ವಿದ್ಯಾರ್ಥಿಯನ್ನು ಶೂನಿಂದ ಥಳಿಸಿದ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್: ವಿಡಿಯೋ ವೈರಲ್
ಥಳಿತಕ್ಕೊಳಗಾದ ವ್ಯಕ್ತಿ ತನ್ನ ಶಿಷ್ಯ ಎಂದು ಜನಪ್ರಿಯ ಕವ್ವಾಲಿ ಗಾಯಕ ಹೇಳಿಕೊಂಡಿದ್ದು, ವೈರಲ್ ವಿಡಿಯೋದಲ್ಲಿನ ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಇಸ್ಲಾಮಾಬಾದ್ (ಜನವರಿ 28, 2024): ಪಾಕಿಸ್ತಾನಿ ಪ್ರಸಿದ್ಧ ಗಾಯಕ ರಾಹತ್ ಫತೇಹ್ ಅಲಿ ಖಾನ್ ತನ್ನ ವಿದ್ಯಾರ್ಥಿಯೊಬ್ಬರಿಗೆ ಶೂನಿಂದ ಥಳಿಸಿರುವುದು ಹಾಗೂ ಕಪಾಳಕ್ಕೆ ಹಲವು ಬಾರಿ ಹೊಡೆದಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಈ ವಿಡಿಯೋ ವೈರಲ್ ಆಗಿದ್ದು, ಆದರೂ ಸಹ ಖ್ಯಾತ ಗಾಯಕ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಥಳಿತಕ್ಕೊಳಗಾದ ವ್ಯಕ್ತಿ ತನ್ನ ಶಿಷ್ಯ ಎಂದು ಜನಪ್ರಿಯ ಕವ್ವಾಲಿ ಗಾಯಕ ಹೇಳಿಕೊಂಡಿದ್ದು, ವೈರಲ್ ವಿಡಿಯೋದಲ್ಲಿನ ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಾಟಲ್‌ವೊಂದರ ಬಗ್ಗೆ ವಿಚಾರಿಸುತ್ತಾ ಪದೇ ಪದೇ ಹೊಡೆಯುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಈ ವಿಡಿಯೋ ತೋರಿಸುತ್ತದೆ. ತನಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಆ ವ್ಯಕ್ತಿ ಗಾಯಕನಿಗೆ ಮನವಿ ಮಾಡುತ್ತಿರುವುದು ಸಹ ಕಂಡುಬರುತ್ತದೆ. ಇನ್ನೊಂದು ದೃಶ್ಯದಲ್ಲಿ ವಿದ್ಯಾರ್ಥಿಯನ್ನು ರಕ್ಷಿಸಲು ಕೆಲವರು ಗಾಯಕನನ್ನು ಎಳೆದು ತರಲು ಯತ್ನಿಸುತ್ತಿರುವುದು ಕಂಡುಬಂದಿದೆ.
ಪಾಕಿಸ್ತಾನವನ್ನು ಜಗತ್ತಿನಿಂದ್ಲೇ ನಿರ್ನಾಮ ಮಾಡಲಾಗುವುದು: ತಾಲಿಬಾನ್ ಪ್ರತಿಜ್ಞೆ!
ಪಾಕಿಸ್ತಾನಿ ಪ್ರಸಾರಕರಾದ ಸಮಾ ಟಿವಿ, ವ್ಯಕ್ತಿಯನ್ನು ತನ್ನ ಉದ್ಯೋಗಿ ಎಂದು ಗುರುತಿಸಿದೆ ಮತ್ತು ಗಾಯಕರಲ್ಲಿ ಇಂತಹ ಹಿಂಸಾತ್ಮಕ ನಡವಳಿಕೆಯು ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಹೇಳಿದೆ. ಈ ಮಧ್ಯೆ, ಪ್ರಸಿದ್ಧ ಕವ್ವಾಲಿ ಗಾಯಕ ನುಸ್ರತ್ ಫತೇಹ್ ಅಲಿ ಖಾನ್ ಅವರ ಸೋದರಳಿಯ ರಾಹತ್ ಫತೇಹ್ ಅಲಿ ಖಾನ್, ಇದು "ಉಸ್ತಾದ್ ಮತ್ತು ಅವರ ಶಾಗಿರ್ದ್ (ಶಿಕ್ಷಕ ಮತ್ತು ಶಿಷ್ಯ)" ನಡುವಿನ ವೈಯಕ್ತಿಕ ವಿಷಯ ಎಂದು ಸ್ಪಷ್ಟಪಡಿಸಿದರು.
ಹಾಗೂ, ಥಳಿಸಲ್ಪಟ್ಟ ವ್ಯಕ್ತಿಯನ್ನು ಒಳಗೊಂಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಜೊತೆಗೆ ಆತನ ತಂದೆ ಸಹ ಮಗನ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಸ್ಪಷ್ಟಪಡಿಸೋ ಪ್ರಯತ್ನ ಮಾಡಿದ್ದಾರೆ. ಇದು ಉಸ್ತಾದ್ ಮತ್ತು ಶಾಗಿರ್ದ್ ನಡುವಿನ ವೈಯಕ್ತಿಕ ಸಮಸ್ಯೆ, ಅವನು ನನ್ನ ಮಗನಿದ್ದಂತೆ, ಶಿಕ್ಷಕ ಮತ್ತು ಶಿಷ್ಯನ ನಡುವಿನ ಸಂಬಂಧ ಹೀಗಿರುತ್ತದೆ. ಒಬ್ಬ ಶಿಷ್ಯನು ಏನಾದರೂ ಒಳ್ಳೆಯದನ್ನು ಮಾಡಿದರೆ, ನಾನು ಅವನ ಮೇಲೆ ನನ್ನ ಪ್ರೀತಿಯನ್ನು ಸುರಿಸುತ್ತೇನೆ, ಅವನು ಏನಾದರೂ ತಪ್ಪು ಮಾಡಿದರೆ. ಆತನಿಗೆ ಶಿಕ್ಷೆಯಾಗುತ್ತದೆ ಎಂದೂ ಹೇಳಿದ್ದಾರೆ.
ರಾಮಮಂದಿರ ಪ್ರಾಣಪ್ರತಿಷ್ಠೆಯಿಂದ ಪಾಕಿಸ್ತಾನಕ್ಕೆ ಪ್ರಾಣಸಂಕಟ, ಮಧ್ಯಪ್ರವೇಶಕ್ಕೆ ವಿಶ್ವಸಂಸ್ಥೆಗೆ ಮನವಿ!
ಜತೆಗೆ, ಘಟನೆಯ ನಂತರ ಅವನಲ್ಲಿ ಕ್ಷಮೆಯನ್ನೂ ಕೇಳಿದ್ದೇನೆ ಎಂದು ರಾಹತ್ ಫತೇಹ್ ಅಲಿ ಖಾನ್ ಹೇಳಿದ್ದಾರೆ. ಇನ್ನೊಂದೆಡೆ, ಸ್ಪಷ್ಟೀಕರಣದ ವೀಡಿಯೊದಲ್ಲಿ, ಥಳಿತಕ್ಕೊಳಗಾದ ವ್ಯಕ್ತಿ ತಾನು ಪವಿತ್ರ ನೀರನ್ನು ಹೊಂದಿರುವ ಬಾಟಲಿಯನ್ನು ತಪ್ಪಾಗಿ ಇರಿಸಿದ್ದಾಗಿ ಒಪ್ಪಿಕೊಂಡಿದ್ದು, ಇದು ಘಟನೆಗೆ ಕಾರಣವಾಯಿತು ಎಂದಿದ್ದಾರೆ. ಆದರೆ ತನ್ನ ಕ್ರಿಯೆಗಳ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಅವರು ನನ್ನ ತಂದೆಯಂತೆ. ಅವರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ. ಈ ವಿಡಿಯೋವನ್ನು ಯಾರು ವೈರಲ್ ಮಾಡ್ತಿದ್ದಾರೋ ಅವರು ನನ್ನ ಉಸ್ತಾದ್ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಮದು ವಿಡಿಯೋ ವೈರಲ್ ಮಾಡಿದವರ ಮೇಲೆ ಟೀಕೆ ಮಾಡಿದ್ದಾರೆ.
ಥಳಿತಕ್ಕೊಳಗಾದ ವ್ಯಕ್ತಿಯ ತಂದೆ ಕೂಡ ರಾಹತ್ ಫಾತೇಹ್ ಅಲಿ ಖಾನ್ ರನ್ನು ಬೆಂಬಲಿಸಿದ್ದು, ಕವ್ವಾಲಿ ಕ್ಷೇತ್ರದಲ್ಲಿ 'ಉಸ್ತಾದ್ ಮತ್ತು ಶಾಗಿರ್ದ್' ನಡುವಿನ ಸಂಬಂಧವನ್ನು ಎತ್ತಿ ತೋರಿಸಿದರು.