Asianet Suvarna News Asianet Suvarna News

ಇಂಗ್ಲೆಂಡ್ ರಾಣಿ ಸದಾ ಕಾಲ ಧರಿಸ್ತಿದ್ದ ಈ ನೆಕ್ಲೇಸ್‌ ಭಾರತ ಮೂಲದ್ದು

6 ವರ್ಷಗಳ ಸುಧೀರ್ಘ ಜೀವನ ನಡೆಸಿ ನಿನ್ನೆ ನಿಧನರಾದ ಎಲಿಜಬೆತ್ ಒಂದು  ರೀತಿ ಫ್ಯಾಷನ್ ಐಕಾನ್ ಆಗಿದ್ದವರು. ಇವರ ಬಳಿ ಜಗತ್ತಿನೆಲ್ಲೆಡೆಯ ಅತ್ಯಂತ ದುಬಾರಿ ಆಭರಣಗಳ ಸಂಗ್ರಹವಿದೆ. ಈ ದುಬಾರಿ ಆಭರಣಗಳಲ್ಲಿ ಒಂದಾದ ನೆಕ್ಲೇಸ್ ಒಂದನ್ನು ಹೈದರಾಬಾದ್ ನಿಜಾಮ ರಾಣಿಗೆ 1947ರ ಸಮಯದಲ್ಲಿ ಉಡುಗೊರೆಯಾಗಿ ನೀಡಿದ್ದ.  

Queen Elizabeth's one of precious necklace was a gift by Hyderabad nizam at her wedding akb
Author
First Published Sep 9, 2022, 10:35 AM IST

96 ವರ್ಷಗಳ ತುಂಬು ಜೀವನ ನಡೆಸಿ ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ ಬ್ರಿಟನ್ ರಾಜಮನೆತನದ ಕೊನೆ ರಾಣಿ ಎಲಿಜಬೆತ್ 2 ವ್ಯಕ್ತಿತ್ವ ವರ್ಣರಂಜಿತವಾದುದು. 96 ವರ್ಷಗಳ ಸುಧೀರ್ಘ ಜೀವನ ನಡೆಸಿ ನಿನ್ನೆ ನಿಧನರಾದ ಎಲಿಜಬೆತ್ ಒಂದು  ರೀತಿ ಫ್ಯಾಷನ್ ಐಕಾನ್ ಆಗಿದ್ದವರು. ಇವರ ಬಳಿ ಜಗತ್ತಿನೆಲ್ಲೆಡೆಯ ಅತ್ಯಂತ ದುಬಾರಿ ಆಭರಣಗಳ ಸಂಗ್ರಹವಿದೆ. ಈ ದುಬಾರಿ ಆಭರಣಗಳಲ್ಲಿ ಒಂದಾದ ನೆಕ್ಲೇಸ್ ಒಂದನ್ನು ಹೈದರಾಬಾದ್ ನಿಜಾಮ ರಾಣಿಗೆ 1947ರ ಸಮಯದಲ್ಲಿ ಉಡುಗೊರೆಯಾಗಿ ನೀಡಿದ್ದ.  

ಬ್ರಿಟಿಷ್ ವಸಾಹತುಶಾಹಿ ಆಡಳಿತದ ವೇಳೆ ಹೈದರಾಬಾದ್‌ನ ನಿಜಾಮನಾಗಿದ್ದ 7ನೇ ಅಸಫ್ ಜಾ VII, ಈ  ನೆಕ್ಲೇಸ್ ಅನ್ನು ರಾಣಿಗೆ ಮದುವೆ ಉಡುಗೊರೆಯಾಗಿ ನೀಡಿದ್ದ. ಹೈದರಬಾದ್ ನಿಜಾಮನು ಆ ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬನಾಗಿದ್ದು, ರಾಜಕುಮಾರಿಗೆ ಅತ್ಯಂತ ದುಬಾರಿ ಉಡುಗೊರೆಯನ್ನು ನೀಡಿದ್ದ ಎಂದು ತಿಳಿದು ಬಂದಿದೆ. 

Queen Elizabeth II Passes Away: ದೀರ್ಘ ಅವಧಿಯ ಕಾಲ ಬ್ರಿಟನ್‌ ರಾಣಿಯಾಗಿದ್ದ ಎಲಿಜಬೆತ್ II ನಿಧನ

ನಿಜಾಮನು ಈ ಗಿಫ್ಟ್ ನೀಡುವ ಮೂಲಕ ಆಭರಣ ಪ್ರೇಮಿಯೊಬ್ಬಳ ಕನಸನ್ನು ನನಸಾಗಿಸಿದೆ. ತನ್ನ ಸಂಗ್ರಹದಲ್ಲಿರುವ ದುಬಾರಿ ಆಭರಣಗಳಲ್ಲಿ ಉಡುಗೊರೆಯಾಗಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವಂತೆ ಹೈದರಾಬಾದ್ ನಿಜಾಮ ಆಗ ಬ್ರಿಟನ್ ರಾಜಕುಮಾರಿಯಾಗಿದ್ದ ಎಲಿಜಬೆತ್‌ಗೆ (Princess Elizabeth) ಹೇಳಿದ್ದ. ಅಂದು ಉಡುಗೊರೆಯಾಗಿ ಪಡೆದ ನೆಕ್ಲೇಸ್ (necklace) ಅನ್ನು ನೋಡಿದರೆ ರಾಣಿ ಸರ್ವಕಾಲಕ್ಕೂ ಅತ್ಯುತ್ತಮವೆನಿಸುವ ಉಡುಗೊರೆಯನ್ನು ರಾಣಿ ಪಡೆದಿದ್ದಾರೆ ಎಂದೆನಿಸದೇ ಇರದು.

ರಾಜಕುಮಾರಿ ಎಲಿಜಬೆತ್ ತನ್ನ ಮದುವೆಯ ಉಡುಗೊರೆಯನ್ನು ಸ್ವತಃ ತಾನೇ ಆಯ್ಕೆ ಮಾಡಬೇಕೆಂದು ಲಂಡನ್‌ನಲ್ಲಿರುವ ಕಾರ್ಟಿಯರ್ ಸಂಸ್ಥೆಗೆ ನಿಜಾಮ್ ಸೂಚನೆಗಳನ್ನು ನೀಡಿದ. ನಂತರ ರಾಣಿ ಸರಿಸುಮಾರು 300 ವಜ್ರಗಳನ್ನು ಹೊಂದಿರುವ ಈ ಪ್ಲಾಟಿನಂ ನೆಕ್ಲೇಸ್ ಅನ್ನು ಆಯ್ಕೆ ಮಾಡುತ್ತಾಳೆ. ನಂತರ ರಾಣಿ ತನ್ನ ಆಳ್ವಿಕೆಯ ಉದ್ದಕ್ಕೂ ಈ ನೆಕ್ಲೇಸ್ ಅನ್ನು ಧರಿಸಿರುವುದನ್ನು ಕಾಣಬಹುದು. ಮುಂದೆ ಅದನ್ನು ಆಕೆ ಕೇಂಬ್ರಿಡ್ಜ್‌ನ (Cambridge) ಡಚೆಸ್‌ಗೆ (Queen) ಎರವಲು ನೀಡಿದ್ದರು. 

Queen Elizabeth II Passes Away: 10 ದಿನದ ನಂತರ ರಾಣಿಯ ಅಂತ್ಯಕ್ರಿಯೆ, ಹೊಸ ರಾಜನ ಕೈಗೆ ಮುತ್ತುಕೊಟ್ಟು ಸ್ವಾಗತ!

ಇಷ್ಟೇ ಅಲ್ಲದೇ ಹೈದರಾಬಾದ್ ನಿಜಾಮ (Hyderabad nizam) ರಾಣಿಗೆ ಹೈದರಾಬಾದ್‌ನ ಪ್ರಖ್ಯಾತ ಕಿರೀಟವನ್ನು ನೀಡಿದ್ದರು. ಈ ಹೈದರಾಬಾದ್ ತಿಯಾರಾ (Hyderabad Tiara) ಕಿರೀಟವೂ ಇಂಗ್ಲೀಷ್‌ ರೋಸ್ ಜೊತೆ ಮೂರು ಬೇರ್ಪಡಿಸಬಹುದಾದ ಹೂಗಳಂತ ಬ್ರೂಚ್‌ಗಳ (floral brooches) ವಿನ್ಯಾಸವನ್ನು ಹೊಂದಿತ್ತು, ಜೊತೆಗೆ ಪ್ಲಾಟಿನಂನಿಂದ ನಿರ್ಮಿತವಾದ ಈ ಕಿರೀಟದಲ್ಲಿ ಡೈಮಂಡ್ ಅನ್ನು ಸಂಯೋಜಿಸಲಾಗಿತ್ತು. ಈ ಎರಡೂ ಉಡುಗೊರೆಗಳನ್ನು ಪ್ಲಾಟಿನಂನಲ್ಲಿ ಹೊಂದಿಸಲಾದ ವಜ್ರಗಳಿಂದ (diamonds) ಮಾಡಲಾಗಿತ್ತು. 1935 ರಲ್ಲಿ ಕಾರ್ಟಿಯರ್ ತಯಾರಿಸಿದ ನೆಕ್ಲೇಸ್  ಹೂವಿನ ವಿನ್ಯಾಸದಲ್ಲಿ (floral design) ಹೆಚ್ಚು ವಜ್ರಗಳನ್ನು ಒಳಗೊಂಡ ಸಂಕೀರ್ಣವಾದ ಕೆತ್ತನೆಯನ್ನು ಹೊಂದಿದೆ.

ಎಲಿಜಬೆತ್ ಅವರು 70 ವರ್ಷಗಳ ಕಾಲ ಬ್ರಿಟನ್‌ನ ಆಳ್ವಿಕೆ ನಡೆಸಿದರು. ರಾಜಮನೆತನದ ಕುಟುಂಬ, ರಾಣಿಯ ಮಗ ಹಾಗೂ ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಮತ್ತು ಅವರ ಕುಟುಂಬಗಳು - ಸ್ಕಾಟಿಷ್ ಹೈಲ್ಯಾಂಡ್ಸ್ನಲ್ಲಿರುವ ಅವರ ಬಾಲ್ಮೋರಲ್ ನಿವಾಸದಲ್ಲಿ ರಾಣಿಯ ಕೊನೆಯ ಗಳಿಗೆಯಲ್ಲಿ ಜೊತೆಯಾಗಿದ್ದರು. ರಾಣಿ ಇದೇ ನಿವಾಸದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಬ್ರಿಟನ್‌ ದೇಶವನ್ನು 70 ವರ್ಷಗಳ ಕಾಲ ಆಳಿದ್ದರ ಗುರುತಿನ ಸಲುವಾಗಿ ಕಳೆದ ಜೂನ್‌ನಲ್ಲಿ ಕ್ವೀನ್ಸ್‌ ಪ್ಲಾಟಿನಂ ಜ್ಯುಬಿಲಿಯನ್ನೂ ವಿಜೃಂಭಣೆಯಿಂದ ಇಂಗ್ಲೆಂಡ್‌ನಲ್ಲಿ ಆಚರಣೆ ಮಾಡಲಾಗಿತ್ತು. 2015ರಲ್ಲಿ, ರಾಣಿ ಎಲಿಜಬೆತ್ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾ ಅವರ ಅವಧಿಯನ್ನು ಮೀರಿಸುವ ಮೂಲಕ ಸುದೀರ್ಘ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎನಿಸಿಕೊಂಡಿದ್ದರು. 

 

Follow Us:
Download App:
  • android
  • ios