Asianet Suvarna News Asianet Suvarna News

ಹಿಂದು ದೇಗುಲಕ್ಕೆ ಪಾಕಿಸ್ತಾನದಲ್ಲಿ ಬೆಂಕಿ: 30 ದುರುಳರು ಅರೆಸ್ಟ್‌

ಪಾಕಿಸ್ತಾನದಲ್ಲಿನ  ನಡೆದ ಹಿಂದೂ ದೇವಾಸ್ಥಾನ ದ್ವಂಸದಲ್ಲಿ ಪಾಲ್ಗೊಂಡ 30 ಮಂದಿ ದುರುಳರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Radical Islamist party 30 members Arrested For Damaging Hindu Temple In Pakistan kvn
Author
Peshawar, First Published Jan 1, 2021, 11:04 AM IST

ಪೇಷಾವರ(ಜ.01): ದೇವಸ್ಥಾನವೊಂದರ ನವೀಕರಣ ಹಾಗೂ ವಿಸ್ತರಣೆ ವಿರೋಧಿಸಿ ಪಾಕಿಸ್ತಾನದ ಇಸ್ಲಾಮಿಕ್‌ ಮೂಲಭೂತವಾದಿ ಪಕ್ಷವೊಂದರ ಸದಸ್ಯರು ದೇಗುಲವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿರುವ ಘಟನೆ ನಡೆದಿದೆ. 

ಈ ಪ್ರಕರಣ ಸಂಬಂಧ ಜಮಿಯಾತ್‌ ಉಲೇಮಾ ಎ ಇಸ್ಲಾಮ್‌ ಪಕ್ಷದ ಕೇಂದ್ರೀಯ ನಾಯಕ ರೆಹಮತ್‌ ಸಲಾಂ ಖಟ್ಟಕ್‌ ಸೇರಿದಂತೆ 30 ಮಂದಿಯನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. 

ಖೈಬರ್‌ ಪಖ್ತೂಂಖ್ವಾ ಪ್ರಾಂತ್ಯದ ಕಾರಕ್‌ ಜಿಲ್ಲೆಯ ಟೆರ್ರಿ ಎಂಬ ಗ್ರಾಮದಲ್ಲಿ ದೇಗುಲವೊಂದರ ವಿಸ್ತರಣೆ ಹಾಗೂ ನವೀಕರಣ ಕಾರ್ಯ ನಡೆಯುತ್ತಿತ್ತು. ಹೊಸದಾಗಿ ಕಟ್ಟಲಾದ ಭಾಗವನ್ನು ಉರುಳಿಸಿದ್ದ ಈ ಕಿಡಿಗೇಡಿಗಳು, ದೇಗುಲಕ್ಕೆ ಬೆಂಕಿ ಹಚ್ಚಿದ್ದರು. ಇದು ಹಿಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಗಡಿ ಮಸೀದಿಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಗುಂಡಿನ ದಾಳಿ

ಶ್ರೀನಗರ: ಹೊಸ ವರ್ಷದ ಮುನ್ನಾ ದಿನ ಪಾಕಿಸ್ತಾನ ಪಡೆಗಳು ಜಮ್ಮು- ಕಾಶ್ಮೀರದ ಕುಪ್ವಾರ ಮತ್ತು ರಜೌರಿ ಜಿಲ್ಲೆಯ ಗಡಿ ಗ್ರಾಮಗಳ ಮಸೀದಿಗಳು ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. 

ಪಾಕ್ ಪರ ಘೋಷಣೆ ಹಿಂದಿನ ಕಾರಣ ಹೇಳಿದ ಮುತಾಲಿಕ್

ಗುರುವಾರ ಮಧ್ಯಾಹ್ನ 3.15 ಗಂಟೆಗೆ ಪಾಕ್‌ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಮಾರ್ಟರ್‌ ಹಾಗೂ ಶೆಲ್‌ಗಳಿಂದ ದಾಳಿ ನಡೆಸಿವೆ. 2020ರಲ್ಲಿ ಪಾಕ್‌ ಪಡೆಗಳು ಜಮ್ಮು- ಕಾಶ್ಮೀರದಲ್ಲಿ ಒಟ್ಟು 5,100 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಇದು ಕಳೆದ 18 ವರ್ಷಗಳಲ್ಲೇ ಅಧಿಕವಾಗಿದೆ. ಪಾಕಿಸ್ತಾನದ ದಾಳಿಗೆ ಈ ವರ್ಷ 24 ಭದ್ರತಾ ಸಿಬ್ಬಂದಿ ಸೇರಿದಂತೆ 36 ಮಂದಿ ಮೃತಪಟ್ಟಿದ್ದು, 130 ಮಂದಿ ಗಾಯಗೊಂಡಿದ್ದಾರೆ.

Follow Us:
Download App:
  • android
  • ios