ಲಂಡನ್(ಅ. 31) ಜೇಮ್ಸ್ ಬಾಂಡ್ ಖ್ಯಾತಿಯ ಸಿಯಾನ್ ಕ್ಯಾನರಿ (90) ನಿಧನರಾಗಿದ್ದಾರೆ. ಜೇಮ್ಸ್ ಬಾಂಡ್ ಸರಣಿಯಲ್ಲಿ ಕಾಣಿಸಿಕೊಂಡು ಇಡೀ ಪ್ರಪಂಚದ ಮನೆಮಾತಾಗಿದ್ದ ನಟ ಇನ್ನು ನೆನಪು ಮಾತ್ರ.

ಬ್ರಿಟಿಷ್ ಸಿಕ್ರೇಟ್ ಏಜೆಂಜ್ ಬಾಂಡ್ ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಆಡು ಮಾತಿನಲ್ಲೂ ಯಾರಾದರೂ ಪತ್ತೆದಾರಿ ಕೆಲಸ ಮಾಡುತ್ತಿದ್ದರೆ ನೀನೇನು ದೊಡ್ಡ ಜೇಮ್ಸ್ ಬಾಂಡ್! ಎಂಬ ಉದ್ಘಾರ ಹಳ್ಳಿಯಲ್ಲಿಯೂ ತೆಗೆಯುತ್ತಿದ್ದರು!

ಡಾ. ನಂ(1962) , ರಷ್ಯಾ ವಿತ್ ಲವ್(1963), ಗೋಲ್ಡ್ ಫಿಂಗರ್(1964), ಥಂಡರ್‌ಬಾಲ್ (1965), ಯು ಓನ್ಲಿ ಲೈವ್ ಟೈಸ್(1967)  ಸಿನಿಮಾಗಳು ಜಗತ್ತಿನ ಮೂಲೆ ಮೂಲೆ ತಲುಪಿದ್ದವು. ಇಂದಿಗೂ ಅಭಿಮಾನದ ಸರಣಿ ಹಾಗೆ ಇದೆ.

ಬಾಂಡ್ ಸಿನಿಮಾದಲ್ಲಿ ಬಳಸಿದ್ದ ಐದು ಬಂದೂಕು ಮಂಗಮಾಯ

ಡೈಮಂಡ್ಸ್  ಆರ್ ಫಾರ್ ಎವರ್,  (1971), ನೆವರ್ ಸೆ ನೆವರ್ ಅಗೇನ್ (1983) ಸಿನಿಮಾಗಳು ಬಾಕ್ಸಾಫೀಸ್ ಧೂಳೆಬ್ಬಿಸಿದ್ದವು. ಇವರನ್ನು ಹೆಸರಿನಿಂದ ಗುರುತಿಸುವುದಕ್ಕಿಂತ ಹೆಚ್ಚಾಗಿ ಜೇಮ್ಸ್ ಬಾಂಡ್  ಎಂದೆ ಕರೆಯಲಾಗುತ್ತಿತ್ತು. ಸಂಪೂರ್ಣವಾಗಿ ಬಾಂಡ್ ಆಗಿ ಆವರಿಸಿಕೊಂಡಿದ್ದರು.  ಅಮೆರಿಕನ್ ಫಿಲ್ಮ್ ಇನ್‌ ಸ್ಟಿಟ್ಯೂಟ್ ಇವರನ್ನು ಮೂರನೇ ಅತಿದೊಡ್ಡ ಸಿನಿಮಾ ನಾಯಕ ಎಂದು ಕರೆದಿದೆ.

ಆಸ್ಕರ್ ಮತ್ತು ಎರಡು ಸಾರಿ ಬಾಫ್ಟಾ ಪ್ರಶಸ್ತಿಗೂ ಬಾಂಡ್ ಪಾತ್ರವಾಗಿದ್ದಾರೆ. ಮೂರು ಸಾರಿ ಗೋಲ್ಡನ್ ಗ್ಲೋಬ್ ಇವರದ್ದಾಗಿದೆ.

ಎಡಿನ್‌ಬರ್ಗ್ ನ ಕೊಳಚೆ ಪ್ರದೇಶದಲ್ಲಿ(25 ಆಗಸ್ಟ್ 1930)  ಜನ್ಮತಾಳಿದ ಬಾಂಡ್ ಶಾಲೆಯನ್ನು ಅರ್ಧಕ್ಕೆ ಬಿಟ್ಟು ಕಾರ್ಮಿಕರಾಗಿ  ಕೆಲಸ ಮಾಡುತ್ತಿದ್ದರು.  ತಮ್ಮ ಹದಿನೇಳನೇ ವಯಸ್ಸಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ಆರೋಗ್ಯ ಕಾರಣದಿಂದ ಅಲ್ಲಿಂದ ಹೊರಬಂದರು. ಇದಾದ ಮೇಲೆ ಅನೇಕ ವೃತ್ತಿ ನಿರ್ವಹಿಸಿದರೂ ಯಾವುದು ಕೈ ಹಿಡಿಯಲಿಲ್ಲ. ಅಂತಿಮವಾಗಿ 1950 ರಲ್ಲಿ ಮಿಸ್ಟರ್ ಯುನಿವರ್ಸ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದುಕೊಂಡರು.

ಮಾಡೆಲ್ ಆಗಿ ತೆರೆಗೆ ಬಂದು ಅಲ್ಲಿಂದ ನಿರಂತರ ಪರಿಶ್ರಮದಿಂದ ಬೆಳ್ಳಿತೆರೆ ಮೇಲೆ ಮಿಂಚಿದ ಕ್ಯಾನರಿ ಇನ್ನು ನೆನಪು ಮಾತ್ರ.