ವಾಷಿಂಗ್ಟನ್(ಮೇ.31): ಆಫ್ರಿಕನ್‌ ಅಮೆರಿಕನ್‌ ಪ್ರಜೆ ಜಾಜ್‌ರ್‍ ಫ್ಲೋಯ್ಡ್‌ ಎಂಬಾತನ ಸಾವು ಖಂಡಿಸಿ ಅಮೆರಿಕದ ಮಿನ್ನೆಸೋಟಾ ರಾಜ್ಯದಲ್ಲಿ 2 ದಿನಗಳ ಹಿಂದೆ ಆರಂಭವಾಗಿದ್ದ ಪ್ರತಿಭಟನೆ ಇದೀಗ ಜನಾಂಗೀಯ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಅಕ್ಕಪಕ್ಕದ ಹಲವು ರಾಜ್ಯಗಳಿಗೂ ಪ್ರತಿಭಟನೆ, ಹಿಂಸಾಚಾರ ವ್ಯಾಪಿಸಿದ್ದು ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ.

ಈ ನಡುವೆ ಹಿಂಸಾಚಾರ ನಿಯಂತ್ರಣಕ್ಕೆ ಮಿನ್ನೆಸೋಟಾದಲ್ಲಿ ಶಾಂತಿಸಮಯದ ತುರ್ತುಪರಿಸ್ಥಿತಿ ಹೇರಲಾಗಿದೆ. ಜೊತೆಗೆ ಹಲವು ರಾಜ್ಯಗಳಲ್ಲಿ ರಾತ್ರಿ ಕಫ್ರ್ಯೂ ಘೋಷಿಸಲಾಗಿದೆ. ಆದರೂ ಹಿಂಸಾಚಾರ ನಿಯಂತ್ರಣಕ್ಕೆ ಬರುವ ಯಾವುದೇ ಸುಳಿವು ಕಾಣುತ್ತಿಲ್ಲ. ಹೀಗಾಗಿ ಸೇನೆಯ ಪೊಲೀಸರನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ.

ಚೀನಾಗೆ ಅಮೆರಿಕ ಸೆಡ್ಡು: ಎರಡು ಯುದ್ಧನೌಕೆ ರವಾನೆ

ಈ ನಡುವೆ ಫ್ಲೋಯ್ಡ್‌ ಸಾವಿಗೆ ಕಾರಣಕರ್ತರಾದ ಪೊಲೀಸ್‌ ಅಧಿಕಾರಿ ಡೆರಿಕ್‌ ಚುವಾನ್‌ ವಿರುದ್ಧ ಹತ್ಯೆಯ ಆರೋಪ ಹೊರಿಸಲಾಗಿದ್ದು, ಹುದ್ದೆಯಿಂದ ಅಮಾನತು ಮಾಡಿ ಬಂಧಿಸಲಾಗಿದೆ. ಆದರೆ ಪ್ರತಿಭಟನಾಕಾರರು, ಘಟನೆ ನಡೆದಾಗ ಸ್ಥಳದಲ್ಲಿದ್ದ ಎಲ್ಲಾ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿ, ಹೋರಾಟ ಮುಂದುವರೆಸಿದ್ದಾರೆ.

ಪೊಲೀಸ್‌ ಅಧಿಕಾರಿ ದರ್ಪ:

ಜಾಜ್‌ರ್‍ ಫ್ಲೋಯ್ಡ್‌ ವಿರುದ್ಧ ಕಳೆದ ಸೋಮವಾರ ಮಳಿಗೆಯೊಂದರಲ್ಲಿ 20 ಡಾಲರ್‌ನ ಕಳ್ಳನೋಟು ಬಳಸಿದ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಲು ಹೋಗಿದ್ದ ವೇಳೆ ಆತ ಪ್ರತಿರೋಧ ತೋರಿದ್ದ. ಈ ವೇಳೆ ನಾಲ್ವರು ಪೊಲೀಸರು ಆತನನ್ನು ಕಾರಿನಿಂದ ಹೊರಕ್ಕೆಳೆದು ಬಂಧಿಸಲು ಮುಂದಾಗಿದ್ದರು. ಈ ವೇಳೆ ಡೆರಿಕ್‌ ಚುವಾನ್‌ ಎಂಬ ಪೊಲೀಸ್‌ ಅಧಿಕಾರಿ ಕೆಳಗೆ ಬಿದ್ದಿದ್ದ ಫ್ಲೋಯ್ಡ್‌ನ ಕುತ್ತಿಗೆ ಮೇಲೆ 7 ನಿಮಿಷಗಳ ಕಾಲ ತಮ್ಮ ಮಂಡಿ ಒತ್ತಿಹಿಡಿದಿದ್ದರು. ಪರಿಣಾಮ ಆತ ಸಾವನ್ನಪ್ಪಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಫ್ಲೋಯ್ಡ್‌ ಉಸಿರುಗಟ್ಟಿಸಾವನ್ನಪ್ಪಿದ ಯಾವುದೇ ಕುರುಹು ಸಿಕ್ಕಿಲ್ಲವಾದರೂ, ಕಪ್ಪುವರ್ಣೀಯರು ಘಟನೆಯಿಂದ ಸಿಟ್ಟಿಗೆದ್ದಿದ್ದಾರೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಕಪ್ಪುವರ್ಣೀಯ ಸಮುದಾಯದ ಜನ ಮಿನ್ನೆಸೋಟಾ, ಫೀನಿಕ್ಸ್‌, ಲಾಸ್‌ವೇಗಾಸ್‌, ಡೆನ್ವೆರ್‌, ಅಟ್ಲಾಂಟಾ, ಲಾಸ್‌ ಏಂಜಲೀಸ್‌, ಹೂಸ್ಟನ್‌, ಕೊಲರಾಡೋ, ಓಹಿಯೋ, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರ ಆರಂಭವಾಗಿದೆ. ಶ್ವೇತವರ್ಣೀಯ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮುಂದುವರೆಸಿದ್ದಾರೆ ಎಂದು ಆರೋಪಿಸಿರುವ ಕಪ್ಪುವರ್ಣೀಯ ಸಮುದಾಯ, ಮಾಲ್‌, ಹೋಟೆಲ್‌, ಮಳಿಗೆಗಳು, ವಾಹನಗಳಿಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಪೊಲೀಸರು ಮತ್ತು ಅವರ ವಾಹನಗಳ ಮೇಲೆ ಕಲ್ಲು ತೂರಿ, ಬೆಂಕಿ ಹಚ್ಚಲಾಗುತ್ತಿದೆ. ಅಲ್ಲದೆ ಹಲವು ನಗರಗಳಲ್ಲಿ ಶಾಂತಿಯುತ ಪ್ರತಿಭಟನೆ ಮೂಲಕ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಈ ನಡುವೆ ಪ್ರತಿಭಟನಾಕಾರರು ಲೂಟಿಯಂಥ ಕೃತ್ಯಕ್ಕೆ ಇಳಿದರೆ ಅವರ ಮೇಲೆ ಗುಂಡು ಹಾರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ.

ಪೊಲೀಸ್‌ ಅಧಿಕಾರಿಗೆ ಪತ್ನಿಯಿಂದ ವಿಚ್ಛೇದನ!

ಫೆä್ಲೕಯ್ಡ್‌ ಕಾರಣನಾದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಪೊಲೀಸ್‌ ಅಧಿಕಾರಿ ಡೆರಿಕ್‌ ಚುವಾನ್‌ಗೆ ವಿಚ್ಛೇದನ ನೀಡುವುದಾಗಿ ಪತ್ನಿ ಘೋಷಿಸಿದ್ದಾರೆ. ಫೆä್ಲೕಯ್ಡ್‌ ಹತ್ಯೆಯಿಂದ ನೋವಾಗಿದೆ. ಹೀಗಾಗಿ ಡೆರಿಕ್‌ ಬಂಧನದ ದಿನವೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಮಾಜಿ ಮಿಸ್‌ ಮಿನ್ನೆಸೋಟಾ ಕೂಡ ಆಗಿರುವ ಕೆಲ್ಲಿ ಚುವಾನ್‌ ತಿಳಿಸಿದ್ದಾರೆ.