ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಜೊತೆ ಟ್ರೆಂಡ್ ಆದ ಕ್ರಿಕೆಟಿಗ ಆಶಿಶ್ ನೆಹ್ರಾ!
ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದರ ನಡುವೆ ಪ್ರತಿ ಸಂದರ್ಭವನ್ನು ಮೀಮ್ಸ ಮಾಡುವ ಪರಿಪಾಠವೂ ನಡೆದಿದೆ. ಆದರೆ ಈ ಬಾರಿ ಮೀಮ್ಸ್ ಕೆಲ ಅಚ್ಚರಿಗೂ ಕಾರಣವಾಗಿದೆ. ಯಾಕೆಂದರೆ ರಿಶಿ ಸುನಕ್ ಜೊತೆ ಆಶಿಶ್ ನೆಹ್ರಾ ಕೂಡ ಟ್ರೆಂಡ್ ಆಗಿದ್ದಾರೆ.
ನವದೆಹಲಿ(ಅ.24): ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾದ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಇದೀಗ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಕನ್ಸವರ್ವೇಟೀವ್ ಪಕ್ಷದ ನಾಯಕ ರಿಷಿ ಸುನಕ್ ಆಯ್ಕೆಗೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ರಿಷಿ ಸುನಕ್ ಆಯ್ಕೆಯನ್ನು ಸಂಭ್ರಮಿಸುತ್ತಿದ್ದಾರೆ. ಇದೇ ವೇಳೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ನಡುವೆ ರಿಷಿ ಸುನಕ್ ಜೊತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಕೂಡ ಟ್ರೆಂಡ್ ಆಗಿದ್ದಾರೆ. ಇದೀಗ ರಿಷಿ ಸುನಕ್ ಜೊತೆ ಆಶಿಶ್ ನೆಹ್ರಾರನ್ನು ಮೀಮ್ಸ್ ಮಾಡಿದ್ದಾರೆ. ಇದಕ್ಕೆ ಕಾರಣ ಇವರಿಬ್ಬರು ಮುಖ ಛಾಯೆಗೆ ಹೋಲಿಕೆ ಇದೆ ಎಂದಿದ್ದಾರೆ. ಈ ಕುರಿತು ಹಲವು ಮೀಮ್ಸ್ ಹರಿದಾಡುತ್ತಿದೆ. ಒಂದನ್ನೊಂದು ಮೀರಿಸುವಂತ ಮೀಮ್ಸ್ ವಿವರ ಇಲ್ಲಿ ನೀಡಲಾಗಿದೆ.
ರಿಷಿ ಸುನಕ್ ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾತ್ಮಕ ಮೀಮ್ಸ್ ಹರಿದಾಡಲು ಆರಂಭಿಸಿದೆ. ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಅಣ್ಣ ತಮ್ಮಂದಿರು. ಇವರಿಬ್ಬರಿಗೂ ಹೋಲಿಕೆ ಇದೆ ಎಂದು ಮೀಮ್ಸ್ ಮಾಡಿದ್ದಾರೆ. ರಿಷಿ ಸುನಕ್ ವಯಸ್ಸು 42. ಆಶಿಶ್ ನೆಹ್ರಾ ವಯಸ್ಸು 43. ಇವರಿಬ್ಬರಿಗೂ ತುಂಬಾ ಹೋಲಿಕೆ. ಇಬ್ಬರ ನಗು, ಮುಖ ಛಾಯೆ ಒಂದೇ ರೀತಿ ಇದೆ ಎಂದು ಮೀಮ್ಸ್ ಮಾಡಿದ್ದಾರೆ.
ಸುನಕ್ ಆಯ್ಕೆ ಬೆನ್ನಲ್ಲೇ ಆನಂದ್ ಮಹೀಂದ್ರ ಟ್ವೀಟ್, ಚರ್ಚಿಲ್ ಮಾತು ನೆನೆಪಿಸಿ ಬ್ರಿಟಿಷರಿಗೆ ಕಪಾಳಮೋಕ್ಷ!
ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಫೋಟೋಗಳನ್ನು ಮೀಮ್ಸ್ ಮಾಡಿದ್ದಾರೆ. ಇಷ್ಟಕ್ಕೆ ನಿಂತಿಲ್ಲ. ಇನ್ನೂ ಕೆಲವರು ಕುಂಭ ಮೇಳದಲ್ಲಿ ಅಣ್ಣ ತಮ್ಮಂದಿರು ಬೇರ್ಪಟ್ಟಿದ್ದಾರೆ. ಅಣ್ಣ ಟೀಂ ಇಂಡಿಯಾ ಕ್ರಿಕೆಟಿಗ ಆಶಿಶ್ ನೆಹ್ರಾ, ತಮ್ಮ ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಎಂದಿದ್ದಾರೆ. ವಿರಾಟ್ ಕೊಹ್ಲಿ ಜೊತೆ ರಿಷಿ ಸುನಕ್ ಎಂದು ಕೆಲವರು ಫೋಟೋ ಹಾಕಿ ಮೀಮ್ಸ್ ಮಾಡಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿರುವ ಆಶಿಶ್ ನೆಹ್ರಾಗೆ ಅಭಿನಂದನೆಗಳು, ಕೊಹಿನೂರ್ ವಜ್ರ ತರುವುದು ಹೇಗೆ ಎಂದು ಯೋಚಿಸಿ ಎಂದಿದ್ದಾರೆ. ಮತ್ತೆ ಕೆಲವರು ರಿಷಿ ಸುನಕ್‌ಗೆ ಭಾರತ ಭೇಟಿಗೆ ಆಹ್ವಾನ ನೀಡಿ, ಭಾರತಕ್ಕೆ ಬಂದಾಗ, ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿಸಿ. ಬಳಿಕ ಆಶಿಶ್ ನೆಹ್ರಾರನ್ನು ಸುನಕ್ ಎಂದು ಬ್ರಿಟನ್‌ಗೆ ಕಳುಹಿಸಿ. ಕೊಹಿನೂರ್ ವಜ್ರ ಭಾರತಕ್ಕೆ ಮರಳಿಸುವ ಬಿಲ್‌ಗೆ ಸಹಿ ಹಾಕಿದರೆ ಸುಲಭವಾಗಿ ಅಮೂಲ್ಯ ರತ್ನ ಭಾರತದ ಪಾಲಾಗಲಿದೆ ಎಂದು ಕೆಲವರು ಐಡಿಯಾ ನೀಡಿದ್ದಾರೆ.
ಬ್ರಿಟನ್‌ನಲ್ಲಿ ಅಸ್ಥಿರತೆ
ಕಳೆದ 6 ವರ್ಷದಲ್ಲಿ ಬ್ರಿಟನ್ ಹಲವು ಅಸ್ಥಿರತೆ ಕಾಣುತ್ತಿದೆ. ಕಳೆದ 6 ವರ್ಷದಲ್ಲಿ ಬ್ರಿಟನ್ 5 ಪ್ರಧಾನಿಗಳನ್ನು ಕಂಡಿದೆ. ಸುನಕ್ 5ನೇ ಪ್ರಧಾನಿಯಾಗಿದ್ದಾರೆ. ಭಾರತದಂತೆ ಸಂಸದೀಯ ಮಾದರಿ ಹೊಂದಿರುವ ಬ್ರಿಟನ್‌ನಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಕಳೆದ ಚುನಾವಣೆ ಡಿ.12, 2019ರಂದು ನಡೆದಿತ್ತು. ಮುಂದಿನ ಚುನಾವಣೆ ಜನವರಿ 2025ರಲ್ಲಿ ನಡೆಯಲಿದೆ. 2019ರಲ್ಲಿ ಕನ್ಸರ್ವೇಟಿವ್ ಪಕ್ಷವು 80 ಸೀಟುಗಳನ್ನು ಗೆದ್ದು ಬಹುಮತ ಪಡೆದು ಸರ್ಕಾರ ಸ್ಥಾಪಿಸಿತು. ಸರ್ಕಾರಕ್ಕೆ ಇನ್ನೂ ಮೂರು ವರ್ಷ ಅಧಿಕಾರಾವಧಿ ಇದೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಅಸ್ಥಿರತೆ ಕಂಡು ವಿಪಕ್ಷ ಲೇಬರ್ ಪಾರ್ಟಿ ಅವಧಿಪೂರ್ವ ಚುನಾವಣೆ ಘೋಷಿಸಲು ಕರೆ ನೀಡಿದೆ.