Asianet Suvarna News Asianet Suvarna News

ಬ್ರಿಟನ್‌ ಚುನಾವಣೆಯಲ್ಲಿ ರಿಷಿ ಸುನಕ್‌ ಪಕ್ಷಕ್ಕೆ ಸೋಲು: ಸಮೀಕ್ಷೆ

ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ಸೋಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ಹೇಳಿದೆ. 

Rishi Sunak party set for heavy UK election defeat to opposition Labour Survey gvd
Author
First Published Apr 5, 2024, 7:03 AM IST

ಲಂಡನ್ (ಏ.05): ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಬ್ರಿಟನ್‌ ಸಂಸತ್‌ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ಸೋಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಮಾರ್ಚ್ 7 ಮತ್ತು 27 ರಂದು 18,761 ಬ್ರಿಟಿಷ್ ವಯಸ್ಕರನ್ನು ಯು-ಗವ್ ಎಂಬ ಸಂಸ್ಥೆ ಸಂದರ್ಶಿಸಿ ಈ ಸಮೀಕ್ಷೆ ನಡೆಸಿದೆ. ಬ್ರಿಟನ್‌ನಲ್ಲಿ ಸಂಸತ್ತಿನಲ್ಲಿ ಬಹುಮತಕ್ಕೆ ಪಕ್ಷವು ಒಟ್ಟು 650 ಸ್ಥಾನಗಳ ಪೈಕಿ 326 ಸ್ಥಾನ ಪಡೆದುಕೊಳ್ಳಬೇಕು. 

ಆದರೆ ಲೇಬರ್ ಪಕ್ಷ ರಾಷ್ಟ್ರವ್ಯಾಪಿ 403 ಸ್ಥಾನ ಪಡೆವ ಸಾಧ್ಯತೆ ಇದೆ. ಕನ್ಸರ್ವೇಟಿವ್‌ ಕೇವಲ 155 ಸ್ಥಾನ ಗೆಲ್ಲಬಹುದು ಎಂದಿದೆ.ಈ ಹಣದುಬ್ಬರವನ್ನು ಅರ್ಧಕ್ಕೆ ಇಳಿಸುವುದು, ರಾಷ್ಟ್ರೀಯ ಸಾಲ ಕಡಿಮೆ ಮಾಡುವುದು, ರಾಷ್ಟ್ರೀಯ ಆರೋಗ್ಯ ಸೇವೆ, ಅಕ್ರಮ ವಲಸಿಗರನ್ನು ನಿಲ್ಲಿಸುವುದು, ಆರ್ಥಿಕತೆ ಉತ್ತಮಗೊಳಿಸುವುದು, ವಲಸೆ ವೆಚ್ಚಗಳಲ್ಲಿನ ಹೆಚ್ಚಳ ಮತ್ತು ಕಠಿಣ ನಿರಾಶ್ರಿತರ ಗಡೀಪಾರು ಕಾನೂನುಗಳಂತಹ ವಿವಿಧ ಕ್ರಮಗಳು ಯಶಸ್ವಿಯಾಗಲಿಲ್ಲ. ಆದ್ದರಿಂದ ಪ್ರಧಾನಿ ರಿಷಿ ಸುನಕ್ ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.

ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ: ಜಗತ್ತಿನ ಬಲಾಢ್ಯ ಆರ್ಥಿಕತೆಗಳಲ್ಲಿ ಒಂದಾಗಿರುವ ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿದೆ. 2023ರ ಕೊನೆಯ ಎರಡು ತ್ರೈಮಾಸಿಕದಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಕುಸಿದಿದ್ದು, ಹಣದುಬ್ಬರ ಹಾಗೂ ಜೀವನ ನಿರ್ವಹಣೆ ವೆಚ್ಚದ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವ ಭರವಸೆಯೊಂದಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಭಾರತೀಯ ಮೂಲದ ರಿಷಿ ಸುನಕ್‌ಗೆ ಇದು ಆಘಾತ ತಂದಿದೆ. ಅಲ್ಲದೆ, ಬ್ರಿಟನ್‌ನಲ್ಲಿ ಈ ವರ್ಷ ಸಂಸತ್ತಿಗೆ ಚುನಾವಣೆ ನಡೆಯಲಿದ್ದು, ಆರ್ಥಿಕ ಹಿಂಜರಿಕೆಯಿಂದ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕ ಉಂಟಾಗಿದೆ.

ಸಿಎಎ ಜಾರಿ ‘ಮೋದಿ ಗ್ಯಾರಂಟಿ’: ಪ್ರಧಾನಿ ನರೇಂದ್ರ ಮೋದಿ ಗುಡುಗು

2023ರ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಬ್ರಿಟನ್‌ನ ಜಿಡಿಪಿ ಕ್ರಮವಾಗಿ ಶೇ.0.1 ಹಾಗೂ ಶೇ.0.3ರಷ್ಟು ಕುಸಿದಿದೆ. ಸತತ ಎರಡು ಅವಧಿಗೆ ಜಿಡಿಪಿ ಕುಸಿದರೆ ಅದನ್ನು ಆರ್ಥಿಕ ಹಿಂಜರಿಕೆ ಎಂದು ಹೇಳಲಾಗುತ್ತದೆ. ದೇಶದಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿರುವುದನ್ನು ಸರ್ಕಾರದ ಅಂಕಿಅಂಶ ಇಲಾಖೆಯೇ ಪ್ರಕಟಿಸಿದೆ. ‘2023ರ ಕೊನೆಯ ಎರಡು ತ್ರೈಮಾಸಿಕದಲ್ಲಿ ಉತ್ಪಾದನೆ, ನಿರ್ಮಾಣ, ಸಗಟು ವ್ಯಾಪಾರ ಸೇರಿದಂತೆ ಆರ್ಥಿಕತೆಯ ಎಲ್ಲಾ ಪ್ರಮುಖ ವಿಭಾಗಗಳೂ ಕುಸಿದಿವೆ’ ಎಂದು ಅಂಕಿಅಂಶ ಇಲಾಖೆ ತಿಳಿಸಿದೆ. ಕೊರೋನಾ ಬಳಿಕ ಬ್ರಿಟನ್‌ನಲ್ಲಿ ಉಂಟಾದ ಮೊದಲ ಆರ್ಥಿಕ ಹಿಂಜರಿಕೆ ಇದಾಗಿದೆ. ಇದು ಲೇಬರ್‌ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷವನ್ನು ಎದುರಿಸಲು ದೊಡ್ಡ ರಾಜಕೀಯ ಅಸ್ತ್ರ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.

Follow Us:
Download App:
  • android
  • ios