ಕಾರಿನೊಳಗೆ ಸರಸ ಸಲ್ಲಾಪದಲ್ಲಿ ತೊಡಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಹಲವು ಘಟನೆಗಳಿವೆ. ಇಲ್ಲೊಂದು ಜೋಡಿ ನದಿ ಪಕ್ಕದಲ್ಲಿ ಕಾರು ನಿಲ್ಲಿಸಿ ರೊಮ್ಯಾನ್ಸ್‌ನಲ್ಲಿ ತೊಡಗಿದೆ. ಆದರೆ ಅಚಾನಕ್ಕಾಗಿ ಕಾಲು ಗೇರ್ ಲಿವರ್‌ಗೆ ತಾಗಿದ ಕಾರಣ ಏಕಾಏಕಿ ಕಾರು ಚಲಿಸಿ ನದಿ ಉರುಳಿ ಬಿದ್ದಿದೆ. ಈ ವಿಡಿಯೋ ಸದ್ದು ಮಾಡುತ್ತಿದೆ.

ಫಿಲಡೆಲ್ಫಿಯ(ಆ.30) ರಸ್ತೆ ಬದಿ, ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಸರಸದಲ್ಲಿ ತೊಡಗಿದ ಹಲವು ಘಟನೆಗಳು ನಡೆದಿದೆ. ಈ ಕುರಿತ ಹಲವು ವಿಡಿಯೋಗಳು ಹರಿದಾಡಿದೆ. ಇದೀಗ ಇಂತದ್ದೆ ಫಜೀತಿಯ ವಿಡಿಯೋ ಒಂದು ಬಾರಿ ಸದ್ದು ಮಾಡುತ್ತಿದೆ. ಜೋಡಿ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ ಆಗಮಿಸಿದೆ. ನದಿಯ ಪಕ್ಕದಲ್ಲಿರುವ ರಸ್ತೆಯಲ್ಲೇ ಕಾರು ನಿಲ್ಲಿಸಿ ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾರೆ. ಕಾರಿನ ಹಿಂಭಾಗದ ಸೀಟಿನಲ್ಲಿನಲ್ಲಿ ರೊಮ್ಯಾನ್ಸ್‌ನಲ್ಲಿರುವಾಗ ಅಚಾನಕ್ಕಾಗಿ ಕಾಲು ಕಾರಿನ ಗೇರ್ ಲಿವರ್‌ಗೆ ತಾಗಿದೆ. ಪರಿಣಾಮ ಕಾರು ಏಕಾಏಕಿ ಚಲಿಸಿ ನದಿಗೆ ಉರುಳಿ ಬಿದ್ದ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಭಾರಿ ಚರ್ಚೆ ಹಾಗೂ ಕಮೆಂಟ್ಸ್‌ಗೆ ಮೂಲವಾಗಿದೆ.

ಕಾರಿನಲ್ಲಿ ಬೆಳಗಿನ ಜಾವ ಡ್ರೈವ್ ಹೊರಟ ಜೋಡಿ ಮನೋಹರ ತಾಣಕ್ಕೆ ಆಗಮಿಸುತ್ತಿದ್ದಂತೆ ರೊಮ್ಯಾನ್ಸ್ ಮನಸ್ಸಾಗಿದೆ. ನದಿ, ಹಸುರಿನ ಪರಿಸರ ನೋಡಿದ ಈ ಜೋಡಿ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ ನದಿ ಕೆಲ ದೂರದಲ್ಲಿ ಕಾರು ನಿಲ್ಲಿಸಿದ್ದಾರೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ ಈ ಜೋಡಿ ಸರಿಸುಮಾರು ಬೆಳಗ್ಗೆ 4.15ರ ವೇಳೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. 

ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!

ರೇಂಜ್ ರೋವರ್ ಕಾರಿನ ಹಿಂಬದಿ ಸೀಟಿಗೆ ತೆರಳಿದ ಈ ಜೋಡಿ ರೊಮ್ಯಾನ್ಸ್‌ನಲ್ಲಿ ಮೈಮರೆತಿದ್ದಾರೆ. ಆದರೆ ಇದರ ನಡುವೆ ಅಚಾನಕ್ಕಾಗಿ ಕಾಲು ಕಾರಿನ ಗೇರ್ ಲಿವರ್‌ಗೆ ತಾಗಿದೆ. ಆಟೋಮ್ಯಾಟಿಕ್ ಕಾರಾಗಿರುವ ಕಾರಣ ಕಾಲು ತಾಗಿದ ಭರದಲ್ಲಿ ರಿವರ್ಸ್ ಗೇರ್‌ಗೆ ಲಿವರ್ ಬಿದ್ದಿದೆ. ತಕ್ಷಣವೇ ಕಾರು ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.

Scroll to load tweet…

ಒಂದು ನಿಮಿಷ ಈ ಜೋಡಿಗೆ ಏನಾಗುತ್ತಿದೆ ಎಂದು ಗೊತ್ತಾಗಿಲ್ಲ. ಆದರೆ ಹೆಚ್ಚು ಸಮಯವೂ ಇರಲಿಲ್ಲ. ಕಾರಣ ಕಾರು ಪಕ್ಕದಲ್ಲಿದ್ದ ನದಿಯಲ್ಲಿ ಚಲಿಸಲು ಆರಂಭಿಸಿದೆ. ತಕ್ಷಣವೇ ಸರಸದಲ್ಲಿದ್ದ ಈ ಜೋಡಿ ಎಚ್ಚೆತ್ತುಕೊಂಡಿದೆ. ಇನ್ನೇನು ಕಾರು ನದಿಗೆ ಉರುಳುವ ಮುನ್ನ ಕಾರಿನಿಂದ ಹೊರಗೆ ಹಾರಿದ್ದಾರೆ. ಇದರ ಪರಿಣಾಮ ಇವರಿಬ್ಬರ ಜೀವ ಉಳಿದಿದೆ.

Viral Video ಡ್ರೈವ್ ಮಾಡುವಾಗಲೇ ಸರಸ ಸಲ್ಲಾಪ, ಪೊಲೀಸರಿಗೆ ಅತಿಥಿಯಾದ ಲವರ್ಸ್!

ಇತ್ತ ಕಾರು ತುಂಬಿ ಹರಿಯುತ್ತಿರುವ ನದಿಗೆ ಬಿದ್ದಿದೆ. ಸಣ್ಣ ಪುಟ್ಟ ತರಚಿದ ಗಾಯಗಳಿಂದ ಜೋಡಿ ಅಪಾಯದಿಂದ ಪಾರಾಗಿದೆ. ತಕ್ಷಣವೇ ಪೊಲೀಸರಿಗೆ ಈ ಜೋಡಿ ಕರೆ ಮಾಡಿದ್ದಾರೆ. ರಕ್ಷಣಾ ತಂಡದೊಂದಿಗೆ ಆಗಮಿಸಿದ ಪೊಲೀಸರು ಕ್ರೇನ್ ಸಹಾಯದಲ್ಲಿ ನೀರಿನಲ್ಲಿ ಮುಳುಗಿದ ರೇಂಜ್ ರೋವರ್ ಕಾರನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಘಟನೆ ಕುರಿತು ವಿವರಣೆ ಕೇಳಿದ್ದಾರೆ. ಈ ವೇಳೆ ನಡೆದ ಘಟನೆ ವಿವರಿಸಿದ ಜೋಡಿ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.