾಗಿ ರಿಷಿ ಸುನಕ್ ಅರಮನೆಯಲ್ಲಿ ರಾಜ ಚಾರ್ಲ್ಸ್ ಭೇಟಿಯಾದರು.

ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಜೊತೆ ಟ್ರೆಂಡ್ ಆದ ಕ್ರಿಕೆಟಿಗ ಆಶಿಶ್ ನೆಹ್ರಾ!

ಚಾರ್ಲ್ಸ್ ಭೇಟಿ ಬಳಿಕ ರಿಷಿ ಸುನಕ್ ದೇಶವನ್ನುದ್ದೇಶಿ ಮಾತನಾಡಿದರು. ಕುಸಿದಿರುವ ಬ್ರಿಟನ್ ಆರ್ಥಿಕತೆಯನ್ನು ಮೇಲೆಕ್ಕೆತ್ತುವುದು ನನ್ನ ಮೊದಲ ಆದ್ಯತೆಯಾಗಿದೆ. ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ದೇಶ ಹಾಗೂ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತೇನೆ. ಬ್ರಿಟನ್ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಮತ್ತೆ ಗತವೈಭವನ್ನು ಮರುಕಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ದೇಶಕ್ಕಾಗಿ ಹಗಲು ರಾತ್ರಿ ದುಡಿಯುತ್ತೇನೆ. ಕೇವಲ ಮಾತಿನಲ್ಲಿ ಮಾತ್ರವಲ್ಲ, ಕೆಲಸ ಮಾಡಿ ತೋರಿಸುತ್ತೇನೆ. ಬ್ರಿಟನ್ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಬ್ರಿಟನ್‌ ರಾಜ ಚಾರ್ಲ್ಸ್‌ಗಿಂತ Rishi Sunak ಹಾಗೂ ಪತ್ನಿ ಅಕ್ಷತಾ 2 ಪಟ್ಟು ಹೆಚ್ಚು ಶ್ರೀಮಂತರು..!

ದೇಶದ ಋುಣವನ್ನು ತೀರಿಸಲು ನನಗೆ ಸಿಕ್ಕ ಈ ಅತಿದೊಡ್ಡ ಅವಕಾಶವನ್ನು ವಿನಮ್ರತೆ ಹಾಗೂ ಗೌರವದಿಂದ ಸ್ವೀಕರಿಸುತ್ತೇನೆ. ಬ್ರಿಟನ್ನಿನ ಜನರಿಗಾಗಿ ನಾನು ಹಗಲು-ರಾತ್ರಿ ಸಮಗ್ರತೆ ಹಾಗೂ ವಿನಮ್ರತೆಯಿಂದ ಸೇವೆ ಸಲ್ಲಿಸಲು ಪಣ ತೊಡುತ್ತೇನೆ’ ಎಂದು ಘೋಷಿಸಿದ್ದಾರೆ. ‘ಬ್ರಿಟನ್‌ ಒಂದು ಅತ್ಯುತ್ತಮ ದೇಶವಾಗಿದೆ. ಆದರೆ ನಾವು ಗಂಭೀರವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೀಗ ಸ್ಥಿರತೆ ಹಾಗೂ ಏಕತೆಯ ಅಗತ್ಯವಿದೆ. ಹೀಗಾಗಿ ಇದನ್ನೇ ನಾನು ನನ್ನ ಆದ್ಯತೆಯನ್ನಾಗಿಸಿ ಪಕ್ಷವನ್ನು ಹಾಗೂ ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇನೆ. ದೇಶ ಎದುರಿಸುತ್ತಿದ್ದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಹಾಗೂ ನಮ್ಮ ಮುಂದಿನ ಪೀಳಿಗೆಯ ಸಮೃದ್ಧ ಭವಿಷ್ಯಕ್ಕಾಗಿ ಇದು ಅನಿವಾರ್ಯವಾಗಿದೆ’ ಎಂದಿದ್ದಾರೆ.

Follow Us:
Download App:
  • android
  • ios