ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡಿ ಹಲವು ಜೋಡಿಗಳ ವಿಡಿಯೋ ವೈರಲ್ ಆಗಿದೆ. ಇದೀಗ ನಡು ರಸ್ತೆಯಲ್ಲೇ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ಜೋಡಿ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಜೋಡಿ ಸ್ಥಳದಿಂದ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಮತ್ತೊಂದು ಪಜೀತಿ ಎದುರಾಗಿದೆ.
ರೊಮ್ಯಾಂಟಿಕ್ ದೃಶ್ಯ ನೋಡಲು ಇದೀಗ ಸಿನಿಮಾಗಾಗಿ ಕಾಯಬೇಕಿಲ್ಲ. ಕಣ್ಣರಳಿಸಿ ನೋಡಿದರೆ ಸಾಕು, ಪಾರ್ಕ್, ಬಸ್ ನಿಲ್ದಾಣ, ರೈಲು ಪ್ರಯಾಣ ಸೇರಿದಂತೆ ಎಲ್ಲೆಡೆ ಜೋಡಿಗಳ ರೊಮ್ಯಾನ್ಸ್ ಕಾಣಸಿಗುತ್ತದೆ. ಇದೀಗ ನಡು ರಸ್ತೆಯಲ್ಲಿ ಜೋಡಿ ರೊಮ್ಯಾಂಟಿಕ್ ಮೂಡ್‌ಗೆ ಇಳಿದ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಸಾಗುವ ವಾಹನಗಳು ಒಂದು ಕ್ಷಣ ಈ ಜೋಡಿ ಬಳಿ ನಿಧಾನಮಾಡಿ ಸಾಗುತ್ತಿರುವುದನ್ನು ಗಮನಿಸಿದ ಈ ಜೋಡಿ ಸ್ಥಳಿಂದ ಎಸ್ಕೇಪ್ ಆಗಲು ಮುಂದಾಗಿದೆ. ಸಿನಿಮಾ ಶೈಲಿಯಲ್ಲಿ ಯುವತಿಯನ್ನು ಎತ್ತಿಕೊಂಡು ವೇಗವಾಗಿ ನಡೆದ ಈತ ಕೆಲ ದೂರ ತೆರಳುತ್ತಿದ್ದಂತೆ ದೊಪ್ಪನೆ ಬಿದ್ದಿದ್ದಾರೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.
ಜೋಡಿಯೊಂದು ಬೀದಿ ಬದಿಯಲ್ಲೇ ತಬ್ಬಿಕೊಂಡು ನಿಂತಿದೆ. ವಾಹನಗಳು, ದಾರಿಹೋಕರು ಇವರನ್ನು ಗಮನಿಸುತ್ತಾ ತೆರಳುತ್ತಿದ್ದಾರೆ. ಈ ವೇಳೆ ಯುವಕ ಎಚ್ಚೆತ್ತುಕೊಂಡಿದ್ದಾನೆ. ತಕ್ಷಣ ಯುವತಿಯನ್ನು ಎತ್ತಿಕೊಂಡು ಸಾಗಿದ್ದಾರೆ. ಆದರೆ ಸ್ಥಳದಿಂದ ತಕ್ಷಣ ಎಸ್ಕೇಪ್ ಆಗಲು ಈತ ವೇಗ ಹೆಚ್ಚಿಸಿದ್ದಾನೆ. ಆದರೆ ಕೆಲ ದೂರ ತೆರಳುತ್ತಿದ್ದಂತೆ ಇಬ್ಬರು ನೆಲಕ್ಕುರುಳಿದ್ದಾರೆ.
ಶಿವ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲೇ ಜೋಡಿಯ ರೊಮ್ಯಾನ್ಸ್ ದೃಶ್ಯ ಸೆರೆ, ಭಕ್ತರ ಆಕ್ರೋಶ!
ಆದರೆ ಮೂಲಗಳ ಪ್ರಕಾರ ಇಬ್ಬರು ನಶೆಯಲ್ಲಿ ತೇಲಾಡಿದ್ದಾರೆ. ಈ ಪೈಕಿ ಯುವತಿಯ ನಶೆ ಹೆಚ್ಚಾಗಿದೆ. ಹೀಗಾಗಿ ಯುವತಿಗೆ ಸರಿಯಾಗಿ ನಿಲ್ಲಲು ಸಾಧ್ಯವಾಗಿಲ್ಲ. ಯುವಕನ ತಬ್ಬಿಕೊಂಡು ನಿಲ್ಲಲು ಪ್ರಯತ್ನಿಸುತ್ತಿದ್ದಾಳೆ. ಇಷ್ಟೇ ಅಲ್ಲ ತಾನು ನಶೆಯಲ್ಲಿಲ್ಲ ಎಂದು ಸಾಬೀತು ಪಡಿಸಲು ಸ್ವತಂತ್ರವಾಗಿ ನಿಲ್ಲಲು ಯತ್ನಿಸುತ್ತಿದ್ದಾಳೆ. ಆದರೆ ಯಾವುದು ಕೈಗೂಡುತ್ತಿಲ್ಲ.
ಇತ್ತ ಸಾರ್ವಜನಿಕರು ಗಮನಿಸುತ್ತಿದ್ದಾರೆ ಎಂದು ಯುವಕನ ಅರಿವಿಗೆ ಬಂದಿದೆ. ವಾಹನದಲ್ಲಿ ಸವಾರರು ಕಮೆಂಟ್ ಪಾಸ್ ಮಾಡುತ್ತಾ ಸಾಗುತ್ತಿದ್ದಾರೆ. ಹೀಗಾಗಿ ಮತ್ತಷ್ಟು ನಗೆಪಾಟಲೀಗೀಡಾಗುವುದನ್ನು ತಪ್ಪಿಸಲು ಯುವಕ, ಧೈರ್ಯ ಮಾಡಿ ಯುವತಿಯನ್ನು ಕೈಗಳಿಂದ ಎತ್ತಿಕೊಂಡಿದ್ದಾರೆ. ಸಿನಿಮಾ ರೀತಿಯಲ್ಲಿ ಯುವತಿಯನ್ನು ಎತ್ತಿಕೊಂಡು ವೇಗಾಗಿ ಸ್ಥಳದಿಂದ ತೆರಳಿದ್ದಾನೆ.
ಆದರೆ ಕೆಲ ದೂರ ತೆರಳುತ್ತಿದ್ದಂತೆ ಯುವಕ ಆಯತಪ್ಪಿದ್ದಾನೆ. ಹೀಗಾಗಿ ಇಬ್ಬರು ದೊಪ್ಪನೆ ಬಿದ್ದಿದ್ದಾರೆ. ಮೊದಲೆ ನಶೆಯಲ್ಲಿದ್ದ ಜೋಡಿಗೆ ಬಿದ್ದ ರಭಸಕ್ಕೆ ಮೆಲೇಳಲು ಕೆಲ ಹೊತ್ತು ಬೇಕಾಕಿದೆ. ಜೊತೆಗೆ ಸಣ್ಣ ಪುಟ್ಟ ಗಾಯಗಳು ಆಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಗೆ ಬಗೆಯ ಕಮೆಂಟ್ ವ್ಯಕ್ತವಾಗಿದೆ.
ಹೊಟೆಲ್‌ನಲ್ಲಿ ಎಲ್ಲರ ಮುಂದೆ ಜೋಡಿಯ ಖುಲ್ಲಂ ಖುಲ್ಲಾ ಸೆಕ್ಸ್, ವೈರಲ್ ವಿಡಿಯೋ ಬೆನ್ನಲ್ಲೇ ಅರೆಸ್ಟ್!
